ಭಾನುವಾರ , ಏಪ್ರಿಲ್ 28 2024
kn
Breaking News

Daily Archives: ಜುಲೈ 14, 2022

ತಿಗಡಿ ಗ್ರಾಮದಲ್ಲಿನ ವಿದ್ಯುತ್ ಟ್ರಾನ್ಸಫರ್ಮ‌ರ ದುರಸ್ಥಿ ಮಾಡುವಾಗ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವು

ಮೂಡಲಗಿ: ತಾಲೂಕಿನ ತಿಗಡಿ ಗ್ರಾಮದಲ್ಲಿನ ವಿದ್ಯುತ್ ಟ್ರಾನ್ಸಫರ್ಮ‌್ರನಲ್ಲಿ ದುರಸ್ಥಿ ಮಾಡುವ ಸಂದರ್ಭದಲ್ಲಿ ಆಕಸ್ಮಿಕ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವನ್ನಪ್ಪಿರು ಘಟನೆ ಗುರುವಾರ ಸಂಜೆ ಜರುಗಿದೆ. ತಿಗಡಿ ಗ್ರಾಮದ ಹತ್ತಿರ ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸಫಾರ್ಮರನಲ್ಲಿ (ಟಿ.ಸಿ) ದುರಸ್ತಿ ವೇಳೆಯಲ್ಲಿ ತಿಗಡಿ ಹೆಸ್ಕಾಂ ಶಾಖೆಯ ಸಿಬ್ಬಂದಿ ನಿಂಗಪ್ಪ ಕರಿಗೌಡರ್ (೩೮) ಟ್ರಾನ್ಸಫಾರ್ಮರ್ ಮೇಲೆಯೇ ಸಾವನ್ನಪಿದು. ಎಲ್ಲವನ್ನೂ ಸರಿಯಾಗಿ ಚಕ್ ಮಾಡಿಕೊಂಡೆ ಕೆಲಸ ಶುರು ಮಾಡಿದ್ದ ಲೈನ್ ಮ್ಯಾನ್, ಆದರೆ ಏಕಾಏಕಿ ವಿದ್ಯುತ್ …

Read More »

ಐಸಿಐಸಿ ಬ್ಯಾಂಕಿನಿoದ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ-ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಐಸಿಐಸಿಐ ಬ್ಯಾಂಕ್ ಭಾರತದ ದೊಡ್ಡ ೪ ಬ್ಯಾಂಕುಗಳಲ್ಲಿ ಒಂದಾಗಿದ್ದು, ಮೂಡಲಗಿ ತಾಲ್ಲೂಕು ಪ್ರದೇಶದಲ್ಲಿ ಈ ಬ್ಯಾಂಕ್ ನ ಶಾಖೆಯನ್ನು ತೆರೆದಿರುವುದು ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಸೊನವಾಲ್ಕರ ಕಟ್ಟಡದಲ್ಲಿ ಆರಂಭವಾಗಿರುವ ಐಸಿಐಸಿಐ ಬ್ಯಾಂಕ್‌ನ್ನು ಗುರುವಾರದಂದು ಉದ್ಘಾಟಿಸಿ ಮಾತನಾಡಿದ ಅವರು, ಈ ಬ್ಯಾಂಕಿನಿoದ ಗ್ರಾಹಕರಿಗೆ ಒಳ್ಳೆಯದಾಗಬೇಕು. ಅದರಲ್ಲೂ ರೈತ ಸಮುದಾಯಕ್ಕೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು …

Read More »

ಸಿದ್ದರಾಮಯ್ಯನವರ ಅಮೃತ ಮಹೋತ್ಸವದ ಸಂಘಟನಾ ಕಾರ್ಯದರ್ಶಿಯಾಗಿ ಅರವಿಂದ ದಳವಾಯಿ

ಮೂಡಲಗಿ: ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು,ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ೭೫ನೇ ವರ್ಷದ ಜನ್ಮದಿನದ ನಿಮಿತ್ಯ ಅಮೃತ ಮಹೋತ್ಸವವನ್ನು ಅ.೩ರಂದು ೧೧ ಗಂಟೆಗೆ ದಾವಣಗೆರೆ ನಗರದಲ್ಲಿ ಆಚರಣೆ ಮಾಡಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸೇರಿದಂತೆ ಪಕ್ಷದ ಎಲ್ಲ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮ ಸಂಘಟಿಸಲು ರಚಿಸಲಾದ ರಾಜ್ಯಮಟ್ಟದ …

Read More »

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಭೇಟಿ

ಮೂಡಲಗಿ: ಮುಂಬೈನಲ್ಲಿ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿ ಮಾಡಿ ಶುಭಕೋರಿದರು. ಈ ಸಮಯದಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವಿನ ಸಂಬoಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಚರ್ಚಿಸಲಾಯಿತು. ಹಾಗೂ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಯ್ನಾ ಜಲಾಶಯದಿಂದ ಹರಿಬಿಡುವ ನೀರಿನ ಪ್ರಮಾಣದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

Read More »

ಕಿನ್ನಾಳ ಕಲೆಯ ಜೊತೆಗೆ ಕಲಾವಿದರೂ ಬೆಳೆಯಬೇಕು – ಪಿ.ಜಿ.ಆರ್. ಸಿಂಧ್ಯಾ

. ಕೊಪ್ಪಳ : ಕಿನ್ನಾಳ ಕಲೆ ಎಂಬುದು ವಿಜಯನಗರ ಸಾಮ್ರಾಜ್ಯದ ಕಾಲದಿಂದ ಇಂದಿನವರೆಗೂ ಕೊಂಚವೂ ಬದಲಾಗದೇ ತನ್ನ ಮೂಲ ಸ್ವರೂಪವನ್ನೇ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಇದೊಂದು ಅಪರೂಪದ ಕಲೆಯಾಗಿದ್ದು ಜಗತ್ಪಪ್ರಸಿದ್ಧವಾದುದಾಗಿದೆ.ವಿಜಯನಗರ ಸಾಮ್ರಾಜ್ಯ ಅಳಿದಮೇಲೆ ಅಲ್ಲಿಂದ ಪಲಾಯನ ಮಾಡಿದ ಹಲವರಲ್ಲಿ ಕೆಲ ಕಲಾವಿದರು ಕಿನ್ನಾಳಿಗೆ ವಲಸೆ ಬಂದರು. ಹಾಗೆ ಬಂದವರಲ್ಲಿ ಸಂಜೀವಪ್ಪರೆAಬುವರು ಒಬ್ಬರು. ಇಲ್ಲಿಯ ದೇಸಾಯಿಯವರ ಆಶ್ರಯ ದೊರೆತು ಇಲ್ಲಿಯೇ ನೆಲೆ ನಿಂತರು. ಹೀಗೆ ಕಿನ್ನಾಳಿಗೆ ಬಂದ ಈ ಕಲಾವಿದರು …

Read More »

ಸೇವಾ ಮನೋಭಾವದ ಸ್ಕೌಟ್ಸ್ ಮತ್ತು ಗೈಡ್ಸ್ ತ್ಯಾಗದ ಮತ್ತೊಂದು ಶಬ್ಧ : ಪಿ.ಜಿ.ಆರ್.ಸಿಂಧ್ಯಾ

ಕೊಪ್ಪಳ: ಸೇವಾ ಮನೋಭಾನೆಯಿಂದ ಶ್ರಮಿಸುತ್ತಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ತ್ಯಾಗದ ಮತ್ತೊಂದು ಶಬ್ದವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಅವರು ಹೇಳಿದರು. ಕೊಪ್ಪಳ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಕೊಪ್ಪಳ ಸಂಸ್ಥೆಯ ಸಹಯೋಗದಲ್ಲಿ ಭಾಗ್ಯನಗರದ ಪಾನಗಂಟಿ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ಆಯೋಜಿಸಲಾಗಿದ್ದ “ಜಿಲ್ಲಾ ಮಟ್ಟದ ಸಮಾವೇಶ’’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು …

Read More »

You cannot copy content of this page