ಬುಧವಾರ , ಡಿಸೆಂಬರ್ 11 2024
kn
Breaking News

Recent Posts

ಜಾತಿ, ಧರ್ಮ, ಭಾಷೆಗಳು ಎಲ್ಲರೂ ಸಮನಾಗಿ ಹೊಂದಿಕೊಳ್ಳಬೇಕು: ಅನ್ನ ದಾನೇಶ್ವರ ಸ್ವಾಮಿಜಿ

ಹಳ್ಳೂರ: ಪ್ರತಿಯೊಬ್ಬ ವ್ಯಕ್ತಿಯು ಮಹಾತ್ಮರ ಆಧ್ಯಾತ್ಮದ ಚಿಂತನೆ, ಶಾಂತಿ, ಉಪದ್ದೇಶ, ಅವರ ಜೀವನ ಸಾಧನೆಯನ್ನು ಎಲ್ಲರೂ ಅಳವಡಿಸಿಕೊಂಡು ಮಹಾತ್ಮರ, ಶರಣರ, ಗುರು ಹಿರಿಯರ ಮಾರ್ಗದರ್ಶನದಂತೆ ಎಲ್ಲರೂ ಪ್ರೇರಿಪಿಸಬೇಕೆಂದು ಕಲಿಯುಗದ ಕರುಣಾಕರ, ಸುಕ್ಷೇತ್ರ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ಶ್ರೀ ಅನ್ನ ದಾನೇಶ್ವರ ಸ್ವಾಮಿಜಿಗಳು ಹೇಳಿದರು. ಸ್ಥಳೀಯ ಶ್ರೀ ಮಾಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಮಂಗಳವಾರರಂದು ನಡೆದ 14ನೇ ಮಹಾಲಕ್ಷ್ಮೀ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ …

Read More »

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು ರೋಗದಿಂದ ರಕ್ಷಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸೂಚನೆ ನೀಡಿದರು. ಗುರುವಾರದಂದು ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಚರ್ಮ ಗಂಟು ರೋಗ(ಲಂಪಿ ಸ್ಕಿನ್ ಡಿಸೀಜ್)ದ ಕಿಟ್‌ಗಳನ್ನು ತಮ್ಮ ಸ್ವಂತ ವೆಚ್ಚದಲ್ಲಿ ವಿತರಿಸಿ ಮಾತನಾಡಿದ ಅವರು, ವೈದ್ಯಾಧಿಕಾರಿಗಳು ಜಾನುವಾರುಗಳ ಬಗ್ಗೆ ಆಲಕ್ಷö್ಯ ಮಾಡದೇ …

Read More »

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

ಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, ಈ ಸಮಾಜಗಳ ಮೀಸಲಾತಿ ಬೇಡಿಕೆಗಳಿಗೆ ಸರ್ಕಾರದ ಮಟ್ಟದಲ್ಲಿ ನಾನು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂದು ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಪಟ್ಟಣದ ಬಸವ ಮಂಟಪದಲ್ಲಿ ಶನಿವಾರದಂದು ಜರುಗಿದ ಕಿತ್ತೂರು ಚನ್ನಮ್ಮ ಯುವಕ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದವರು 2ಎ ಮೀಸಲಾತಿ ಸಂಬoಧ ಹಲವು ದಿನಗಳಿಂದ ಹೋರಾಟಕ್ಕೆ …

Read More »

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

ಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡಿರುವುದನ್ನು ಸ್ವಾಗತಿಸುತ್ತೇವೆ, ಬಾಲಚಂದ್ರ ಜಾರಕಿಹೊಳಿ ಅವರು ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಮಾಜಿ ಎಮ್.ಎಲ್.ಸಿ ಎಚ್.ಸಿ.ನೀರಾವರಿ ಅವರ ನೇತೃತ್ವದಲ್ಲಿ ಉಪ್ಪಾರ ಸಮಾಜಕ್ಕೆ ಎಸ್.ಸಿ/ಎಸ್.ಟಿ ಮಿಸಲಾತಿಗಾಗಿ ಮನವಿ ನೀಡಿದ್ದೇವು ಆಗಲೇ ಅವರು ಶಿಪಾರಸ್ಸು ಮಾಡಿದ್ದರೆ ಈಗ ಪ್ರತಿಭಟನೆ ಮಾಡುವ ಅವಶ್ಯಕತೆ ಬರುತ್ತಿರಲಿಲ್ಲಿ, ಈಗಲಾದರೂ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ …

Read More »

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

ಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ ಪಿಂಚಣಿ ಯೋಜನೆಯ ವಿರುದ್ದ ಹೋರಾಟವನ್ನು ಹಮ್ಮಿಕೊಳ್ಳುವುದರ ಮೂಲಕ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು. ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ವತಿಯಿಂದ …

Read More »

ಡಾ.ಆನಂದ್‍ಕುಮಾರ್ ಗೆಭಾರತ ರತ್ನ ಡಾ.ಅಬ್ದುಲ್ ಕಲಾಂ ಪ್ರಶಸ್ತಿ, ಬಂಗಾರದ ಪದಕ

ಹುಬ್ಬಳ್ಳಿ: ಸಿಟಿಜನ್ಸ್ ಇಂಟಿಗ್ರೇಷನ್ ಪೀಸ್ ಇನ್ಸ್‍ಟಿಟ್ಯೂಷನ್ ಸಂಸ್ಥೆ ವತಿಯಿಂದ ನವದೆಹಲಿಯಲ್ಲಿಂದು ನಡೆದ ರಾಷ್ಟ್ರೀಯ ಸಮಾರಂಭದಲ್ಲಿ ಸಮಾಜಸೇವೆಗಾಗಿ ಭಾರತ ರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿ ಹಾಗೂ ಬಂಗಾರದ ಪದಕವನ್ನು ಮಾನಸ ಗ್ರೂಪ್ ಸಂಸ್ಥೆ ಅಧ್ಯಕ್ಷರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಾ.ಆನಂದ್‍ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಿಟಿಜನ್ಸ್ ಇಂಟಿಗ್ರೇಷನ್ ಪೀಸ್ ಇನ್ಸ್‍ಟಿಟ್ಯೂಷನ್ ಸಂಸ್ಥೆ ಪದಾಧಿಕಾರಿಗಳು ಮುಂತಾದವರಿದ್ದರು.

Read More »

ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಸಂಘಟನೆಯ ಮೂಡಲಗಿ ತಾಲೂಕಾಧ್ಯಕ್ಷರಾಗಿ ಶಶಿಕುಮಾರ ದೊಡಮನಿ ಆಯ್ಕೆ

ಮೂಡಲಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಧ್ವನಿ ಸಂಘಟನೆಯ ಮೂಡಲಗಿ ತಾಲೂಕಾಧ್ಯಕ್ಷರಾಗಿ ಶಶಿಕುಮಾರ ದೊಡಮನಿ ಅವರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷರಾದ ಚಂದ್ರಕಾoತ ಕಾದ್ರೋಳ್ಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಸಂಘಟನೆಯಲ್ಲಿ ಬಾಬಾಸಾಹೇಬರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು,ಸಂಘಟನೆಯ ವಿರೂಧ ಚಟುವಟಿಕೆ ಕಂಡು ಬಂದರೆ ತಕ್ಷಣದಿಂದ ತೆಗೆಯಲಾಗುವದು. ಸಮಾಜದಲ್ಲಿ ನಡೆಯುವ ದೌರ್ಜನ್ಯ ದಬ್ಬಾಳಿಕೆ ಬ್ರಷ್ಟಾಚಾರಕ್ಕೆ ಕಡಿವಾನ ಹಾಕಬೇಕು. ಸಾರ್ವಜನಿಕರಿಗೆ ಉಪಯುಕ್ತ ಕಾರ್ಯಗಳನ್ನು ಮಾಡುವ ಮೂಲಕ ಸಂಘಟನೆಗೆ ಬಲ ತುಂಬಬೇಕು ಎಂದು ತಿಳಿಸಿದ್ದಾರೆ.

Read More »

ಗುರುವಿನ ಸೇವೆ ಸ್ಮರಿಸಿ ಗುರುಗಳನ್ನು ಗೌರವಿಸುವುದು ಶ್ರೇಷ್ಠ ಕೆಲಸ:ಗಜಾನನ ಮನ್ನಿಕೇರಿ

ಮೂಡಲಗಿ: ಗುರುವಿನ ಸೇವೆ ಸ್ಮರಿಸಿ ಗುರುಗಳನ್ನು ಗೌರವಿಸುವುದು ಶ್ರೇಷ್ಠ ಕೆಲಸ ಎಂದು ಧಾರವಾಡದ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು. ಇಲ್ಲಿನ ಕೇಳಕರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿರುವ ಸನ್ 2002- 2003 ನೆಯ ಸಾಲಿನ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ತಂದೆ-ತಾಯಿ ಹಾಗೂ ಗುರುವಿನ ಸ್ಮರಣೆ ಮಾಡುವುದರಿಂದ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಹೊರಹೊಮ್ಮುತ್ತಾರೆ. ಹೀಗಾಗಿ ಗುರುವಿನ ಸ್ಮರಣೆ ಮಾಡುವುದು ಅವಶ್ಯಕವಾಗಿದೆ …

Read More »

ಉಪ್ಪಾರ ಸಮಾಜದಿಂದ ಅ.೨೧ರಂದು ಸಾಂಕೇತಿಕವಾಗಿ ಮೂಡಲಗಿ ಪಟ್ಟಣದಲ್ಲಿ ತಹಶೀಲ್ದಾರ ಮೂಲಕ ಸಿಎಂ ಅವರಿಗೆ ಮನವಿ: ಬಿ ಬಿ ಹಂದಿಗುoದ

ಮೂಡಲಗಿ: ಉಪ್ಪಾರ ಸಮಾಜವನ್ನು ಎಸಿ-ಎಸ್ಟಿಗೆ ಸೇರಿಸಬೇಕೆಂಬ ಉದ್ದೇಶದಿಂದ ಅನೇಕ ವರ್ಷಗಳ ಕಾಲದಿಂದಲೂ ಹೋರಾಟ ಮಾಡುತ್ತಾ ಬಂದಿದ್ದು, ಸರ್ಕಾರ ನಮ್ಮ ಹೋರಾಟಕ್ಕೆ ಇಲ್ಲಿಯವರೆಗೂ ಸ್ಪಂದಿಸಿಲ್ಲ ಆದರಿಂದ ತಾಲೂಕಿನ ಉಪ್ಪಾರ ಸಮಾಜದಿಂದ ಅ.೨೧ರಂದು ಸಾಂಕೇತಿಕವಾಗಿ ಸುಮಾರು ಹತ್ತು ಸಾವಿರ ಜನ ಮೂಡಲಗಿ ಪಟ್ಟಣದ ಕಲ್ಮೇಶ್ವರ ವೃತ್ತದಲ್ಲಿ ಸೇರಿ ತಹಶೀಲ್ದಾರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಲಾಗುವುದೆಂದು ಎಂದು ಸಮಾಜ ಹಿರಿಯ ಮುಖಂಡ ಬಿ ಬಿ ಹಂದಿಗುoದ ಹೇಳಿದರು. ಶನಿವಾರದಂದು ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ …

Read More »

ತಂತ್ರಾoಶಯುಕ್ತ ಆಡಳಿತದಲ್ಲಿ ಪ್ರಮುಖವಾಗಿ ಗಣಕಯಂತ್ರದ ಜ್ಞಾನ ಅತ್ಯಾವಶ್ಯಕವಾಗಿದೆ : ಬಿಇಒ ಮನ್ನಿಕೇರಿ

ಮೂಡಲಗಿ : ಇಂದಿನ ತಂತ್ರಾoಶಯುಕ್ತ ಆಡಳಿತದಲ್ಲಿ ಪ್ರಮುಖವಾಗಿ ಗಣಕಯಂತ್ರದ ಜ್ಞಾನ ಅತ್ಯಾವಶ್ಯಕವಾಗಿದೆ. ಶಿಕ್ಷಣ ಇಲಾಖೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ಲಿಪಿಕ ನೌಕರರ ಕೊಡುಗೆ ಅಪಾರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು. ಅವರು ಪಟ್ಟಣದ ಕೆ.ಎಚ್ ಸೋನವಾಲಕರ ಸರಕಾರಿ ಪ್ರೌಢ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕಾ ಲಿಪಿಕ ನೌಕರ ಸಂಘಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಎಫ್.ಡಿ.ಎ ಮತ್ತು ಎಸ್.ಡಿ.ಎ ಸಿಬ್ಬಂದಿಗಳಿಗೆ ತಂತ್ರಜ್ಞಾನ ಆಧಾರಿತ ಆಡಳಿತಾತ್ಮಕ ತರಬೇತಿಯ ಒಂದು ದಿನದ …

Read More »

You cannot copy content of this page