ಸೋಮವಾರ , ಸೆಪ್ಟೆಂಬರ್ 9 2024
kn
Breaking News

ಸರ್ಕಾರಿ ನೌಕರಿ ಆಮೀಷ : ಡೋಂಗಿ ಬಾಬಾ ಅಂದರ್!! ಇವ್ಹಿಎo ಸ್ವಾಮಿಯ ಕರ್ಮಕಾಂಡ ಬಯಲು, ಇಂತಹ ದೇಶದ್ರೋಹಿ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಲಿ

Spread the love

ಮೂಡಲಗಿ : ಸರ್ಕಾರಿ ನೌಕರಿ ಮಾಡಿಸಿಕೊಡುತ್ತೇನೆ ಎಂದು ಹೇಳಿ ಅಮಾಯಕರಿಂದ ಕೋಟ್ಯಾಂತರ ರೂಪಾಯಿ ಟೋಪಿ ಹಾಕಿರುವ ಖತರ್ನಾಕ್ ಸ್ವಾಮಿಯನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಹಳ್ಳೂರ ಗ್ರಾಮದ ಅಲ್ಲಮಪ್ರಭು ಹಿರೇಮಠ ಬಂಧನಕ್ಕೀಡಾಗಿರುವ ವಂಚಕ ಸ್ವಾಮಿಯಾಗಿದ್ದು, ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ.
ಹಣಕಾಸು ವ್ಯವಹಾರ, ಮೋಸ, ವಂಚನೆ ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ಕಾರಿ ಹಾಗೂ ಇನ್ನೀತರ ಸಂಘ-ಸoಸ್ಥೆಗಳಲ್ಲಿ ನೌಕರಿ ಕೊಡಿಸುವ ನೆಪದಲ್ಲಿ ಬೆಳಗಾವಿ, ಬಾಗಲಕೋಟಿ, ವಿಜಯಪುರ, ಧಾರವಾಡ ಜಿಲ್ಲೆ, ಮಹಾರಾಷ್ಟç, ಗೋವಾ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ನಿರುದ್ಯೋಗಿ ಯುವಕರಿಗೆ ಟೋಪಿ ಹಾಕುತ್ತಿದ್ದ ಖತರ್ನಾಕ್ ಸ್ವಾಮಿಯಾದ ಅಲ್ಲಮಪ್ರಭು ಹಿರೇಮಠ ಅವನಿಗೆ ಹಣ ನೀಡಿದವರು ಕೇಳಲು ಹೋದ ನೋಂದ ಯುವಕರು ಹಾಗೂ ಅವರ ಕುಟುಂಬಸ್ಥರಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ, ಹಲ್ಲೆ ಮಾಡಿದ ಆರೋಪ ಮೋಸ, ವಂಚನೆ ಪ್ರಕರಣಕ್ಕೆ ಸಂಬoಧಿಸಿದoತೆ ಮೂಡಲಗಿ ಪೊಲೀಸರು ಸ್ವಾಮಿಯನ್ನು ಬಂಧಿಸಿ ಹಿಂಡಲಗಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಮೂಲತಃ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದವರಾದ ಅಲ್ಲಮಪ್ರಭು ಹಿರೇಮಠ ಅವರು ನೂರಾರು ಯುವಕರಿಗೆ ಪಂಗನಾಮ ಹಾಕುತ್ತಿದ್ದ. ತನಗೆ ಎಲ್ಲ ರಾಜಕೀಯ ನಾಯಕರ ಸಂಪರ್ಕವಿದ್ದು, ನನ್ನ ದೂರವಾಣಿ ಕರೆ ಹೋದ ಕೂಡಲೇ ಗಢಗಢ ನಡಗುತ್ತಾರೆ. ನಿಮ್ಮ ಕೆಲಸ ಆಗುವುದು ನಿಶ್ಚಿತ. ನಿಮಗೆ ನೀವು ಬಯಸಿದ ಸ್ಥಳದಲ್ಲಿ ನೌಕರಿ ಕೊಡಿಸುತ್ತೇನೆ ಎಂದು ನೋಂದ ನಿರುದ್ಯೋಗ ಯುವಕರಿಗೆ ನಂಬಿಕೆ ಬರುವಂತೆಯೇ ಹೇಳುತ್ತಿದ್ದ ವಂಚಕ ಸ್ವಾಮಿಯು ಕೆಲ ದಿನಗಳಿಂದ ಮೂಲ ಸ್ಥಳದಿಂದ ನಾಪತ್ತೆಯಾಗಿದ್ದನೆಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಕನ್ನಡ ಖಾಸಗಿ ವಾಹಿನಿಯೊಂದು ನಡೆಸಿದ 47 ನಿಮಿಷಗಳ ಸ್ತ್ರಿಂಗ್ ಆಪರೇಷನ್‌ದಲ್ಲಿ ಈ ಖತರ್ನಾಕ ಸ್ವಾಮಿಯ ಕರ್ಮಕಾಂಡವನ್ನು ಬಯಲು ಮಾಡಿದೆ. ಇವ್ಹಿಎಂ ಬಾಬಾ ಎಂದೇ ಖ್ಯಾತರಾಗಿರುವ ಅಲ್ಲಮಪ್ರಭು ಹಿರೇಮಠ ಅವನನ್ನು ಬಿಬಿಎಂಪಿ ಚುನಾವಣೆಯ ಸಂಬoಧ ಸ್ಟ್ರಿಂಗ್ ಆಪರೇಷನ್‌ಗೆ ಒಳಪಡಿಸಿತ್ತು. ಜೊತೆಗೆ ಇವ್ಹಿಎಂ ಹ್ಯಾಕ್ ಮಾಡತೀವಿ. ಚುನಾವಣೆ ಆಕಾಂಕ್ಷಿಗಳೇ ಇತನ ಟಾರ್ಗೇಟ್ ಆಗಿದ್ದು, ಬಿಬಿಎಂಪಿ ಚುನಾವಣೆಯಲ್ಲಿ ಯಾರನ್ನೇ ನಿಲ್ಲಿಸಿದರೂ ಅವರನ್ನು ನಾನೇ ಗೆಲ್ಲಿಸಿಕೊಡ್ತೀನಿ. ಅದಕ್ಕಾಗಿ 3 ಕೋಟಿ ರೂ. ನೀಡಬೇಕು. ಮೊದಲಿಗೆ ಅರ್ಧದಷ್ಟು ಹಣವನ್ನು ನೀಡಬೇಕೆಂದು ಚುನಾವಣಾ ಆಕಾಂಕ್ಷಿಗಳಿಗೆ ಹೇಳಿರುವ ಮಾತುಗಳು ಈಗಾಗಲೇ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ. ಬೇಕಾದವರನ್ನು ಗೆಲ್ಲಿಸಿಕೊಡ್ತಿನಿ. ಬೇಡವಾದವರನ್ನು ಸೋಲಿಸುವ ಶಕ್ತಿ ನನಗಿದೆ. ನನ್ನೊಂದಿಗೆ ಅಭಿಷೇಕ ರಾಜನ್ ಪಾಂಡೆ ಮತ್ತೀತರ ಇವ್ಹಿಎಂ ಹ್ಯಾಕ್ ಮಾಡುವ ತಂಡವೇ ಇದೆ ಎಂದು ಹೇಳಿಕೊಂಡಿದ್ದನೆoದು ತಿಳಿದುಬಂದಿದೆ.

ಕಳೆದ 4 ತಿಂಗಳ ಹಿಂದೆ ಮಧ್ಯಪ್ರದೇಶದಲ್ಲಿ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬoಧಿಸಿದoತೆ ಖತರ್ನಾಕ್ ಅಲ್ಲಮಪ್ರಭು ಹಿರೇಮಠ ಅವರನ್ನು ಅಲ್ಲಿನ ಪೊಲೀಸ್‌ರು ಬಂಧಿಸಿರುವ ಘಟನೆಯು ಕೂಡ ನಡೆದಿದೆ. ಬೋಗಸ್ ಪಿಎಚ್‌ಡಿ ಪ್ರಮಾಣ ಪತ್ರವನ್ನು ಹೊಂದಿರುವ ಈ ಸ್ವಾಮಿ ಎಲ್ಲ ಕಡೆಗಳಲ್ಲೂ ಅಕ್ರಮ ಚಟುವಟಿಕೆಗಳ ಬೋಗಸ್ ದಂಧಾ ನಡೆಸುತ್ತಿರುವುದು ಕೂಡ ತಿಳಿದುಬಂದಿದೆ.

ಇವ್ಹಿಎo ಮಸೀನ್ ಹ್ಯಾಕ್ ಮಾಡುವ ದೇಶದ್ರೋಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ನಯವಂಚಕ ಸ್ವಾಮಿಗೆ ದೇಶ ದ್ರೋಹ ಆಧಾರದ ಮೇಲೆ ತಕ್ಕ ಶಿಕ್ಷೆಯಾಗಬೇಕು. ಈಗಾಗಲೇ ಇವ್ಹಿಎಂ ಮಸೀನ್ ಹ್ಯಾಕ್ ಮಾಡುವ ಟೀಮ್ ಒಂದನ್ನು ಕಟ್ಟಿಕೊಂಡು ಚುನಾವಣಾ ಆಕಾಂಕ್ಷಿಗಳಿoದ ಹಣ ಸುಲಿಗೆ ಮಾಡುತ್ತಿರುವ ಇಂತಹ ಡೋಂಗಿ ಬಾಬಾಗೆ ತಕ್ಕ ಶಿಕ್ಷೆಯಾಗಬೇಕು. ದೊಡ್ಡ ಪ್ರಮಾಣದ ಜಾಲ ಈ ಸ್ವಾಮಿ ಬಳಿ ಇದ್ದು ಇವನನ್ನು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಆಗಿರಲಿ. ಅವರಿಗೆ ತಕ್ಕ ಶಿಕ್ಷೆಯಾಗಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page