ಶನಿವಾರ , ಜುಲೈ 20 2024
kn
Breaking News

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the love

ಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ ಪಿಂಚಣಿ ಯೋಜನೆಯ ವಿರುದ್ದ ಹೋರಾಟವನ್ನು ಹಮ್ಮಿಕೊಳ್ಳುವುದರ ಮೂಲಕ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ,ರಾಜ್ಯ ಸರಕಾರವು ೨೦೦೬ ರ ಎಪ್ರೀಲ್ ೧ ರ ನಂತರ ನೇಮಕಗೊಂಡ ನೌಕರರಿಗೆ ಜಾರಿಗೆ ಮಾಡಲಾಗಿರುವ ಎನ್.ಪಿ.ಎಸ್.ಯೋಜನೆಯು ಅತ್ಯಂತ ಮಾರಕವಾದ ಯೋಜನೆಯಾಗಿದೆ.ಭದ್ರತೆ ಇಲ್ಲದ ಯೋಜನೆಯನ್ನು ಸರಕಾರಿ ನೌಕರರ ಮೇಲೆ ಹೆರಲಾಗಿದೆ.ಸರಕಾರವು ಎನ್.ಪಿ.ಎಸ್.ಯೋಜನೆಯನ್ನು ಜಾರಿಗೆ ಮಾಡುವ ಮೂಲಕ ಹಳೆಯ ಪಿಂಚಣಿ ಹಾಗೂ ಹೊಸ ಪಿಂಚಣಿ ನೌಕರರು ಎಂಬ ತಾರತಮ್ಯವನ್ನು ಉಂಟು ಮಾಡಿದೆ.ನಮಗೆ ಷೇರುಪೇಟೆ ಮುಖ ಬೆಲೆಯನ್ನು ಆಧರಿಸಿ ನೀಡಲಾಗುವ ಪಿಂಚಣಿಯ ಅಗತ್ಯವಿಲ್ಲ. ನಮಗೆ ನಿಶ್ಚಿತ ಪಿಂಚಣಿಯ ಅಗತ್ಯವಿದೆ.ದೇಶದ ಅನೇಕ ರಾಜ್ಯಗಳಲ್ಲಿ ಈಗಾಗಲೇ ನೌಕರರಿಗೆ ಮಾರಕವಾದ ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡಿವೆ.ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಅನೇಕ ಭಾರಿ ಮನವಿ,ಪ್ರತಿಭಟನೆ ಸೇರಿದಂತೆ ಅನೇಕ ವಿಧಾನದ ಮೂಲಕ ಸರಕಾರದ ಗಮನಕ್ಕೆ ತಂದರೂ ಕೂಡಾ ಸರಕಾರ ಮಾತ್ರ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಮಾಡುವ ಮನಸ್ಸು ಮಾಡುತ್ತಿಲ್ಲ.ಎನ್.ಪಿ.ಎಸ್.ಯೋಜನೆಯ ಅಡಿಯಲ್ಲಿ ನಿವೃತ್ತಿಯಾದ ಅನೇಕ ನೌಕರರ ಬದುಕು ಕೂಡಾ ಸಂಕಷ್ಟದಲ್ಲಿದೆ.ಯಾವುದೇ ಯೋಜನೆಯನ್ನು ಜಾರಿಗೆ ಮಾಡಬೇಕಾದರೆ ಆ ಯೋಜನೆಯ ಸಾಧಕ-ಭಾದಕಗಳ ಬಗ್ಗೆ ಗಮನ ಹರಿಸಬೇಕಾದದ್ದು ಸರಕಾರದ ಆದ್ಯ ಕರ್ತವ್ಯವಾಗಿದೆ ಆದರೆ ನೌಕರರಿಗೆ ಮಾರಕವಾಗುವ ಎನ್.ಪಿ.ಎಸ್.ಎಂಬ ಯೋಜನೆಯನ್ನು ಜಾರಿಗೆ ಮಾಡುವ ಸಮಯದಲ್ಲಿ ಇದರ ಬಗ್ಗೆ ಗಮನಹರಿಸದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.ಎನ್.ಪಿ.ಎಸ್.ನೌಕರರನನ್ನು ಅವಲಂಭಿಸಿರುವ ಕುಟುಂಬಗಳು ಕೂಡಾ ಆತಂಕಕ್ಕೆ ಒಳಗಾಗಿದ್ದಾರೆ.ಛತ್ತೀಸಘಡ್,ರಾಜಸ್ಥಾನ ಹಾಗೂ ಜಾರ್ಖಂಡನಲ್ಲಿ ಯಾವ ರೀತಿಯಲ್ಲಿ ನಮ್ಮ ರಾಜ್ಯದ ಎನ್.ಪಿ.ಎಸ್.ನೌಕರರಿಗೂ ಎನ್.ಪಿ.ಎಸ್.ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಎನ್.ಪಿ.ಎಸ್.ನೌಕರರ ಬೆಂಬಲ ಪಡೆದು ಅದರ ರದ್ದು ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ವಿಕಲಚೇತನ ನೌಕರರ ಸಂಘದ ರಾಜ್ಯ ತಾಂತ್ರಿಕ ಗೌರವ ಸಲಹೆಗಾರರಾದ ಕಾಶಿನಾಥ ಸಿರಿಗೇರಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಶಿಕ್ಷಕಿಯರಾದ ಶೀಲಾ ಬಂಡಿ,ಸುನoದಾ ಅಂಗಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮಹುಸೇನ ಮಾತನಾಡಿ,ಎನ್.ಪಿ.ಎಸ್.ಯೋಜನೆಗೆ ಒಳಪಟ್ಟು ನಿವೃತ್ತಿಯಾದ ಅನೇಕ ಕುಟುಂಬಗಳ ಕುರಿತು ಈಗಾಗಲೇ ಪತ್ರಿಕೆಗಳಲ್ಲಿ ವರದಿಯಾಗಿದೆ.ಸರಕಾರಿ ನೌಕರರಾಗಿ ಸುಮಾರು ೩೫ ವರ್ಷಗಳ ಕಾಲ ಸಾರ್ವಜನಿಕ ಸೇವೆಯನ್ನು ಮಾಡಿದ ನೌಕರರಿಗೆ ಸಂಧ್ಯಾಕಾಲದಲ್ಲಿ ಉತ್ತಮ ರೀತಿಯಲ್ಲಿ ಜೀವನ ಸಾಗಿಸಲಿ ಎಂಬ ಉದ್ದೇಶದಿಂದ ಪಿಂಚಣಿ ಎಂಬ ಯೋಜನೆಯನ್ನು ಜಾರಿಗೆ ತರಲಾಗಿತ್ತು.ಆದರೆ ಪ್ರಸ್ತುತ ದಿನಮಾನಗಳಲ್ಲಿ ಹಳೆಯ ಪಿಂಚಣಿಯ ವ್ಯವಸ್ಥೆಯ ಬದಲಾಗಿ ಎನ್.ಪಿ.ಎಸ್.ಎಂಬ ಯೋಜನೆಯಿಂದ ಜಾರಿಗೆ ಮಾಡಿ ನೌಕರರ ಆಂತಕಕ್ಕೆ ಒಳಗಾಗುವಂತೆ ಮಾಡಿದೆ.ಪಿಂಚಣಿ ಎಂಬುದು ಪ್ರತಿಯೊಬ್ಬ ನೌಕರರ ಹಕ್ಕು ಎಂದು ದೇಶದ ಘನ ನ್ಯಾಯಾಲಯವಾದ ಸುಪ್ರೀಂಕೋರ್ಟ ಹೇಳಿದೆ.ಎನ್.ಪಿ.ಎಸ್.ಯೋಜನೆಯನ್ನು ರದ್ದು ಮಾಡುವ ನಿಟ್ಟಿನಲ್ಲಿ ಹಮ್ಮಿಕೊಳ್ಳುವ ಹೋರಾಟಕ್ಕೆ ಹಳೆಯ ಪಿಂಚಣಿ ನೌಕರರ ಬೆಂಬಲ ಕೂಡಾ ಇರುತ್ತದೆ.ಶೀಘ್ರವೇ ಎನ್.ಪಿ.ಎಸ್.ಯೋಜನೆಯು ರದ್ದಾಗಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಬರಲಿ ರಂದು ಹೇಳಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಾಗೋಡಿ,ಶಿಕ್ಷಕರಾದ ಶ್ರೀನಿವಾಸರಾವ ಕುಲಕರ್ಣಿ,ಶಂಕ್ರಮ್ಮ ಬಂಗಾರಶೆಟ್ಟರ್,ಗoಗಮ್ಮ ತೋಟದ,ಜಯಶ್ರೀ ದೇಸಾಯಿ,ರತ್ನಾ,ಭಾರತಿ ಆಡೂರ,ಗೌಸಿಯಾಬೇಗಂ,ನಾಗತರತ್ನ ಆಡೂರು,ಟಾಟಾ ಕಲಿಕಾ ಟ್ರಸ್ಟನ ಶಿಕ್ಷಕಿ ಅನಿತಾ ಉಪ್ಪಾರ ಸೇರಿದಂತೆ ಅನೇಕರು ಹಾಜರಿದ್ದರು.
ಶಿಕ್ಷಕರಾದ ನಾಗಪ್ಪ ನರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕರಾದ ಮೊಹಮ್ಮದ ಆಭೀದ ಹುಸೇನ ಅತ್ತಾರ ಸ್ವಾಗತಸಿ,ವಂದಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page