ಭಾನುವಾರ , ಮೇ 28 2023
kn
Breaking News

ಐಸಿಐಸಿ ಬ್ಯಾಂಕಿನಿoದ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ-ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ: ಐಸಿಐಸಿಐ ಬ್ಯಾಂಕ್ ಭಾರತದ ದೊಡ್ಡ ೪ ಬ್ಯಾಂಕುಗಳಲ್ಲಿ ಒಂದಾಗಿದ್ದು, ಮೂಡಲಗಿ ತಾಲ್ಲೂಕು ಪ್ರದೇಶದಲ್ಲಿ ಈ ಬ್ಯಾಂಕ್ ನ ಶಾಖೆಯನ್ನು ತೆರೆದಿರುವುದು ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಸೊನವಾಲ್ಕರ ಕಟ್ಟಡದಲ್ಲಿ ಆರಂಭವಾಗಿರುವ ಐಸಿಐಸಿಐ ಬ್ಯಾಂಕ್‌ನ್ನು ಗುರುವಾರದಂದು ಉದ್ಘಾಟಿಸಿ ಮಾತನಾಡಿದ ಅವರು, ಈ ಬ್ಯಾಂಕಿನಿoದ ಗ್ರಾಹಕರಿಗೆ ಒಳ್ಳೆಯದಾಗಬೇಕು. ಅದರಲ್ಲೂ ರೈತ ಸಮುದಾಯಕ್ಕೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಸಾಲ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ಕೆಲಸ ಬ್ಯಾಂಕ್‌ನ ಸಿಬ್ಬಂದಿ ವರ್ಗ ಮಾಡಬೇಕೆಂದು ಕೋರಿದರು.
ಐಸಿಐಸಿಐ ಬ್ಯಾಂಕ್ ದೇಶದಲ್ಲಿ ಆರ್ಥಿಕ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ಹಲವು ಮಹತ್ವದ ಕೊಡುಗೆಗಳನ್ನು ನೀಡಿದೆ. ಭಾರತವಲ್ಲದೇ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ತನ್ನ ಅಂಗ ಸಂಸ್ಥೆಗಳನ್ನು ಹೊಂದಿದೆ ಎಂದು ಹೇಳಿದರು. ೨೦೦೮ ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಮಯದಲ್ಲಿ ಅರ್ಥ ವ್ಯವಸ್ಥೆಯು ಸೌಮ್ಯವಾದ ನಿಧಾನೀಕರಣವನ್ನು ಎದುರಿಸಿತ್ತು. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮತ್ತು ಬೇಡಿಕೆಗಳನ್ನು ಸೃಷ್ಟಿಸಲು ಭಾರತವು ಉತ್ತೇಜೀತ ಕ್ರಮಗಳನ್ನು ಕೈಗೊಂಡಿದ್ದರಿoದ ನಂತರದ ವರ್ಷ ಗಳಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯು ಬಲವರ್ಧನೆಯಾಯಿತು. ಪ್ರಧಾನಿ ನರೇಂದ್ರ ಮೋದಿಯವರ ದೂರ ದೃಷ್ಟಿಯಿಂದಾಗಿ ಜಿಡಿಪಿ ಪ್ರಕಾರ ಭಾರತದ ಆರ್ಥಿಕ ವ್ಯವಸ್ಥೆಯು ಜಗತ್ತಿನಲ್ಲಿ ೩ ನೇ ಸ್ಥಾನದಲ್ಲಿದೆ. ಕೋವಿಡ್ ವಿಶ್ವವ್ಯಾಪಿಯಾಗಿ ಕಾಡಿದ್ದರಿಂದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿತು ಎಂದು ತಿಳಿಸಿದರು.
ಮೂಡಲಗಿ ತಾಲೂಕಿನ ಅಭಿವೃದ್ಧಿಗಾಗಿ ಸದಾ ಬದ್ಧರಿದ್ದೇವೆ. ತಾಲೂಕು ಮಟ್ಟದ ಕಚೇರಿಗಳು ಬರುತ್ತಿವೆ. ಅದರಲ್ಲೂ ಮೂಡಲಗಿ ತಾಲೂಕಿನ ಸಾರ್ವಜನಿಕರ ಮುಖ್ಯವಾದ ಬೇಡಿಕೆಯಾಗಿದ್ದ ಉಪ ನೋಂದಣಿ ಅಧಿಕಾರಿ ಕಚೇರಿ ಕೂಡ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾಗಲಿದೆ. ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಜಾಗೆಯನ್ನು ಗುರುತಿಸಲಾಗಿದೆ. ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ.
ಹಿಂದಿನ ಪೀಠಾಧಿಪತಿಗಳಾಗಿದ್ದ ದಿ. ಶ್ರೀ ಶ್ರೀಪಾದಬೋಧ ಸ್ವಾಮಿಗಳ ಕನಸಿನಂತೆ ಮೂಡಲಗಿ ತಾಲೂಕನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಸಾನಿಧ್ಯ ವಹಿಸಿದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿ ಆಶೀರ್ವಚನ ನೀಡಿದರು. ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ಎ.ಎಮ್.ನದಾಫ್ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕಿನ ಸೌಲಭ್ಯಗಳನ್ನು ವಿವರಿಸಿದರು.

ಸಮಾರಂಭದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಡಾ.ಗಿರೀಶ ಸೋನವಾಲ್ಕರ, ಎಸ್.ಆರ್.ಸೋನವಾಲಕರ, ಜಿ.ಟಿ.ಸೋನವಾಲ್ಕರ, ತಹಶೀಲ್ದಾರ ಡಿ.ಜಿ.ಮಹಾತ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥ ಶಿವಾನಂದ ಬಣಕರ, ಶಾಖಾ ವ್ಯವಸ್ಥಾಪಕ ಪ್ರವೀಣ ಶಿರಹಟ್ಟಿ, ಬ್ಯಾಂಕಿನ ವಿವಿಧ ಶಾಖೆಗಳ ವ್ಯವಸ್ಥಾಕರು ಮತ್ತು ಅಧಿಕಾರಿಗಳಾದ ಸಾಗರ ಓತಾರಿ, ರಾಮಂಚoದ್ರ ದರಗಶೆಟ್ಟಿ, ಸಚೀನ ಹಳಕೇರ, ಸಿ.ಎಸ್.ವಿ ನಾಯಕ, ಸಿದ್ದಲಿಂಗೇಶ್ವರ ಮಠದ ಉಪಸ್ಥಿತರಿದ್ದರು.
ಸಮಾರಂಭದ ಪಟ್ಟಣದ ವಿವಿಧ ಹಣಕಾಸಿ ಸೋಸೈಟಿ ವ್ಯವಸ್ಥಾಪಕರು, ಪುರಸಭೆ ಸದಸ್ಯರು, ಗಣ್ಯರು ಪಾಲ್ಗೊಂಡಿದ್ದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page