ಬುಧವಾರ , ಏಪ್ರಿಲ್ 24 2024
kn
Breaking News

Monthly Archives: ಆಗಷ್ಟ್ 2022

ಜನಸೇವೆ ಜನಾರ್ದನ ಸೇವೆ : ಮಲೀಕ ಹುಣಶ್ಯಾಳ

ಮೂಡಲಗಿ: ಜನ ಸೇವೆ ಜನಾರ್ಧನ ಸೇವೆ ಎಂದು ತಿಳಿದು ನಮ್ಮ ಅಂಜುಮನ್ ಕಮಿಟಿಯು ಜನಪರ ಸೇವೆಯಲ್ಲಿ ತೊಡಗಿ ಕಷ್ಟದಲ್ಲಿರುವ ಅನೇಕ ಬಡ ಕುಟುಂಗಳಿಗೆ ಮಾನವೀಯತೆ ದೃಷ್ಟಿಯಿಂದ ನೆರವು ನೀಡಿ ಅಳಿಲು ಸೇವೆ ಮಾಡುತ್ತಿದೆ ಎಂದು ಅಂಜುಮನ್ ಎ ಇಸ್ಲಾಂ ಕಮಿಟಿಯ ಅಧ್ಯಕ್ಷ ಮಲೀಕ ಹುಣಶ್ಯಾಳ ಹೇಳಿದರು. ಅವರು ಅಂಜುಮನ್ ಕಮಿಟಿಯ ಕಚೇರಿಯಲ್ಲಿ ಕಮಿಟಿ ವತಿಯಿಂದ ಹಮ್ಮಿಕೊಂಡ ಸರ್ಕಾರದ ವಿವಿಧ ಸೌಲಭ್ಯಗಳ ಮಾಶಾಸನ, ಜಾತಿ ಆದಾಯ ಆದೇಶ ಪ್ರತಿಗಳ ವಿತರಣಾ ಕಾರ್ಯಕ್ರಮದಲ್ಲಿ …

Read More »

ಒಳ್ಳೆಯ ಕಾರ್ಯ ಮಾಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಎಲ್ಲರೂ ಗೌರವಿಸೋಣ : ಹನಮಂತ ಗುಡ್ಲಮನಿ

ಮೂಡಲಗಿ : ಕಳೆದೊಂದು ವಾರದಿಂದ ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಮೂಡಲಗಿ ಪಟ್ಟಣದ ರಸ್ತೆ ಸುಧಾರಣಾ ಕಾಮಗಾರಿಗೆ ಸೋಮವಾರದಂದು ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಪಟ್ಟಣದ ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದವರೆಗಿನ ೧ ಕಿ.ಮೀ ರಸ್ತೆ ಸುಧಾರಣಾ ಕಾಮಗಾರಿ ಮಾಡುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೊನೆಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು …

Read More »

ಸನ್ನಡತೆಗಳನ್ನು ಅನುಸರಿಸಿದರೆ ನೆಮ್ಮದಿಯ ಜೀವನ ಪ್ರಾಪ್ತವಾಗುವುದು: ಶಿವಾನಂದ ಮರಾಠೆ

ಮೂಡಲಗಿ: ಸ್ವಾಮೀಜಿಗಳು ತಮ್ಮ ಪ್ರವಚನದ ಮೂಲಕ ಜನತೆಗೆ ಮುಕ್ತಿ ಮಾರ್ಗ ತೋರುವ ಸನ್ಮಾರ್ಗ, ಸನ್ನಡತೆಗಳನ್ನು ಅನುಸರಿಸಿದರೆ ನೆಮ್ಮದಿಯ ಜೀವನ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕಾ ಘಟಕದ ಉಪಾಧ್ಯಕ್ಷ ಶಿವಾನಂದ ಮರಾಠೆ ಹೇಳಿದರು. ಸಮೀಪದ ಗುರ್ಲಾಪೂರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಟ್ರಸ್ಟ್ ಸಂಘಟಕರು ಹಮ್ಮಿಕೊಂಡ ಇಟ್ನಾಳದ ಶ್ರೀ ಶಿದ್ದೇಶ್ವರ ಸ್ವಾಮಿಗಳು ನೀಡುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆಯಲ್ಲಿ ನೂತನವಾಗಿ ಆಯ್ಕೆಯಾದ …

Read More »

ನಿಧನ ವಾರ್ತೆ ಭೂತಪ್ಪ ಪಾಂಡಪ್ಪ ಭೂತನ್ನವರ

ಮೂಡಲಗಿ: ಸಮೀಪದ ಕೌಜಲಗಿ ಮೀರಾಳ ತೋಟದ ನಿವಾಸಿ ಭೂತಪ್ಪ ಪಾಂಡಪ್ಪ ಭೂತನ್ನವರ (46) ನಿಧನರಾಗಿದ್ದಾರೆ. ಮೃತರು ಮೂಡಲಗಿ ಶೈಕ್ಷಣಿಕ ತಾಲೂಕಿನ ಬೀಲಕುಂದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸವದತ್ತಿ ತೋಟದಲ್ಲಿ ಸಹಶಿಕ್ಷಕರಾಗಿದ್ದರು. ತಂದೆ, ತಾಯಿ, ಹೆಂಡತಿ, ತಮ್ಮ, ತಂಗಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.

Read More »

ವೆಂಕಟಾಪೂರ ಗ್ರಾಮದಲ್ಲಿ ಪವಾಡ ಪುರುಷ ಬಾಳುಮಾಮಾ ಜಾತ್ರಾ ಮಹೋತ್ಸವ

ಮೂಡಲಗಿ: ಸಮೀಪದ ವೆಂಕಟಾಪೂರ ಗ್ರಾಮದಲ್ಲಿ ಪವಾಡ ಪುರುಷ ಬೆಡಿದ ಭಕ್ತರಿಗೆ ಬೇಡಿದ ವರ ನೀಡುವ ವರದಾತ ಬಾಳು ಮಾಮಾ ರವರ ಶ್ರಾವಣ ಮಾಸದ ನಿಮಿತ್ಯ ಪ್ರತಿವರ್ಷದಂತೆ ಈ ವರ್ಷ ಕೂಡ ಅಧೂರಿಯಾಗಿ ಜಾತ್ರಾ ಮಹೋತ್ಸವ ಜರುಗಿತು. ಬಾಳುಮಾಮ ದೇವಸ್ಥಾನ ದಿಂದ ಬಾಳುಮಾಮ ಕುದುರೆ ಗೆ ಗುರುಶಿದ್ದ ಪೂಜಾರಿ ,ಕೆಂಚಪ್ಪ ಪೂಜಾರಿ, ಕಳೆಪ್ಪ ಪೂಜಾರಿ ನಾಗಪ್ಪ ಪೂಜಾರಿ ಸೆರಿಕೋಂಡು ಪೂಜೆ ಸಲ್ಲಿಸುವ ಮೂಲಕ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ವೆಂಕಟಾಪೂರ ಗ್ರಾಮದ …

Read More »

ಸರ್ಕಾರಿ ನೌಕರಿ ಆಮೀಷ : ಡೋಂಗಿ ಬಾಬಾ ಅಂದರ್!! ಇವ್ಹಿಎo ಸ್ವಾಮಿಯ ಕರ್ಮಕಾಂಡ ಬಯಲು, ಇಂತಹ ದೇಶದ್ರೋಹಿ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಲಿ

ಮೂಡಲಗಿ : ಸರ್ಕಾರಿ ನೌಕರಿ ಮಾಡಿಸಿಕೊಡುತ್ತೇನೆ ಎಂದು ಹೇಳಿ ಅಮಾಯಕರಿಂದ ಕೋಟ್ಯಾಂತರ ರೂಪಾಯಿ ಟೋಪಿ ಹಾಕಿರುವ ಖತರ್ನಾಕ್ ಸ್ವಾಮಿಯನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಹಳ್ಳೂರ ಗ್ರಾಮದ ಅಲ್ಲಮಪ್ರಭು ಹಿರೇಮಠ ಬಂಧನಕ್ಕೀಡಾಗಿರುವ ವಂಚಕ ಸ್ವಾಮಿಯಾಗಿದ್ದು, ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ. ಹಣಕಾಸು ವ್ಯವಹಾರ, ಮೋಸ, ವಂಚನೆ ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರಿ ಹಾಗೂ ಇನ್ನೀತರ ಸಂಘ-ಸoಸ್ಥೆಗಳಲ್ಲಿ ನೌಕರಿ ಕೊಡಿಸುವ ನೆಪದಲ್ಲಿ …

Read More »

ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ವಿತರಣೆ

ಮೂಡಲಗಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಸರ್ಕಾರಿ ಶಾಲೆಗಳು ಅಭಿವೃದ್ದಿ ಹೊಂದಲು ದಾನಿಗಳ ನೆರವು ಅತ್ಯವಶ್ಯವಾಗಿದೆ ಎಂದು ಯುವ ಮುಖಂಡ ಇಜಾಜ ಆಹ್ಮದ ಕೊಟ್ಟಲಗಿ ಹೇಳಿದರು. ಇಲ್ಲಿನ ಸರ್ಕಾರಿ ಉರ್ದು ಫ್ರೌಡ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟಬುಕ್ ಮತ್ತು ಪೆನ್ನು ವಿತರಿಸಿ ಮಾತನಾಡಿದ ಅವರು, ಇದೀಗ ನಮ್ಮ ಸ್ನೇಹಿತ ಬಳಗದೊಂದಿಗೆ ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ,ಕನ್ನಡ ಗಂಡು ಮಕ್ಕಳ ಶಾಲೆ,ಹೆಣ್ಣು ಮಕ್ಕಳ …

Read More »

ಮಹಾನ್ ನಾಯಕರ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಎಂ.ಡಿ.ಗುಲಾಮ್ ಹುಸೇನ

ಕೊಪ್ಪಳ: ಸ್ವಾತಂತ್ರ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹೋರಾಟ ಮಾಡಿದ ಮಹಾನ್ ನಾಯಕರ ಆದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಡಿ.ಗುಲಾಮ್ ಹುಸೇನ ಹೇಳಿದರು. ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ೭೫ ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ನೇರವೆರಿಸಿ ಮಾತನಾಡಿ,ನಮ್ಮ ದೇಶವು ಸುಮಾರು ೨೦೦ ವರ್ಷಗಳ ಕಾಲ ಆಂಗ್ಲರ ವಶದಲ್ಲಿ ಇತ್ತು.ಅವರ ಗುಲಾಮರಾಗಿ ನಾವು ಬದುಕುತ್ತಿದ್ದೆವೆ.ಇಂತಹ ಸಮಯದಲ್ಲಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ಅನೇಕರು ತಮ್ಮ ಪ್ರಾಣವನ್ನು ಲೆಕ್ಕಿಸದೇ …

Read More »

ಸ್ವಾತಂತ್ರ್ಯ ಹೋರಾಟಗಾರರಾದ ದಿ. ರಾವಜೇಪ್ಪ ಬಾಲಪ್ಪ ಸೋನವಾಲಕರ ಇವರ ಸ್ಮರಣಾರ್ಥ ನೀಡುವ ೧ ಲಕ್ಷ ರೂ.ಗಳ ಪ್ರೋತ್ಸಾಹಕ ಬಹುಮಾನ ವಿತರಣೆ

ಮೂಡಲಗಿ: ಪಟ್ಟಣದ ಬಸವ ಮಂಟಪದಲ್ಲಿ ಜರುಗಿದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ತಾಲೂಕಾ ಮಟ್ಟದ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ನೀಡುವ ಮೂಡಲಗಿ ಶೈಕ್ಷಣಿಕ ವಲಯಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿನಿಯರಿಗೆ ನೀಡುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿ. ರಾವಜೇಪ್ಪ ಬಾಲಪ್ಪ ಸೋನವಾಲಕರ ಇವರ ಸ್ಮರಣಾರ್ಥ ಇವರ ಮೊಮ್ಮಗ ಡಾ. ಪ್ರದೀಪ ಸುಭಾಸ ಸೋನವಾಲಕರ ಇವರು ನೀಡುವ ೧ ಲಕ್ಷ ರೂ.ಗಳ ಪ್ರೋತ್ಸಾಹಕ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು. ಮೂಡಲಗಿ …

Read More »

ಧರ್ಮಟ್ಟಿಯಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಸಂಗೋಳ್ಳಿ ರಾಯಣ್ಣರ ಜನ್ಮ ದಿನೋತ್ಸವ ಅಂಗವಾಗಿ ರಾಜ್ಯ ಮಟ್ಟದ ಟಗರಿನ ಕಾಳಗ

ಮೂಡಲಗಿ : ಸಮೀಪದ ಧರ್ಮಟ್ಟಿ ಗ್ರಾಮದ ಧರ್ಮಟ್ಟಿ ವಿದ್ಯಾಲಯ ಧರ್ಮಟ್ಟಿಯಲ್ಲಿ ೭೫ ನೇ ಸ್ವಾತಂತ್ರ್ಯೋತ್ಸವ ಹಾಗೂ ಸಂಗೋಳ್ಳಿ ರಾಯಣ್ಣರ ಜನ್ಮ ದಿನೋತ್ಸವ ಅಂಗವಾಗಿ ರಾಜ್ಯ ಮಟ್ಟದ ಟಗರಿನ ಕಾಳಗದ ಸ್ಪರ್ಧೆಗಳು ಸೋಮವಾರ ಅ. ೧೫ ರಂದು ಜರುಗಲಿದ್ದು, ಉದ್ಘಾಟಕರಾಗಿ ಕೆ.ಎಮ್.ಎಫ್ ಅಧ್ಯಕ್ಷರು ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಆಗಮಿಸುವರು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹಾಲಲ್ಲಿ ಟಗರಿನ ಕಾಳಗ, ಎರಡಲ್ಲಿ ಟಗರು, ನಾಲ್ಕಲ್ಲಿ ಟಗರು, ಆರಲ್ಲಿ ಟಗರಿನ ಕಾಳಗ …

Read More »

You cannot copy content of this page