ಅಥಣಿ: ಕೊರೊನಾ ವೈರಸ್ ಮೊದಲನೇ ಹಂತದ ಮಾನವನ ದೇಹದ ಉಷ್ಣತೆಯ ಚೆಕಿಂಗ್ ಸ್ಕ್ರೀನಿಂಗ್ ಮಿಷನಿಂದ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಸ್ಕ್ರೀನಿಂಗ್ ಮಿಷನ್ ಕೈಕೊಟ್ಟಿರುವ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ. ಕೊರೊನಾ ಭೀತಿಯಿಂದ ಬೆಳಗಾವಿ ಜಿಲ್ಲೆಯು ತತ್ತರಿಸಿದೆ, ಇದರ ಮಧ್ಯ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗಡಿ ಹೊಂದಿರುವ ಗ್ರಾಮಗಳಿಗೆ ಮಹಾರಾಷ್ಟ್ರದಿಂದ, ಜನರು ಒಳ ರಸ್ತೆಯಿಂದ ನುಸುಳುತ್ತಿದ್ದಾರೆ, ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಆತಂಕ ಸೃಷ್ಟಿಸಿದೆ. ಮಹಾರಾಷ್ಟ್ರ ಮೂಲದ ಇಬ್ಬರು ತಾಲೂಕಿನ ಕಕಮರಿ …
Read More »ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಆಹಾರ ಸಾಮಗ್ರಿಗಳ ವಿತರಣೆ
ಮುಗಳಖೋಡ: ಪ್ರಪಂಚವನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ರೋಗದಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಗಳಖೋಡ ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಹಾಗೂ ರೆಡ್ ಕ್ರಾಸ್ ಘಟಕ ಮತ್ತು ಪಟ್ಟಣದ ನಿಸರ್ಗಧಾಮ ಗ್ರಾಮೀಣಾಭಿವ್ರದ್ದಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಆಹಾರ ಪದಾರ್ಥಗಳಾದ ಹಣ್ಣು ತರಕಾರಿ ವಿವಿಧ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಪೂಜ್ಯರಾದ ಅಲ್ಲಯ್ಯ ಹಿರೇಮಠ ಮಾತನಾಡಿ ಮಹಾಮಾರಿ ಕೊರೊನಾ ರೋಗದಿಂದ ದೇಶದ ಜನರು ಕಂಗಾಲಾಗಿದ್ದಾರೆ. …
Read More »ಬ್ಯಾಕೂಡದಲ್ಲಿ ಪೆವರ್ ಕ್ಲಿನಿಕ್ ಸ್ಥಾಪನೆ
ಮುಗಳಖೋಡ: ಸಮೀಪದ ಬ್ಯಾಕೂಡದಲ್ಲಿ ಕರೋನಾ ವೈರಸ ಸೊಂಕಿನಿಂದಾಗಿ ಜನರಲ್ಲಿ ಆತಂಕ ಮೂಡಿದ್ದು, ಸ್ವಲ್ಪ ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುತ್ತಿದ್ದಾರೆ. ಆದರೆ ಹಲವು ಖಾಸಗಿ ಆಸ್ಪತ್ರೆಗಳು ಲಾಕ್‍ಡೌನ್ ಆಗಿರುವುದರಿಂದ ಜನರು ಸರಕಾರಿ ಆಸ್ಪತ್ರೆಯ ಕಡೆ ಮುಖಮಾಡಿರುವುದು ಕಂಡುಬರುತ್ತಿದೆ. ಈ ಕಾರಣದಿಂದಾಗಿ ದಿನವು ನೂರಾರು ರೋಗಿಗಳು ಸರಕಾರಿ ಆಸ್ಪತ್ರೆಗೆ ಬರುತ್ತಿದ್ದು ರೋಗಿಗಳ ತುರ್ತು ಚಿಕಿತ್ಸೆಗಾಗಿ ಫೆವರ್ ಕ್ಲಿನಿಕ್ ತೆರೆಯಲಾಗಿದ್ದು ರೋಗಿಗಳು ಇದರ ಪ್ರಯೋಜನ ಪಡೆಯಬೇಕು, ಅಲ್ಲದೇ ಪ್ರತಿ …
Read More »ಹಸಿಕಂದಮ್ಮನನ್ನು ದೇವಸ್ಥಾನದಲ್ಲಿ ಎಸೆದ ಪಾಪಿಗಳು
ಮುಗಳಖೋಡ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಇಂದು ಬೆಳಗ್ಗೆನ ಜಾವ ಅಮಾನವೀಯ ಕೃತ್ಯ ನಡೆದಿರುವದು ಕಂಡು ಬಂದಿದೆ. ಹೌದು, ಮುಗಳಖೋಡದ ಕೆನಾಲ್ ಆಫಿಸ್ ಹತ್ತಿರ ಇರುವ ಬಸವಣ್ಣನ ದೇವಸ್ಥಾನದಲ್ಲಿ ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಆಗತಾನೆ ಜನಿಸಿದ ಹಸಿಕಂದಮ್ಮನನ್ನು (ಗಂಡುಮಗು) ಹಾಕಿರುವ ಅಮಾನವೀಯ ಘಟನೆ ನಡೆದಿದೆ. ದೇವಸ್ಥಾನದ ಹತ್ತಿರ ಜನರು ಕೂಡುತ್ತಿದಂತೆ ಘಟನಾ ಸ್ಥಳಕ್ಕೆ ಆಶಾಕಾಯ೯ಕರ್ತೆಯರು, ಆರೋಗ್ಯ ಕೇಂದ್ರದ ನಸ್೯, ಆರಕ್ಷಕ ಠಾಣೆ ಸಿಬ್ಬಂದಿ ಎ.ಎಸ್. ಐ …
Read More »ಪ್ರಧಾನಮಂತ್ರಿ ಕರೆಗೆ ವಾಣಿಜ್ಯನಗರಿಯಲ್ಲಿ ದೀಪಗಳ ಕಲರವ
ದೀಪ ಬೆಳಗಿ ಬೆಂಬಲ ಸೂಚಿಸಿದ ಪುಟ್ಟ ಕಂದಮ್ಮ ಮುಗಳಖೋಡ: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ ಕೊರೋನಾ ವೈರಸ್ ಹೊಡೆದೊಡಿಸುವ ಹಿನ್ನಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ದೀಪ ಬೆಳಗುವ ಅಭಿಯಾನಕ್ಕೆ ಮುಗಳಖೋಡ ಪಟ್ಟಣದಲ್ಲಿ ಪುಟ್ಟ ಕಂದಮ್ಮ ದೀಪ ಬೆಳಗುವ ಮೂಲಕ ಬೆಂಬಲ ಸೂಚಿಸಿದ್ದಾರೆ. ಹೌದು..ಮುಗಳಖೋಡದ ವಿವಿಧ ಸ್ಥಳಗಳಲ್ಲಿ ತಮ್ಮ ಮನೆಯ ಅಂಗಳದಲ್ಲಿ ಪುಟ್ಟ ಕಂದಮ್ಮಗಳು ಮುಗ್ಧ ಮನಸ್ಸಿನಿಂದ ಮೇನಬೋತ್ತಿಯನ್ನು ಬೆಳಗಿಸಿ ಜ್ಞಾನದ ದೀಪ ಬೆಳಗುವ ಮೂಲಕ ಪ್ರಧಾನಮಂತ್ರಿ ಅವರ ಕರೆಗೆ …
Read More »ಪ್ರಧಾನಿ ಮೋದಿಯವರ ದೀಪ ಬೆಳಗಿಸುವ ಸಂಕಲ್ಪವನ್ನ ಯಶಸ್ವಿಗೊಳಿಸಬೇಕಿದೆ: ಡಾ. ಸಿ ಬಿ ಕುಲಿಗೋಡ
ಮುಗಳಖೋಡ: ಕೊರೊನಾ ಸೊಂಕಿನಿಂದ ಸೃಷ್ಠಿಯಾಗಿರುವ ಅಂಧಕಾರದಿಂದ ದೇಶವನ್ನು ಬೆಳಕಿನೆಡೆಗೆ ಒಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಅಭಿಯಾನ ಪ್ರಕಟಿಸಿದ್ದು, ಭಾನುವಾರ ರಾತ್ರಿ 9 ಗಂಟೆಗೆ ನಡೆಯುವ ದೀಪ ಬೆಳಗುವ ಅಭಿಯಾನವನ್ನು ಯಶಸ್ವಿಗೊಳಿಸಿ ಕೊರೊನಾ ಹೊಡೆದೊಡಿಸುವಲ್ಲಿ ಒಗ್ಗಟ್ಟುನ್ನು ಪ್ರದರ್ಶಿಸುವಂತೆ ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್ ಹಾಗೂ ರೇಡ್ ಕ್ರಾಸ್ ಘಟಕದ ವತಿಯಿಂದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ರವಿವಾರ ಎಪ್ರೀಲ್-5ರಂದು ಮನೆ-ಮನೆಗಳಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕೊರೊನಾ ಕತ್ತಲಿನಿಂದ ಬೆಳಕಿನೆಡೆಗೆ …
Read More »ತಮ್ಮ ಜೀವವನ್ನ ಲೆಕ್ಕಿಸದೆ ಹಗಲಿರುಳು ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು
ಮುಗಳಖೋಡ : ಇಡೀ ವಿಶ್ವಾದ್ಯಾಂತ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸ ವನ್ನು ಮೆರಿಯುತ್ತಿರುವ ಹಿನ್ನೆಲೆಯಲ್ಲಿ ಮುಗಳಖೋಡ ವಲಯದಲ್ಲಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಇರುವಾಗ ಆಶಾ ಕಾರ್ಯಕರ್ತೆಯರು ಮಾತ್ರ ತಮ್ಮ ಪ್ರಾಣವನ್ನು ಲೇಕಿಸದೇ ಬೀದಿ ಬೀದಿಗಳಲ್ಲಿ ಸಂಚರಿಸಿ ಎಲ್ಲರ ಆರೋಗ್ಯ ವನ್ನು ಪರೀಕ್ಷಿಸುತ್ತಾ ಈ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ಇಂತಹ ನಮ್ಮ ಹೆಮ್ಮೆಯ ಆಶಾ ಕಾರ್ಯಕರ್ತೆಯರಿಗೆ ನಾವೇಲ್ಲರೂ ಸಹಕರಿಸಿ ಈ ಮಹಾಮಾರಿ ಕೊರೋನಾ ರೋಗ …
Read More »