ಮುಗಳಖೋಡ : ಇಡೀ ವಿಶ್ವಾದ್ಯಾಂತ ಮಹಾಮಾರಿ ಕೊರೊನಾ ತನ್ನ ಅಟ್ಟಹಾಸ ವನ್ನು ಮೆರಿಯುತ್ತಿರುವ ಹಿನ್ನೆಲೆಯಲ್ಲಿ ಮುಗಳಖೋಡ ವಲಯದಲ್ಲಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಇರುವಾಗ ಆಶಾ ಕಾರ್ಯಕರ್ತೆಯರು ಮಾತ್ರ ತಮ್ಮ ಪ್ರಾಣವನ್ನು ಲೇಕಿಸದೇ ಬೀದಿ ಬೀದಿಗಳಲ್ಲಿ ಸಂಚರಿಸಿ ಎಲ್ಲರ ಆರೋಗ್ಯ ವನ್ನು ಪರೀಕ್ಷಿಸುತ್ತಾ ಈ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ.
ಇಂತಹ ನಮ್ಮ ಹೆಮ್ಮೆಯ ಆಶಾ ಕಾರ್ಯಕರ್ತೆಯರಿಗೆ ನಾವೇಲ್ಲರೂ ಸಹಕರಿಸಿ ಈ ಮಹಾಮಾರಿ ಕೊರೋನಾ ರೋಗ ಹರಡುವದನ್ನು ತಡೆದು ಕೋವಿಡ್-೧೯ ಮುಕ್ತ ಭಾರತವನ್ನು ನಿಮಿ೯ಸೋಣ.
