ಭಾನುವಾರ , ಜೂನ್ 16 2024
kn
Breaking News

ಹಸಿಕಂದಮ್ಮನನ್ನು ದೇವಸ್ಥಾನದಲ್ಲಿ ಎಸೆದ ಪಾಪಿಗಳು

Spread the love

ಮುಗಳಖೋಡ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದಲ್ಲಿ ಇಂದು ಬೆಳಗ್ಗೆನ ಜಾವ ಅಮಾನವೀಯ ಕೃತ್ಯ ನಡೆದಿರುವದು ಕಂಡು ಬಂದಿದೆ.

ಹೌದು, ಮುಗಳಖೋಡದ ಕೆನಾಲ್ ಆಫಿಸ್ ಹತ್ತಿರ ಇರುವ ಬಸವಣ್ಣನ ದೇವಸ್ಥಾನದಲ್ಲಿ ಮುಂಜಾನೆ ಸುಮಾರು 4 ಗಂಟೆ ಸುಮಾರಿಗೆ ಆಗತಾನೆ ಜನಿಸಿದ ಹಸಿಕಂದಮ್ಮನನ್ನು (ಗಂಡುಮಗು) ಹಾಕಿರುವ ಅಮಾನವೀಯ ಘಟನೆ ನಡೆದಿದೆ.

ದೇವಸ್ಥಾನದ ಹತ್ತಿರ ಜನರು ಕೂಡುತ್ತಿದಂತೆ ಘಟನಾ ಸ್ಥಳಕ್ಕೆ ಆಶಾಕಾಯ೯ಕರ್ತೆಯರು, ಆರೋಗ್ಯ ಕೇಂದ್ರದ ನಸ್೯, ಆರಕ್ಷಕ ಠಾಣೆ ಸಿಬ್ಬಂದಿ ಎ.ಎಸ್. ಐ ದುಂಡಿನಮನಿ ಬೇಟಿ ನೀಡಿ ಆ ಕಂದಮ್ಮನ ರಕ್ಷಣೆಯಲ್ಲಿ ತೊಡಗಿದ್ದಾರೆ.

ಈ ಘಟನೆಯನ್ನು ಪರಿಶೀಲಿಸಿ ಮಗುವನ್ನು ಸಂಬಂಧಿಸಿದವರಿಗೆ ಹಸ್ತಾಂತರ ಮಾಡುವ ಕೆಲಸ ಮಾಡುವದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸ್ಥಳೀಯ ಜನರನ್ನು ಆ ಘಟನೆ ಬಗ್ಗೆ ಮಾಹಿತಿ ಕೇಳಿದಾಗ ಬೆಳಿಗ್ಗೆ 4-5 ಗಂಟೆ ಸುಮಾರಿಗೆ ಈ ಗಂಡು ಮಗವನ್ನು ಹಾಕಿ ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಈ ಕಂದಮ್ಮನ ರಕ್ಷಣೆ ಆಶಾ ಕಾಯ೯ಕತ೯ರು ಹಾಗೂ ಸ್ಟಾಪ್ ನಸ್೯ ಅವರ ಹೆಗಲಮೇಲಿದೆ.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page