ಭಾನುವಾರ , ಜೂನ್ 16 2024
kn
Breaking News

ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಆಹಾರ ಸಾಮಗ್ರಿಗಳ ವಿತರಣೆ

Spread the love

ಮುಗಳಖೋಡ: ಪ್ರಪಂಚವನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ರೋಗದಿಂದಾಗಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಗಳಖೋಡ ಪಟ್ಟಣದ ಡಾ.ಸಿ.ಬಿ.ಕುಲಿಗೋಡ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಹಾಗೂ ರೆಡ್ ಕ್ರಾಸ್ ಘಟಕ ಮತ್ತು ಪಟ್ಟಣದ ನಿಸರ್ಗಧಾಮ ಗ್ರಾಮೀಣಾಭಿವ್ರದ್ದಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಆಹಾರ ಪದಾರ್ಥಗಳಾದ ಹಣ್ಣು ತರಕಾರಿ ವಿವಿಧ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪೂಜ್ಯರಾದ ಅಲ್ಲಯ್ಯ ಹಿರೇಮಠ ಮಾತನಾಡಿ ಮಹಾಮಾರಿ ಕೊರೊನಾ ರೋಗದಿಂದ ದೇಶದ ಜನರು ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯನ್ನು ನಾವು ಎಂದು ಕಂಡಿರಲಿಲ್ಲ. ಈ ಭಯಾನಕ ಕೊರೊನಾ ರೋಗ ಬಂದು ನಮ್ಮ ದೇಶದ ಜನಜೀವನವನ್ನು ದುಸ್ಥಿತಿಗೆ ತಂದಿದೆ. ಈ ಸಮಯದಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ಮಾನವೀಯತೆ ಹಾಗೂ ನಮ್ಮೇಲ್ಲರ ಕತ೯ವ್ಯವಾಗಿದೆ.

ನಮ್ಮ ಊರಿನ ಹಿರಿಯರಾದ ಡಾ.ಸಿ.ಬಿ.ಕುಲಿಗೋಡ ಮಾಗ೯ದಶ೯ದಲ್ಲಿ ಅವರು ಮಗನಾದ ಸಂಜಯ ಕುಲಿಗೋಡ ಅವರು ಬಡಜನರಿಗೆ, ಸ್ಲಂ ಪ್ರದೇಶದಲ್ಲಿನ ಜನರಿಗೆ ಈಗಾಗಲೇ ಸಾಕಷ್ಟು ಆಹಾರ ಪದಾರ್ಥಗಳನ್ನು ಹಾಲು ಹಣ್ಣುಗಳನ್ನು ತರಕಾರಿಗಳನ್ನು ವಿತರಿಸಿದ್ದಾರೆ. ಅಂತಹ ಮಹನೀಯರ ಸಂಸ್ಥೆಯ ವಿಧ್ಯಾರ್ಥಿಗಳು ಇಂದು ಈ ಸಾಮಗ್ರಿ ವಿತರಣೆ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳುತ್ತಾ ಆದಷ್ಟು ಬೇಗನೆ ಮಹಾಮಾರಿ ಕೊರೊನಾ ನಮ್ಮ ದೇಶ ಹಾಗೂ ಇಡೀ ಪ್ರಪಂಚವನ್ನೆ ಬಿಟ್ಟು ತೊಲಗಲಿ ಎಂದು ಆ ದೇವರಲ್ಲಿ ಕೈಮುಗಿದು ಪ್ರಾಥಿ೯ಸುವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾಯ೯ರಾದ ಪ್ರೊ. ಪ್ರಕಾಶ ಕಂಬಾರ, ಪಿ.ಓ ಸಂಗಮೇಶ ಹಿರೇಮಠ, ಎಸ್ ಎಂ ಕುಲಿಗೋಡ, ಮಹಾಂತೇಶ ಕುಲಿಗೋಡ, ಕ್ರಷ್ಣಾ ಬದನೆಕಾಯಿ, ಶ್ರೀಕಾಂತ ಕೆಂಚಣ್ಣವರ, ರಾಜು ಕುಲಿಗೋಡ ಹಾಗೂ ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page