ಭಾನುವಾರ , ಡಿಸೆಂಬರ್ 22 2024
kn
Breaking News

gcsteam

ಅದ್ದೂರಿ ಹೋಳಿಹುಣ್ಣಿಮೆ ಆಚರಣೆ

ಹಳ್ಳೂರ: ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತ್ತು. ರವಿವಾರ ಬೆಳಿಗ್ಗೆ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಪೂಜೆ, ನೈವೇಧ್ಯ ಸಲ್ಲಿಸಲಾಯಿತ್ತು. ಸಂಜೆ 6 ಗಂಟೆಗೆ ಗ್ರಾಮದ ಹಳಬರು ಕಾಮನನ ಪ್ರದಕ್ಷಣೆಗೆ ಪೂಜೆ ಸಲ್ಲಿಸಿದರು. ಸೋಮವಾರ ಬೆಳಗಿನ ಜಾವ 4 ಗಂಟೆಗೆ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ಪಾದಯಾತ್ರಿಕರಿಗೆ ಬಿಳ್ಕೋಟ್ಟು 5 ಗಂಟೆಗೆ ಕಾಮನ ದಹನ ಮಾಡಲಾಯಿತ್ತು. ಚಿಕ್ಕಮಕ್ಕಳು, ಯುವಕರು ಹಲಗಿ ಬಡೆತದೊಂದಿಗೆ, ಹಾಗೂ ಅತಿ ಹೆಚ್ಚು ನೃತ್ಯದೊಂದಿಗೆ ಕುಣಿದು, ಪರಸ್ಪರ ವಿವಿಧ …

Read More »

ಬೆಳಗಾವಿಯಲ್ಲಿ ತಾಯಿ & ಮಕ್ಕಳ ಆಸ್ಪತ್ರೆ ಸ್ಥಾಪಿಸುವಂತೆ ಸಂಸದ ಕಡಾಡಿ ಒತ್ತಾಯ

ಮೂಡಲಗಿ: ಬೆಳಗಾವಿ ವೃತ್ತದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಒತ್ತಾಯಿಸಿದರು. ಮಂಗಳವಾರ (ಮಾ 23) ರಂದು ಸಂಸತ್ತಿನ ರಾಜ್ಯಸಭೆಯಲ್ಲಿ ಸಂಸದರಾದ ಈರಣ್ಣ ಕಡಾಡಿ ಅವರು ಕೇಳಿದ ಪ್ರಶ್ನೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ ಉತ್ತರಿಸಿದ ಅವರು ಬೆಳಗಾವಿ ವೃತ್ತದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸ್ಥಾಪಿಸುವ ಕುರಿತು …

Read More »

ಮೂಡಲಗಿ: ಅಮ್ಮ ಫೌಂಡೇಶನ್, ಗೊಜ್ಜು ಸಂಸ್ಥೆಗಳಿಂದ ಪಟ್ಟಣದಲ್ಲಿ ಸ್ವಚ್ಚತಾ ಕಾರ್ಯ

ಮೂಡಲಗಿ : ರಾಯಬಾಗದ ಅಮ್ಮ ಫೌಂಡೇಶನ್, ಬೆಂಗಳೂರಿನ ಗೊಜ್ಜು ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮೂಡಲಗಿ ಪಟ್ಟಣದ ರುದ್ರ ಭೂಮಿ, ಈರಣ್ಣ ದೇವಸ್ಥಾನ ಹತ್ತಿರ ಇರುವ ನೀರಿನ ಕಾಲುವೆಯನ್ನು ಸ್ವಚ್ಛತೆ ಮಾಡಿದರು. ಅಮ್ಮ ಫೌಂಡೇಶನ್ ನಿರ್ದೇಶಕ ರಾಜು ಗಸ್ತಿ ಮಾತನಾಡಿ, ಇದೊಂದು ಸಮಾಜ ಸೇವೆಯ ಕಾರ್ಯವಾಗಿದೆ ಇಂತಹ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಸ್ವಚ್ಛತಾ ಕೆಲಸಕ್ಕೆ ಬರುವ ಬಡ ಕುಟುಂಬಗಳಿಗೆ ದಿನ ಬಳಕೆ ವಸ್ತುಗಳನ್ನು ನೀಡಲಾಗುತ್ತದೆ. ಸ್ವಚ್ಛತಾ ಕಾರ್ಯದಲಿ 65 ಜನರು ಸ್ವಯಂ …

Read More »

ವಿದ್ಯುತ್ ಮಿತ ಬಳಕೆ ಮಾಡಿ : ಕುರಿ

ಮೂಡಲಗಿ: ಸಾರ್ವಜನಿಕರ ಸಿಬ್ಬಂದಿಗಳ ಮೇಲಾಧಿಕಾರಿಗಳ ಸಹಾಯ ಸಹಕಾರದೊಂದಿಗೆ, ಗ್ರಾಹಕರನ್ನು ರೈತರನ್ನು ವಿಶ್ವಾಸಕ್ಕೆ ತಗೆದುಕೊಂಡು ಉತ್ತಮ ಸೇವೆ ಸಲ್ಲಿಸುವದಾಗಿ ನೂತನ ಹಳ್ಳೂರ ಹೆಸ್ಕಾಂ ಶಾಖಾಧಿಕಾರಿ ಬಿ.ವಾಯ್ ಕುರಿ ಹೇಳಿದರು. ಅವರು ಸಮೀಪದ ಮುನ್ಯಾಳ ಗ್ರಾ.ಪಂ ಕಾರ್ಯಾಲಯದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ, ಪ್ರಮುಖವಾಗಿ ರೈತ ದೇಶದ ಬೆನ್ನೆಲೆಬಾಗಿದ್ದಾರೆ. ಅನ್ನ ನೀಡುವ ರೈತರಿಗೆ ಪ್ರಮುಖವಾಗಿ ನೀರು, ಗೋಬ್ಬರ, ಭೀಜಗಳು ಅತ್ಯಾವಶ್ಯಕ. ನೀರು ಪಡೆಯಲು ವಿದ್ಯುತ್ ಬೇಕು, ಸಮರ್ಪಕವಾಗಿ ವಿದ್ಯುತ್ ಪೂರೈಕೆ …

Read More »

ರಾಮದುರ್ಗ ತಾಲೂಕು ಛಾಯಾಗ್ರಾಹಕರ ಹಾಗೂ ವಿಡಿಯೋ ಗ್ರಾಫರ್ಸ್ ಸರ್ವಸದಸ್ಯರ ಸಾಮಾನ್ಯ ಸಭೆ ಮತ್ತು ಕಾರ್ಯಾಗಾರ

ರಾಮದುರ್ಗ ಪಟ್ಟಣದ ಹೊರವಲಯದಲ್ಲಿರುವ ನಟರಾಜ ಶಾಮಿಯಾನ್ ಹಾಲ್ ನಲ್ಲಿ ಇಂದು ದಿನಾಂಕ 20/03/2021 ರಂದು ರಾಮದುರ್ಗ ತಾಲೂಕು ಛಾಯಾಗ್ರಾಹಕರ ಹಾಗೂ ವಿಡಿಯೋಗ್ರಾಫರ್ ಅಸೋಸಿಯೇಶನ್ ರಾಮದುರ್ಗ ಇವರಿಂದ ಸರ್ವಸದಸ್ಯರ ಸಾಮಾನ್ಯ ಸಭೆ ಮತ್ತು ಕಾರ್ಯಾಗಾರ ಹಾಗೂ ಕುಮಾರಿ ಚಿರ ಸುಮಾ ಎಮ್ ದೊಡ್ಡಮನಿ ಇವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಈ ಒಂದು ಕಾರ್ಯಕ್ರಮದಲ್ಲಿ ರಾಮದುರ್ಗದ ಸಿದ್ಧಾರೂಢ ಮಠದ ಜಗದಾತ್ಮಾನಂದ ಸ್ವಾಮೀಜಿ ದೀಪ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಚಾಲನೆ ನೀಡಿದರು. ರಾಮದುರ್ಗದ …

Read More »

ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಮೂಡಲಗಿ: ಕರ್ನಾಟಕ ರಾಜ್ಯ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ( 6 ರಿಂದ 8 ನೇ ತರಗತಿ) ಸಂಘದ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು ಎಂದು ಚುನಾವಣಾಧಿಕಾರಿ ಬಿ.ಬಿ ಕಡಪಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನೂತನ ಅಧ್ಯಕ್ಷ ಅಶೋಕ ಮಧುರಿ ಮಾತನಾಡಿ, ಶಿಕ್ಷಕರು ಮಕ್ಕಳ ಭದ್ರ ಬುನಾಧಿ ಹಾಕಲು ಪ್ರಮುಖರಾಗಿದ್ದಾರೆ. ಶೈಕ್ಷಣಿಕವಾಗಿ ಕಾರ್ಯಚಟುವಟಿಕೆಗಳು ನಡೆದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುವದು. ಅದರ ಸಂಪೂರ್ಣ ಯಶಸ್ಸಿನಲ್ಲಿ ಶಿಕ್ಷಕರ ಜವಾಬ್ದಾರೆ …

Read More »

ಆರೋಗ್ಯವಂತ ವ್ಯಕ್ತಿಗಳಿಗೆ ಕೊರೋನಾ ಸೋಂಕು ಇದೆ ಎಂದು ವರದಿ ನೀಡಿದ ಆರೋಗ್ಯ ಇಲಾಖೆಯ ಸಿಬ್ಬಂದಿ

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನ ಸಮೀಪದ ಕೊಳಚಿ ಗ್ರಾಮದಲ್ಲಿ ಈ ಯಡವಟ್ಟು ನಡೆದಿದ್ದೆ. ?ವಿಡಿಯೋ ನೋಡಿ. ಆರೋಗ್ಯವಂತ ವ್ಯಕ್ತಿಗಳಿಗೆ ಕೊರೋನಾ ಸೋಂಕು ಇದೆ ಎಂದು ವರದಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿಯ ಯಡವಟ್ಟಿನ ವಿರುದ್ಧ ಕೊಳಚಿ ಗ್ರಾಮದ ಜನರು ಶುಕ್ರವಾರ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸಿದರು. ಕೊಳಚಿ ಗ್ರಾಮದಲ್ಲಿ ಗುರುವಾರ 20 ಕೊರೋನಾ ಪಾಸಿಟಿವ್ ಪತ್ತೆ ಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ನೀಡಿತ್ತು. ಆದರೆ ಇಲಾಖೆ …

Read More »

ಶಿಕ್ಷಕಿ ಚಂದ್ರಕಲಾ ದುರಗಣ್ಣವರ ಮೇರಿ ದೇವಾಸಿಯಾ ಪ್ರಶಸ್ತಿಗೆ ಆಯ್ಕೆ

ಮೂಡಲಗಿ: ರಾಜ್ಯ, ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದವತಿಯಿಂದ ನೀಡುವ ಮೇರಿ ದೇವಾಸಿಯಾ ಪ್ರಶಸ್ತಿಗೆ ಮೂಡಲಗಿ ವಲಯದ ಮೇಳವಂಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಚಂದ್ರಕಲಾ ನಾಗಪ್ಪ ದುರಗಣ್ಣವರ (ಸಣ್ಣಕ್ಕಿ) ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ಮಾ. 21 ರಂದು ರವಿವಾರ ಸವದತ್ತಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ಮುಂಜಾನೆ 10-00 ಗಂಟೆಗೆ ಜರುಗಲಿದೆ ಎಂದು …

Read More »

ಭಾರತೀಯ ಕೃಷಿಕ ಸಮಾಜಕ್ಕೆ ಬಸವರಾಜ ಪಾಟೀಲ ನೇಮಕ

ಮೂಡಲಗಿ: ಭಾರತೀಯ ಕೃಷಿಕ ಸಮಾಜದ ಮೂಡಲಗಿ ತಾಲೂಕಾಧ್ಯಕ್ಷರಾಗಿ ಪಂಚಮಸಾಲಿ ಮುಂಖಂಡ ಬಸವರಾಜ ಈರನಗೌಡ ಪಾಟೀಲ ಅವರನ್ನು ನೇಮಕ ಮಾಡಿ ರಾಷ್ಟ್ರೀಯ ಅಧ್ಯಕ್ಷ ಡಾ. ಕಿಶನಕುಮಾರ ಚೌದರಿ ಆದೇಶ ನೀಡಿದ್ದಾರೆ. ತಾಲೂಕಿನ ರೈತ ಚಿಂತಕರಾಗಿ ರೈತಾಪಿ ವರ್ಗದವರಿಗೆ, ಕೃಷಿಕ ಮಹಿಳೆಯರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಘಟಕಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆ ಮಾರ್ಗದರ್ಶನ ನೀಡುವ ಮೂಲಕ ತಾಲೂಕಿನ ರೈತರಿಗೆ ಅನುಕೂಲವಾಗುವ ಕಾರ್ಯಗಳನ್ನು …

Read More »

ಶಾಲಾ ಮಕ್ಕಳಿಗೆ, ಪಾಲಕರಿಗೆ ಅಚ್ಚುಮೆಚ್ಚಿನ ಗುರು | ಶಿಕ್ಷಕನ ನಿವೃತ್ತಿಯಿಂದ ಗ್ರಾಮದಲ್ಲಿ ಬೇಸರದ ಛಾಯೆ ‘ಶಿಕ್ಷಕನ ಕಾಳಜಿಯಿಂದ ಶೈಕ್ಷಣಿಕ ಕಲರವ’

ವರದಿ:ಕೆ.ವಾಯ್ ಮೀಶಿ ಮೂಡಲಗಿ: ಸರ್ಕಾರಿ ಶಾಲೆಗಳು ಮಕ್ಕಳ ಕೊರತೆಯಿಂದ ಶಾಲೆಗಳು ಮುಚ್ಚುವಂತ ಪರಸ್ಥಿತಿ ನಿರ್ಮಾಣವಾಗಿದೆ. ಆದರೆ ಶೈಕ್ಷಣಿಕ ಕಾಳಜಿಯುಳ್ಳ ಶಿಕ್ಷಕರೊಬ್ಬರ ಪ್ರಯತ್ನದಿಂದ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು. ಮಕ್ಕಳ ಜೊತೆ ಮಕ್ಕಳಾಗಿದ್ದು ಪಾಠ ಮಾಡುವ ಅಚ್ಚುಮೆಚ್ಚಿನ ಗುರು. ಆದರೆ ಶಾಲಾ ಮಕ್ಕಳಿಗೆ, ಪಾಲಕರಿಗೆ, ಎಸ್‍ಡಿಎಮ್‍ಸಿ ಸದಸ್ಯರು ಮತ್ತು ಸಿಬ್ಬಂದಿಗಳಿಗೆ ಶಿಕ್ಷಕನ ನಿವೃತ್ತಿಯಿಂದಾಗಿ ಗ್ರಾಮದಲ್ಲಿ ಬೇಸರದ ಛಾಯೆ ಮೂಡಿದೆ. ತಾಲೂಕಿನ ತಳಕಟನಾಳ ಸರಕಾರಿ ಶಾಲೆಯಲ್ಲಿ ಪ್ರಧಾನ ಗುರುಗಳಾಗಿದ್ದ ರವೀಂದ್ರ ಕನಕಿಕೋಡಿ ಅವರು …

Read More »

You cannot copy content of this page