ಬುಧವಾರ , ಮೇ 31 2023
kn
Breaking News

ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Spread the love

ಮೂಡಲಗಿ: ಕರ್ನಾಟಕ ರಾಜ್ಯ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ( 6 ರಿಂದ 8 ನೇ ತರಗತಿ) ಸಂಘದ ಮೂಡಲಗಿ ತಾಲೂಕಾ ಘಟಕದ ಪದಾಧಿಕಾರಿಗಳ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆಯಿತು ಎಂದು ಚುನಾವಣಾಧಿಕಾರಿ ಬಿ.ಬಿ ಕಡಪಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಅಧ್ಯಕ್ಷ ಅಶೋಕ ಮಧುರಿ ಮಾತನಾಡಿ, ಶಿಕ್ಷಕರು ಮಕ್ಕಳ ಭದ್ರ ಬುನಾಧಿ ಹಾಕಲು ಪ್ರಮುಖರಾಗಿದ್ದಾರೆ. ಶೈಕ್ಷಣಿಕವಾಗಿ ಕಾರ್ಯಚಟುವಟಿಕೆಗಳು ನಡೆದಾಗ ಮಾತ್ರ ಶಿಕ್ಷಣ ಪರಿಪೂರ್ಣವಾಗುವದು. ಅದರ ಸಂಪೂರ್ಣ ಯಶಸ್ಸಿನಲ್ಲಿ ಶಿಕ್ಷಕರ ಜವಾಬ್ದಾರೆ ಮಹತ್ವದ್ದಾಗಿರುತ್ತದೆ. ಶಿಕ್ಷಕರ ಬೇಕು ಬೇಡಿಕೆಗಳು, ನೂತನ ಚಟುವಟಿಕಾ ವಿಧಾನಗಳು, ಅನುಭವಿಸುವ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಂಘದ ಕಾರ್ಯ ಮಹತ್ವದ್ದಾಗಿದೆ. ಸ್ಥಳೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಹಾಗೂ ಬಿಇಒರವರ ಕಾರ್ಯವೈಕರಿಗಳು ನೀಜಕ್ಕೂ ಮಾದರಿಯಾಗಿವೆ. ಮೇಲಾಧಿಕಾರಿಗಳ, ಜನಪ್ರತಿನಿಧಿಗಳ, ಶಿಕ್ಷಕ ಸಮೂಹ, ಸಾರ್ವಜನಿಕರೊಂದಿಗೆ ಉತ್ತಮ ಒಡನಾಟದೊಂದಿಗೆ ವೃತ್ತಿ ಪಾವಿತ್ರ್ಯತೆ ಕಾಪಾಡಿಕೊಳ್ಳೂಣ ಎಂದರು.
ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಅಶೋಕ ಮಧುರಿ, ಪ್ರಧಾನ ಕಾರ್ಯದರ್ಶಿ ಹನುಮಂತ ದಡ್ಡಿಮನಿ, ಖಜಾಂಚಿಆರ್.ಆರ್ ಖಾನಪ್ಪನವರ, ಉಪಾಧ್ಯಕ್ಷ ಸುರೇಶ ಸವದತ್ತಿ, ಗೌರವ ಅಧ್ಯಕ್ಷ ಅಲ್ಲಪ್ಪ ನಾಯಕ, ಸಂಘಟನಾ ಕಾರ್ಯದರ್ಶಿಗೋವಿಂದ ಸಣ್ಣಕ್ಕಿ, ಸಹ ಕಾರ್ಯದರ್ಶಿ ಕೆ.ಎಸ್ ಕರಗಣ್ಣಿ, ಕ್ರೀಡಾ ಕಾರ್ಯದರ್ಶಿ ಕುಮಾರ ಐದಮನಿ, ಸಾಂಸ್ಕøತಿಕ ಕಾರ್ಯದರ್ಶಿ ಬಾಳಪ್ಪ ವರಲ್ಯಾಗೋಳ, ಸಂಘದ ವಕ್ತಾರ ಜಯಶ್ರೀ ಹುದ್ದಾರ, ನಿರ್ಧೇಶಕರಾಗಿ ಎಸ್.ಎಸ್ ಪಾಟೀಲ, ಬಂದೇನಮಾಜ ಮೋಮಿನ, ಭೀಮಪ್ಪ ಗೋರಖನಾಥ ಆಯ್ಕೆಯಾಗಿದ್ದಾರೆ.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page