ಶನಿವಾರ , ಜುಲೈ 20 2024
kn
Breaking News

ರಾಮದುರ್ಗ ತಾಲೂಕು ಛಾಯಾಗ್ರಾಹಕರ ಹಾಗೂ ವಿಡಿಯೋ ಗ್ರಾಫರ್ಸ್ ಸರ್ವಸದಸ್ಯರ ಸಾಮಾನ್ಯ ಸಭೆ ಮತ್ತು ಕಾರ್ಯಾಗಾರ

Spread the love

ರಾಮದುರ್ಗ ಪಟ್ಟಣದ ಹೊರವಲಯದಲ್ಲಿರುವ ನಟರಾಜ ಶಾಮಿಯಾನ್ ಹಾಲ್ ನಲ್ಲಿ ಇಂದು ದಿನಾಂಕ 20/03/2021 ರಂದು ರಾಮದುರ್ಗ ತಾಲೂಕು ಛಾಯಾಗ್ರಾಹಕರ ಹಾಗೂ ವಿಡಿಯೋಗ್ರಾಫರ್ ಅಸೋಸಿಯೇಶನ್ ರಾಮದುರ್ಗ ಇವರಿಂದ ಸರ್ವಸದಸ್ಯರ ಸಾಮಾನ್ಯ ಸಭೆ ಮತ್ತು ಕಾರ್ಯಾಗಾರ ಹಾಗೂ ಕುಮಾರಿ ಚಿರ ಸುಮಾ ಎಮ್ ದೊಡ್ಡಮನಿ ಇವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.

ಈ ಒಂದು ಕಾರ್ಯಕ್ರಮದಲ್ಲಿ ರಾಮದುರ್ಗದ ಸಿದ್ಧಾರೂಢ ಮಠದ ಜಗದಾತ್ಮಾನಂದ ಸ್ವಾಮೀಜಿ ದೀಪ ಬೆಳಗಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಚಾಲನೆ ನೀಡಿದರು.

ರಾಮದುರ್ಗದ ಚಿರ ಸುಮಾ ಎಮ್ ದೊಡ್ಡಮನಿ ಇವರು ರಾಷ್ಟ್ರಮಟ್ಟದ ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಇಮಲಿ ಎಂಬ ಹಿಂದಿ ಧಾರಾವಾಹಿಯಲ್ಲಿ ಪಾತ್ರ ವಹಿಸಿದ್ದು ಇದು ನಮ್ಮ ರಾಮದುರ್ಗಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ ಹಾಗೂ ಈ ಸಂದರ್ಭದಲ್ಲಿ ರಾಮದುರ್ಗ ತಾಲೂಕು ಛಾಯಾಗ್ರಾಹಕರು ಮತ್ತು ವಿಡಿಯೋ ಗ್ರಫರ್ಸ್ ಇವರು ಚಿರ ಸುಮಾ ಎಮ್ ದೊಡ್ಡಮನಿ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಿದರು.

ಹಾಗೂ ರಾಮದುರ್ಗದ ಶ್ರೀ ಸಿದ್ಧಾರೂಢ ಮಠದ ಅಜ್ಜನವರು ಕೂಡ ಈ ಒಂದು ಚಿರಸುಮಾ ಎಮ್ ದೊಡ್ಡಮನಿ ಇವರಿಗೆ ಆಶೀರ್ವಾದ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಮಾಡಿದರು.

ರಾಮದುರ್ಗ ತಾಲೂಕು ಛಾಯಾಗ್ರಾಹಕರು ವಿಡಿಯೋಗ್ರಾಫರ್ ಅಸೋಸಿಯೇಶನ್ ರಾಮದುರ್ಗ ಸರ್ವಸದಸ್ಯರ ಸಾಮಾನ್ಯ ಸಭೆ ಮತ್ತು ಕಾರ್ಯಾಗಾರ ಸಭೆಯನ್ನು ಮುಖ್ಯ ಅತಿಥಿಗಳಾದ ಮಂಜು ಕುಂದರಗಿ ಜಿಲ್ಲಾ ಕಾರ್ಯದರ್ಶಿ ಬೆಳಗಾವಿ ಜಿಲ್ಲಾ ಛಾಯಾಗ್ರಾಹಕರ ಸಂಘ ಇವರು ಈ ಒಂದು ಕಾರ್ಯಕ್ರಮವನ್ನು ನೆರವೇರಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ರಾಮದುರ್ಗ ತಾಲೂಕು ಛಾಯಾಗ್ರಹಕರ ಅಧ್ಯಕ್ಷರಾದ ಶಿವರಾಜ್ ಹಿರೇಮಠ ಹಾಗೂ ಗೌರವಾಧ್ಯಕ್ಷರಾದ ಮಂಜುನಾಥ ದೊಡ್ಡಮನಿ, ಉಪಾಧ್ಯಕ್ಷರಾದ ಗುರು ಮುಗುಳಿ, ಕಾರ್ಯದರ್ಶಿಗಳಾದ ರಾಘವೇಂದ್ರ ಹೂಗಾರ್, ತಂತ್ರಜ್ಞಾನ ಸಲಹೆಗಾರರು ವಿರೂಪಾಕ್ಷಪ್ಪ ವಾಳೇದಾರ, ಖಜಾಂಚಿ ಯಾದ ಸಹಾಸ ಬಾರಕಿ , ಸಂಘಟನಾ ಕಾರ್ಯದರ್ಶಿ ಗಣಪತಿ ಖಾನಪೇಠ, ಸಂಘಟನಾ ಕಾರ್ಯದರ್ಶಿ ಮಾಬೂಸಾಬ್ ತೊರಗಲ್, ರಾಮದುರ್ಗ ತಾಲೂಕು ಛಾಯಾಗ್ರಾಹಕರ ಕಡಕೋಳ ವಲಯ ಉಪಾಧ್ಯಕ್ಷರು ಅಶೋಕ ಯಾದವಾಡ, ಸಂಘ ಸಂಚಾಲಕರು ಮಾಂತೇಶ್ ನಾಯಕ್, ರಾಮದುರ್ಗ ತಾಲೂಕು ಛಾಯಾಗ್ರಾಹಕರ ವಲಯದ ಉಪಾಧ್ಯಕ್ಷರು ಕಾಂತೇಶ ರಾಠೋಡ್, ಸಹಕಾರ್ಯದರ್ಶಿ ಚಿದಾನಂದ ರಕ್ಷಿ, ರಾಮದುರ್ಗ ತಾಲೂಕು ಛಾಯಾಗ್ರಾಹಕರ ಸುರೇಬಾನ್ ವಲಯದ ಉಪಾಧ್ಯಕ್ಷರು ಶರಣಪ್ಪ ಬಡಿಗೇರ್, ಚಿದಾನಂದ ಸ್ಟುಡಿಯೋ ಮುದಕವಿ ರಾಮದುರ್ಗ ತಾಲೂಕು ಛಾಯಾಗ್ರಹಕರು ಮತ್ತು ವಿಡಿಯೋ ಗ್ರಫರ್ಸ್ ಸರ್ವ ಸದಸ್ಯರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ :ಶ್ರೀಕಾಂತ ಪೂಜಾರ್ ರಾಮದುರ್ಗ.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page