ಮೂಡಲಗಿ: ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಮೂಡಲಗಿ ಘಟಕದ ೨೦೨೨-೨೭ ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ವಿ.ಟಿ ಯರಗಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪದಾಧಿಕಾರಿಗಳ ವಿವರ: ರವಿಚಂದ್ರ ಹೊಸಟ್ಟಿ ( ಅಧ್ಯಕ್ಷರು), ಪರಸಪ್ಪ ಕುಲಕರ್ಣಿ (ಕಾರ್ಯದರ್ಶಿ), ಶ್ರೀಕಾಂತ ನ್ಯಾಮಗೌಡ(ರಾಜ್ಯ ಪರಿಷತ್ ಸದಸ್ಯರು), ಗುರವ್ವ ನರಗುಂದ (ಖಜಾಂಚಿ), ನಿರ್ದೇಶಕರುಗಳಾಗಿ ಉಮೇಶ ನುಗ್ಗಾನಟ್ಟಿ, ಶಿವಲಿಂಗ ಪೂಜೇರಿ, ಲತೀಪಸಾಬ ಕೊಕಟನೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವಿರೋಧವಾಗಿ ಆಯ್ಕೆಯಾಗಿರುವ …
Read More »ಶಾಂತಿಯುತವಾಗಿ ಬಕ್ರೀದ್ ಹಬ್ಬ ಆಚರಿಸಿ -ತಹಶೀಲ್ದಾರ ಡಿ ಜಿ ಮಹಾತ
ಮೂಡಲಗಿ: ಪಟ್ಟಣ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ಜುಲೈ ೧೦ ರಂದು ಆಚರಿಸುವ ಬಕ್ರೀದ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ತಹಸೀಲ್ದಾರ ಡಿ ಜಿ ಮಹಾತ ಹೇಳಿದರು. ಗುರುವಾರ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಬಕ್ರೀದ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಣೆ ಹಾಗೂ ಕಾನೂನು ಪಾಲನೆ ಎಲ್ಲರ ಹೊಣೆಯಾಗಿದ್ದು ಪರಸ್ಪರರು ಸಹೋದರತೆಯಿಂದ ಬಕ್ರೀದ ಆಚರಿಸಬೇಂದು ಹೇಳಿದರು. ಸಿಪಿಐ ಶ್ರೀಶೈಲ್ ಬ್ಯಾಕೂಡ …
Read More »ಲಯನ್ಸ್ ಮೂಡಲಗಿ ಪರಿವಾರದ ಅಧ್ಯಕ್ಷರಾಗಿ ಡಾ. ಎಸ್.ಎಸ್. ಪಾಟೀಲ
ಮೂಡಲಗಿ: ೨೦೨೨-೨೩ನೇ ಸಾಲಿಗೆ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷರಾಗಿ ಡಾ. ಸಿದ್ದನಗೌಡ ಎಸ್. ಪಾಟೀಲ, ಕಾರ್ಯದರ್ಶಿಯಾಗಿ ಸಂಗಮೇಶ ಕೌಜಲಗಿ, ಖಜಾಂಚಿಯಾಗಿ ಶಿವಬೋಧ ಯರಜರವಿ ಅವರು ಆಯ್ಕೆಯಾಗಿರುವರು. ಪದಗ್ರಹಣ: ಇದೇ ಜೂ. ೯ರಂದು ಸಂಜೆ ೬.೩೦ಕ್ಕೆ ಬಸವೇಶ್ವರ ನಗರದ ಪೂರ್ಣಪ್ರಜ್ಞಾ ಶಾಲಾ ಆವರಣದಲ್ಲಿ ಜರುಗಲಿರುವ ೨೦೨೨-೨೩ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಹಾರೂಗೇರಿಯ ಶರಣ ವಿಚಾರ ವಾಹಿನಿ ವೇದಿಕೆ ಅಧ್ಯಕ್ಷ ಶರಣ ಆಯ್.ಆರ್. ಮಠಪತಿ ಭಾಗವಹಿಸುವರು. …
Read More »ಪ್ರತಿಭಾ ಪುರಸ್ಕಾರಕ್ಕೆ ಸರಕಾರಿ ನೌಕರರ ಸಂಘದಿoದ ಮನವಿ
ಮೂಡಲಗಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿoದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರಿಕ್ಷೆಯಲ್ಲಿ ಶೇ ೯೦ಕ್ಕೂ ಹೆಚ್ಚು ಅಂಕಗಳಿಸಿರುವ ಸರ್ಕಾರಿ ನೌಕರರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ಮೂಡಲಗಿ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದ ಹಂಜಾಗೋಳ ತಿಳಿಸಿದ್ದಾರೆ. ಆನಲೈನ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಮಕ್ಕಳ ತಂದೆ ಅಥವಾ ತಾಯಿ ಕಡ್ಡಾಯವಾಗಿ ಸರ್ಕಾರಿ ನೌಕರಾಗಿರಬೇಕು ಹಾಗೂ ಅರ್ಜಿಯ ಜೊತೆಗೆ ಸೇವಾ ದೃಡಿಕರಣ ಪ್ರಮಾಣ …
Read More »ಉಪನಿರ್ದೇಶಕರ ಕಚೇರಿಯ ಮುಂದೆ ಸಾಂಕೇತಿಕ ಧರಣಿ:ಬೀರಪ್ಪ ಅಂಡಗಿ
ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಮುಂದೆ ಜು.೮ ರ ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಸಾಂಕೇತಿಕ ಧರಣಿ ನಡೆಸಲಿದ್ದಾರೆ. ತಮ್ಮ ಮೇಲಿನ ದೂರಿಗೆ ಸಂಬoಧಿಸಿದoತೆ ಸ್ಪಷ್ಟವಾದ ಲಿಖಿತ ಉತ್ತರವನ್ನು ನೀಡಲು ವಿಳಂಭ ನೀತಿಯನ್ನು ಅನುಸರಿಸುವುದರ ಜೊತೆಗೆ ೪ ತಿಂಗಳ ನಂತರ ಪುನ: ದುರುದ್ದೇಶದಿಂದ ವರದಿಯಲ್ಲಿ ಸ್ಪಷ್ಟವಾದ ಅಭಿಪ್ರಾಯವಿಲ್ಲ ಎಂಬ ಪತ್ರವನ್ನು ಮಾಡುವುದು ಹಾಗೂ ನಿಯಮ ಮೀರಿ ವಿಚಾರಣಾಧಿಕಾರಿಗಳಿಗೆ ಹಾಗೂ …
Read More »ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಮಹಾಮಂಡಳಕ್ಕೆ ಅವಿರೋಧ ಆಯ್ಕೆ
ಗೋಕಾಕ : ಹಿಡಕಲ್ ಡ್ಯಾಂ ಘಟಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳದ ನೂತನ ಅಧ್ಯಕ್ಷರಾಗಿ ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಅಶೋಕ ಶಿವಪುತ್ರ ಖಂಡ್ರಟ್ಟಿ ಹಾಗೂ ಉಪಾಧ್ಯಕ್ಷರಾಗಿ ಮುಗಳಖೋಡ ಗ್ರಾಮದ ಮಲ್ಲಿಕಾರ್ಜುನ ಪರಮಾನಂದ ಹುಂಡೇಕರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರದಂದು ಹಿಡಕಲ್ ಡ್ಯಾಂನ ಮಹಾಮಂಡಳದ ಪ್ರಧಾನ ಕಛೇರಿಯಲ್ಲಿ ಜರುಗಿದ ಮಹಾಮಂಡಳದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊoದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ …
Read More »ಬಾಲಶೇಖರ ಬಂದಿಗೆ ಅಂತರಾಷ್ಟ್ರೀಯ ಲಯನ್ಸ್ ಪ್ರಶಸ್ತಿ
ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಅವರು ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರ ಪ್ರಶಂಸನಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ೨೦೨೧-೨೨ನೇ ಸಾಲಿನಲ್ಲಿ ಪರಿಸರ ಕಾಳಜಿ, ನೇತ್ರ, ದಂತ, ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ (ಬಿಪಿ) ಹಲವಾರು ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಸಂಘಟನೆ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಪಾಕ್ಷಿಕ ಅನ್ನದಾಸೋಹ, ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಪಶು ಆರೋಗ್ಯ ಉಚಿತ ತಪಾಸಣೆ ಶಿಬಿರಗಳ ಸಂಘಟನೆ, ಸ್ವಚ್ಛತಾ ಅಭಿಯಾನ, …
Read More »ಪ್ರವೇಶಾತಿ ಶುಲ್ಕ ಹೆಚ್ಚಳ ಖಂಡಿಸಿ ಹಾಗೂ ಕಡಿಮೆಗೊಳಿಸುವಂತೆ ದಲಿತ ಸಂಘರ್ಷ ಸಮಿತಿಯಿಂದ ಮನವಿ
ಮೂಡಲಗಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರವೇಶಾತಿ ಶುಲ್ಕ ಹೆಚ್ಚಳ ಕ್ರಮ ಖಂಡಿಸಿ, ಹಾಗೂ ಶೀಘ್ರ ಶುಲ್ಕ ಕಡಿಮೆಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ ನೇತೃತ್ವದಲ್ಲಿ ತಹಸೀಲ್ದಾರ ಡಿ ಜಿ ಮಹಾತ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಲ್ಲಿ ಪದವಿ ಪ್ರವೇಶಾತಿಯ ಶುಲ್ಕವನ್ನು ಏಕಾಏಕಿ ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ ಪ್ರವೇಶಾತಿ ಶುಲ್ಕವನ್ನು ಹೆಚ್ಚಿಸಿದ್ದು ವಿದ್ಯಾರ್ಥಿಗಳಿಗೆ …
Read More »ವಿದ್ಯಾರ್ಥಿ ಜೀವನದಲ್ಲಿಯೇ ಪರೀಕ್ಷೆಗಳು ಅತ್ಯಂತ ಮಹತ್ವದ್ದಾಗಿವೆ:ಡಿಡಿಪಿಐ ಮೋಹನಕುಮಾರ ಹಂಚಾಟೆ
ಮೂಡಲಗಿ : ವಿದ್ಯಾರ್ಥಿ ಜೀವನದಲ್ಲಿಯೇ ಪರೀಕ್ಷೆಗಳು ಅತ್ಯಂತ ಮಹತ್ವದ್ದಾಗಿವೆ. ಅತೀ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಶಸ್ವಿ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಉಜ್ವಲವಾದ ಭವಿಷ್ಯವನ್ನು ನಿರ್ಮಿಸಿಕೋಳ್ಳಲು ಸಾದ್ಯ ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಶನಿವಾರ ಪಟ್ಟಣದ ಬಾಗೋಜಿ ಶಿಕ್ಷಣ ಸಂಸ್ಥೆಯಲ್ಲಿ ಜರುಗಿದ ೨೦೨೨-೨೩ ನೇ ಸಾಲಿನ ಎಸ್.ಎಸ್.ಎಲ್.ಸಿ ತರಗತಿ ಶಿಕ್ಷಕರ ಹಾಗೂ ಎನ್.ಎನ್.ಎಮ್.ಎಸ್ ಪ್ರತಿಭಾನ್ವೇಷನೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ …
Read More »ಆಹಾರ, ಆರೋಗ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸದೃಢವಾದ ದೇಹ ಮತ್ತು ಮನಸ್ಸುಗಳನ್ನು ಗಟ್ಟಿಗೊಳಿಸಬೇಕು :ಡಾ. ಬಾಬಣ್ಣವರ
ಮೂಡಲಗಿ: ಆದರ್ಶ ಪ್ರಜೆಗಳಾಗುವ ನಿಟ್ಟಿನಲ್ಲಿ ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡೆದುಕೊಳ್ಳಬೇಕು. ಆಹಾರ, ಆರೋಗ್ಯ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸದೃಢವಾದ ದೇಹ ಮತ್ತು ಮನಸ್ಸುಗಳನ್ನು ಗಟ್ಟಿಗೊಳಿಸಬೇಕು. ಯಾವುದೇ ವೃತ್ತಿಯಲ್ಲಿದ್ದರು ಅದರ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು, ದೇಶದ ಅಭಿವೃದ್ಧಿಗೆ ಪೂರಕರಾಗಬೇಕು ಎಂದು ಡಾ. ಪ್ರಶಾಂತ ಬಾಬಣ್ಣವರ ಹೇಳಿದರು. ಅವರು ನಗರದ ಶ್ರೀನಿವಾಸ ಶಾಲೆಯಲ್ಲಿ ಜರುಗಿದ ರಾಷ್ಟ್ರೀಯ ವೈದ್ಯರ ದಿನಾಚರಣೆಯಂದು ಅತೀಥಿಗಳಾಗಿ ಆಗಮಿಸಿ ಮಾತನಾಡಿದರು. ವಿದ್ಯಾರ್ಥಿನಿ ಅನಘಾ ಸ್ವಾಮಿ ಮಾತನಾಡಿ, ಸಮಾಜಕ್ಕೆ …
Read More »