ಮೂಡಲಗಿ: ಪಟ್ಟಣ ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ಜುಲೈ ೧೦ ರಂದು ಆಚರಿಸುವ ಬಕ್ರೀದ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ತಹಸೀಲ್ದಾರ ಡಿ ಜಿ ಮಹಾತ ಹೇಳಿದರು.
ಗುರುವಾರ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಬಕ್ರೀದ ಹಬ್ಬದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಮಾರ್ಗಸೂಚಿಯಂತೆ ಹಬ್ಬ ಆಚರಣೆ ಹಾಗೂ ಕಾನೂನು ಪಾಲನೆ ಎಲ್ಲರ ಹೊಣೆಯಾಗಿದ್ದು ಪರಸ್ಪರರು ಸಹೋದರತೆಯಿಂದ ಬಕ್ರೀದ ಆಚರಿಸಬೇಂದು ಹೇಳಿದರು.
ಸಿಪಿಐ ಶ್ರೀಶೈಲ್ ಬ್ಯಾಕೂಡ ಮಾತನಾಡಿ, ಯಾವುದೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಕಾನೂನು ಪಾಲನೆಯೊಂದಿಗೆ ಬಕ್ರೀದ ಹಬ್ಬವನ್ನು ಶಾಂತ ರೀತಿಯಲ್ಲಿ ಆಚರಿಸುವಂತೆ ಸಲಹೆ ನೀಡಿದರು.
ಪಶು ವೈದ್ಯಾಧಿಕಾರಿ ಬಿ ಎಸ್ ಗೌಡರ ಸರ್ಕಾರದ ನಿಯಮಾವಳಿಗಳನ್ನು ವಿವರಿಸಿ ಮಾತನಾಡಿದರು.
ಪಿಎಸ್‌ಐ ಎಚ್ ವೈ ಬಾಲದಂಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ,ವಂದಿಸಿದರು.
ತಾಲೂಕಾ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕರಾದ ಎಮ್ ಬಿ ವಿಭೂತಿ, ಪುರಸಭೆ ಆರೋಗ್ಯ ನಿರೀಕ್ಷಕ ಚಿದಾನಂದ ಮುಗುಳಖೋಡ, ಶಿಕ್ಷಣ ಸಂಯೋಜಕರಾದ ಸತೀಶ ಬಿ ಎಸ್ ವೇದಿಕೆಯಲ್ಲಿದ್ದರು.
ಮುಖಂಡರಾದ ಹಸನಸಾಬ ಮುಗುಟಖಾನ, ರವೀಂದ್ರ ಸಣ್ಣಕ್ಕಿ, ಅಜೀಜ ಡಾಂಗೆ, ಮಲೀಕ ಕಳ್ಳಿಮನಿ, ಮಲೀಕ ಹುಣಶ್ಯಾಳ, ಇರ್ಶಾದ ಪೀರಜಾದೆ, ಸುರೇಶ ಸಣ್ಣಕ್ಕಿ, ಇಮಾಮಹುಸೇನ ಮುಲ್ಲಾ, ಸಲೀಂ ಇನಾಮದಾರ, ಲಾಲಸಾಬ ಸಿದ್ದಾಪೂರ, ಮಲೀಕಸಾಬ ಪಾಶ್ಚಾಪೂರ, ಹುಸೇನಸಾಬ ತುಂಬಗಿ, ಶಕೀಲ ಬೇಪಾರಿ ಸೇರಿದಂತೆ ಮುಸ್ಲಿಂ ಸಮಾಜದ ಅನೇಕ ಮುಖಂಡರು ಇದ್ದರು.
