ಮೂಡಲಗಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರವೇಶಾತಿ ಶುಲ್ಕ ಹೆಚ್ಚಳ ಕ್ರಮ ಖಂಡಿಸಿ, ಹಾಗೂ ಶೀಘ್ರ ಶುಲ್ಕ ಕಡಿಮೆಗೊಳಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ಸಣ್ಣಕ್ಕಿ ನೇತೃತ್ವದಲ್ಲಿ ತಹಸೀಲ್ದಾರ ಡಿ ಜಿ ಮಹಾತ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಪ್ರಸಕ್ತ ಸಾಲಿನಲ್ಲಿ ಪದವಿ ಪ್ರವೇಶಾತಿಯ ಶುಲ್ಕವನ್ನು ಏಕಾಏಕಿ ಕಳೆದ ವರ್ಷಕ್ಕಿಂತ ಈ ವರ್ಷಕ್ಕೆ ಪ್ರವೇಶಾತಿ ಶುಲ್ಕವನ್ನು ಹೆಚ್ಚಿಸಿದ್ದು ವಿದ್ಯಾರ್ಥಿಗಳಿಗೆ ಹೊರೆಯಾಗಿದೆ ಈ ಹಿಂದೆ ಎರಡು ವರ್ಷಗಳವರೆಗೆ ಕೋವಿಡ್‌ನಿಂದ ಅನೇಕ ತೊಂದರೆಗಳಾಗಿ ಆರ್ಥಿಕವಾಗಿ ಚೇತರಿಸಿಕೊಂಡಿಲ್ಲ ಇದರ ನಡುವೆ ನಿತ್ಯ ಬಳಕೆ ವಸ್ತುಗಳ ಬೆಲೆ ಕೂಡ ಗಗನಕ್ಕೇರಿದೆ ಇಂತಹ ಸ್ಥಿತಿಯಲ್ಲಿ ಶುಲ್ಕ ಹೆಚ್ಚಿಸಿದ್ದು ವಿದ್ಯಾರ್ಥಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಹಿಂದೂಳಿದ ವರ್ಗಗಳ ಹಾಗೂ ಬಡ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತಿದೆ
ಮುಖ್ಯ ಮಂತ್ರಿಗಳು ಮದ್ಯ ಪ್ರವೇಶಿಸಿ ವಿಶ್ವವಿದ್ಯಾಲಯವು ಹೆಚ್ಚಿಸಿಸಿದ ಪ್ರವೇಶಾತಿ ಶುಲ್ಕವನ್ನು ಕಳೆದ ವರ್ಷದಂತೆಯೇ ಮುಂದುವರೆಸಲು ಸೂಕ್ತ ನಿರ್ದೇಶನ ನೀಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಬೀದಿಗಿಳಿದು ಉಗ್ರ ಪ್ರತಿಭಟನೆ, ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆಯಲ್ಲಿ ದಲಿತ ಸಂಘರ್ಷ ಸಮಿತಿ ತಾಲೂಕಾ ಸಂಚಾಲಕರಾದ ಶಾಬಪ್ಪ ಸಣ್ಣಕಿ, ಲಕ್ಷö್ಮಣ ತೆಳಗಡೆ, ಯಲ್ಲಪ್ಪ ಮಾನಕಪ್ಪಗೋಳ, ಪ್ರಕಾಶ ಹಿರೇಮೇತ್ರಿ, ರಮೇಶ ಈರಗಾರ, ಶಿವಾನಂದ ಹೊಸಮನಿ, ಯಶವಂತ ಮಂಟೂರ, ರಮೇಶ ಸಿಡ್ಲೆಪ್ಪಗೋಳ, ಜಾನ್ಸನ್ ತೊಂಡಿಕಟ್ಟಿ, ಸುಂದರ ಬಾಲಪ್ಪನವರ, ಪ್ರಕಾಶ ಮಂಟೂರ, ಗಂಗಾಧರ ಬಂಗೆನ್ನವರ, ಅನೀಲ ಗಸ್ತಿ, ಭೀಮಶಿ ದಾಸನವರ, ಶಿವಬಸು ರಡಟ್ಟಿ, ಪ್ರವೀಣ ಪೂಜೇರಿ, ಯಮನಪ್ಪ ಸಣ್ಣಮೇತ್ರಿ ಮತ್ತಿತರರು ಇದ್ದರು.
![](https://sarvavani.com/wp-content/uploads/2022/07/4MDLG1.jpg)