ಸೋಮವಾರ , ಸೆಪ್ಟೆಂಬರ್ 9 2024
kn
Breaking News

ಡಾ. ಸಿ ಬಿ.ಕುಲಿಗೋಡ ಅವರಿಂದ ಕಲ್ಲಂಗಡಿ ಹಣ್ಣು ವಿತರಣೆ

Spread the love

SUBSCRIBE YOUTUBE CHANNEL

ಮುಗಳಖೋಡ: ಜಗತ್ತಿನಾದ್ಯಂತ ಹಬ್ಬಿರುವ ಮಹಾಮಾರಿ ಕೊರೋನಾ ವಿರುದ್ದ ದೇಶಾದ್ಯಂತ ಎಲ್ಲೇಡೆ ಲಾಕ್ ಡೌನ್ ಘೋಷಣೆಯಾಗಿ ಹಲವಾರು ದಿನಗಳು ಜನಜೀವನ ದುಸ್ತರವಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಸಹ ಸಾರ್ವಜನಿಕರಿಗೆ ಈ ಕೊರೋನಾ ವೈರಾಣುವಿನ ಭೀಕರತೆ ಹಾಗೂ ಅದರಿಂದಾಗುವ ಜೀವಹಾನಿಯ ಬಗ್ಗೆ ನಿರಂತರವಾಗಿ ಮುಂಜಾಗ್ರತಾ ಕ್ರಮ ಹಾಗೂ ಕೊರೋನಾ ವೈರಾಣು ಹರಡದಂತೆ ಪಾಲಿಸಬೇಕಾದ ಕ್ರಮಗಳ ಕುರಿತಾದ ಸಂದೇಶಗಳನ್ನು ನೀಡತ್ತಲೇ ಇವೆ.

ಅದರಂತೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ದೃಷ್ಟಿಯಿಂದ ಗ್ರಾಮ ಮಟ್ಟದಲ್ಲೂ ಸಹ ನಿರಂತರ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಇಂತಹ ಸಮಯದಲ್ಲಿ ಪಟ್ಟಣದ ಹಿರಿಯರು ಜಿ.ಪಂ.ಮಾಜಿ ಸದಸ್ಯರಾದ ಡಾ. ಸಿ.ಬಿ.ಕುಲಿಗೋಡ ಅವರು ಅಬ್ಬಾಜಿ ಪೌಂಡೇಶನ್, ಪ್ರತಾಪರಾವ ಪಾಟೀಲ ಹಾಗೂ ವಿವೇಕರಾವ ಪಾಟೀಲ ಅವರ ಅಭಿಮಾನಿ ಬಳಗದವರು ಸೇರಿ ಸುಮಾರು ಹತ್ತು ಟನ್ ಮೆಲ್ಪಟ್ಟು ಕಲ್ಲಂಗಡಿ ಹಣ್ಣುಗಳನ್ನು ರೈತರಿಂದ ನೇರವಾಗಿ ಖರೀದಿಸಿ ಬಡ ಕುಟುಂಬಗಳಿಗೆ ವಿತರಣೆ ಮಾಡಿದರು.

ಈ ಸಮಯದಲ್ಲಿ ಡಾ.ಸಿ‌.ಬಿ.ಕುಲಿಗೋಡ ಮಾತನಾಡಿ ಇಂದು ಕೊರೊನಾ ರೋಗದಿಂದ ಇಡೀ ದೇಶವೇ ತಲ್ಲನಗೊಂಡಿದೆ. ರೈತರ ಸ್ಥಿತಿ ದುಸ್ಥರವಾಗಿದೆ. ಹಾಗಾಗಿ ರೈತರಿಗೆ ಸ್ವಲ್ಪ ಮಟ್ಟಿಗೆ ಸಹಾಯವಾಗಲೆಂದು ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಿ ಬಡಕುಟುಂಬಗಳಿಗೆ ವಿತರಿಸುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳಾದ ಜಿ.ವಿ.ಡಂಬಳ, ಪುರಸಭೆ ಸದಸ್ಯರಾದ ಅಂಜಲಿ ಕುಲಿಗೋಡ, ಸಂಜಯ ಕುಲಿಗೋಡ, ಕರೇಪ್ಪ ಮಂಟುರ, ಕಪೀಲ, ಮಯೂರ ಕುರಾಡೆ, ವಿಠ್ಠಲ ಯಡವನ್ನವರ, ರಾಮು ಪಾಟೀಲ, ರಮೇಶ್ ಕಾಪಸಿ, ರಮೇಶ್ ಯಡವನ್ನವರ, ಪಿ.ಬಿ.ಖೇತಗೌಡರ, ಸುರೇಶ್ ಹೊಸಪೇಟೆ, ಗೋಪಾಲ ಯಡವನ್ನವರ ಮುಂತಾದವರು ಉಪಸ್ಥಿತರಿದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page