ಬುಧವಾರ , ಅಕ್ಟೋಬರ್ 9 2024
kn
Breaking News

ಕಡಿಮೆಯಾಗುತ್ತಿಲ್ಲಾ ಜಿಲ್ಲೆಯಲ್ಲಿನ ಕೋರೊನಾ ಬೀತಿ

Spread the love

SUBSCRIBE YOUTUBE CHANNEL

ಬೆಳಗಾವಿ:  ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ಬೆಳಗಾವಿ ಜಿಲ್ಲೆಯಿಂದ ದೂರವಾಗುತ್ತಿದೆ ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಕಡಿಮೆ ಆಗುತ್ತಲೇ ಇದೆ, ಎನ್ನುವಷ್ಟರಲ್ಲಿ ಜಿಲ್ಲೆಯಲ್ಲಿ ಇಂದು ಶುಕ್ರವಾರ ಮಧ್ಯಾಹ್ನದ ಹೆಲ್ತ ಬುಲಿಟೀನ್ ನಲ್ಲಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಎರಡು ಪಾಸಟೀವ್ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 45ಕ್ಕೇರಿದೆ.

ಜಿಲ್ಲೆಯಲ್ಲಿ ಹೊಸದಾಗಿ ಸೋಂಕು ಬಾಧಿಸಿರುವವರಲ್ಲಿ ಒಬ್ಬರು 10 ವರ್ಷ ವಯಸ್ಸಿನ ಬಾಲಕಿಯಾಗಿದ್ದರೆ, ಇನ್ನೊಬ್ಬ 15 ವರ್ಷದ ಬಾಲಕನಾಗಿದ್ದಾನೆ. ಇಬ್ಬರೂ ರಾಯಬಾಗ ತಾಲೂಕು ಕುಡಚಿಯವರು ಎಂದು ತಿಳಿದಿದೆ.

ರಾಜ್ಯದಲ್ಲಿ ‌ಇಂದು‌ ಬೆಳಿಗ್ಗೆ ಒಟ್ಟು‌ 18 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅವರಲ್ಲಿ 11 ಮಂದಿ ಬೆಂಗಳೂರಿಗರು. ಉಳಿದಂತೆ ಬಾಗಲಕೋಟೆಯಲ್ಲಿ ‌ಇಬ್ಬರು ಮತ್ತು ವಿಜಯಪುರ, ಚಿಕ್ಕಬಳ್ಳಾಪುರ ಮತ್ತು ತುಮಕೂರಿನ ಒಬ್ನರಲ್ಲಿ ಸೋಂಕು ಪತ್ತೆಯಾಗಿದೆ.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page