ಮಂಗಳವಾರ , ಏಪ್ರಿಲ್ 23 2024
kn
Breaking News

ಮನೆಯಲ್ಲಿ ಇರುವುದು ಕೋರೊನಾಕ್ಕೆ ನಿಜವಾದ ಮದ್ದು: ಶಾಸಕ ಸತೀಶ ಜಾರಕಿಹೊಳಿ

Spread the love

ಮೂಡಲಗಿ: ‘ಕೊರೊನಾ ಸೋಂಕು ಹರಡದಂತೆ ಸಮಾಜದ ಎಲ್ಲ ಜನರು ಬದ್ದರಾಗಿರಬೇಕು. ಅಂತರ ಕಾಯ್ದುಕೊಳ್ಳುವುದು ಮತ್ತು ಮನೆಯಲ್ಲಿ ಇರುವುದು ಕೊರೊನಾಕ್ಕೆ ನಿಜವಾದ ಮದ್ದು’ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಮೂಡಲಗಿಯಲ್ಲಿ ಬುಧವಾರ ತಾಲ್ಲೂಕು ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣದ ಬಗ್ಗೆ ಚರ್ಚಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೂಡಲಗಿ ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಆಶಾ ಕಾರ್ಯಕರ್ತರ ಕಾರ್ಯವು ಶ್ಲಾಘನೀಯವಾಗಿದೆ.

ಆಶಾ ಕಾರ್ಯಕರ್ತರು ತಮ್ಮ ವಯಕ್ತಿಕ ಕೆಲಸಗಳನ್ನು ಬಿಟ್ಟು, ಜೀವ ಫಣಕಿಟ್ಟು ದೇಶ ಸೇವೆಗಾಗಿ ಕಟಿಬದ್ಧರಾಗಿ ನಿಂತಿರುವುದು ದೇಶವೇ ಹೆಮ್ಮೆ ಪಡುವಂತಾಗಿದೆ ಎಂದರು.

ಲಾಕ್‌ಡೌನ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಯುವುದು, ಪಡಿತರ ವಿತರಣೆ, ಜನರ ಆರೋಗ್ಯ ಪರೀಕ್ಷೆ ಮತ್ತು ಕ್ವಾರಂಟೈನ್ ವ್ಯವಸ್ಥೆ ಮಾಡುವುದರಲ್ಲಿ ತಾಲ್ಲೂಕು ಆಡಳಿತದ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಕೊರೊನಾ ಹೋರಾಟದಲ್ಲಿ ಮಾಧ್ಯಮದವರ ಕೆಲಸವು ಪ್ರಮುಖವಾಗಿದೆ. ಸರ್ಕಾರವು ಅವರ ಸಹಾಯಕ್ಕೆ ಬರಬೇಕಾಗಿದೆ. ಮಾಧ್ಯಮದವರಿಗೂ ವಿಶೇಷ ಆರ್ಥಿಕ ಸಹಾಯ ದೊರಕುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಡಿ.ಜಿ. ಮಹಾತ್, ಸಿಪಿಐ ವೆಂಕಟೇಶ ಮುರನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ್ ಮನ್ನಿಕೇರಿ, ಮುಖ್ಯಾಧಿಕಾರಿ ದೀಪಕ ಹರ್ದಿ, ವೈದ್ಯಾಧಿಕಾರಿ ಡಾ. ಭಾರತಿ ಕೋಣಿ, ಸಿಡಿಪಿಒ ವೈ.ಎಂ. ಗುಜನಟ್ಟಿ, ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ, ಎಚ್.ಎಲ್. ಬಾಲದಂಡಿ ಮತ್ತಿತರರು ಇದ್ದರು.

ವರದಿ: ಕೆ.ವಾಯ್ ಮೀಶಿ


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page