ಕೊಪ್ಪಳ: ವಿಕಲಚೇತನ ನೌಕರರಿಗೆ ಅವರ ಸೇವಾ ಹಿರಿತನವನ್ನು ಪರಿಗಣಿಸಿ ಶೇಕಡಾ ೪ ರಷ್ಟು ಬಡ್ತಿಯಲ್ಲಿ ಮೀಸಲಾತಿ ನೀಡುವ ಆದೇಶವನ್ನು ಶೀಘ್ರವೇ ಜಾರಿಗೆ ಮಾಡುವಂತೆ ಒತ್ತಾಯಿಸಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.
ಈ ವಿಷಯದ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿಕಲಚೇತನ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವಂತೆ ಕಳೆದ ೩ ವರ್ಷಗಳ ಹಿಂದೆ ದೇಶದ ಘನ ನ್ಯಾಯಾಲಯವಾದ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಕೂಡಾ ರಾಜ್ಯ ಸರಕಾರ ಮಾತ್ರ ಆದೇಶ ಜಾರಿಗೆ ಮಾಡಿರಲಿಲ್ಲಾ.ಆದೇಶದ ಜಾರಿಗೆ ಮಾಡುವಂತೆ ಒತ್ತಾಯಿಸಿ ಸರಕಾರದ ಹಂತದವರೆಗೆ ಮನವಿ ಸಲ್ಲಿಸುವುದರ ಜೊತೆಯಲ್ಲಿ ವಿಕಲಚೇತನ ನೌಕರರ ಸಂಘ ಪ್ರತಿಭಟನೆಯನ್ನು ನಡೆಸಿದರೂ ಸರಕಾರ ಮಾತ್ರ ಯಾವುದೇ ಬಡ್ತಿ ಆದೇಶ ಮಾಡಲಿಲ್ಲ. ಇದನ್ನು ಪ್ರಶ್ನೆ ಮಾಡಿ ವಿಕಲಚೇತನ ನೌಕರರ ಸಂಘದ ವತಿಯಿಂದ ಬಡ್ತಿ ಮೀಸಲಾತಿ ಆದೇಶ ರಾಜ್ಯ ಸರಕಾರ ಜಾರಿಗೆ ಮಾಡಲು ವಿಳಂಬ ನೀತಿಯನ್ನು ಅನುಸರಿಸುವುದನ್ನು ಪ್ರಶ್ನೆ ಮಾಡಿ ನ್ಯಾಯಾಲಯದಲ್ಲಿ ಸರಕಾರದ ವಿರುದ್ಧ ದಾವೆ ಹೂಡಲಾಗಿದೆ.ಬೇಸಿಗೆ ರಜೆಯ ಪ್ರಯುಕ್ತ ನ್ಯಾಯಾಲಯಕ್ಕೆ ರಜೆ ಇರುವುದರಿಂದ ಪ್ರಕರಣ ವಿಳಂಭವಾಗುತ್ತಿದೆ.ಅಲ್ಲದೇ ರಾಜ್ಯದ ಸರಕಾರವು ಕೂಡಾ ಬಡ್ತಿ ಮೀಸಲಾತಿ ನೀಡುವ ವಿಷಯದಲ್ಲಿ ಕೇಂದ್ರ ಸರಕಾರ ಯಾವ ರೀತಿಯಲ್ಲಿ ನಿಯಮಗಳನ್ನು ಅನುಸರಿಲಾಗುತ್ತದೆ ಎಂಬುದನ್ನು ಗಮನಿಸಿ ನೀಡಲಾಗುತ್ತದೆ.ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿದ್ದರು.ಪ್ರಸ್ತುತವಾಗಿ ಕೇಂದ್ರ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯು ವಿಕಲಚೇತನ ನೌಕರರಿಗೆ ಶೇಕಡಾ ೪ ರಷ್ಟು ಬಡ್ತಿ ಮೀಸಲಾತಿ ಆದೇಶ ಜಾರಿಗೆ ಮಾಡುವ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಜೊತೆಗೆ ಮಾರ್ಗಸೂಚಿಗಳನ್ನು ಪ್ರಕಟ ಮಾಡಲಾಗಿದೆ.ಈಗಾಗಲೇ ಅನೇಕ ಇಲಾಖೆಯಲ್ಲಿ ಬಡ್ತಿ ನೀಡಿದ್ದಾರೆ ಇನ್ನೂ ಅನೇಕ ಇಲಾಖೆಯಲ್ಲಿ ಬಡ್ತಿ ನೀಡುವ ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.ಬಡ್ತಿ ಮೀಸಲಾತಿ ಆದೇಶ ಜಾರಿಯಾಗದ ಹಿನ್ನಲೆಯಲ್ಲಿ ವಿಕಲಚೇತನ ನೌಕರರು ಬಡ್ತಿ ಸೌಲಭ್ಯದಿಂದ ವಂಚಿರಾಗುತ್ತಾರೆ.ಆದ್ದರಿಂದ ರಾಜ್ಯ ಸರಕಾರವು ಕೇಂದ್ರ ಸರಕಾರದ ಮಾರ್ಗಸೂಚಿ ಹಾಗೂ ನಿಯಮಗಳನ್ನು ಅನುಸರಿಸಿ ವಿಕಲಚೇತನ ನೌಕರರ ಶೇಕಡಾ ೪ ರಷ್ಟು ಬಡ್ತಿಯಲ್ಲಿ ಮೀಸಲಾತಿ ಆದೇಶ ಶೀಘ್ರವೇ ಜಾರಿಗೆ ಮಾಡುವ ಮೂಲಕ ವಿಕಲಚೇತನ ನೌಕರರಿಗೆ ಅನುಕೂಲ ಮಾಡಿಕೊಡುವಂತೆ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …