ಮೂಡಲಗಿ: ಮೂಡಲಗಿ ತಾಲ್ಲೂಕಾ ಕನ್ನಡ ಸಾಹಿತ್ಯ ಪರಿಷತ್‌ದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ನವಂಬರ ತಿಂಗಳದಲ್ಲಿ ಉದಯೋನ್ಮುಖ ಕವಿಗಳ ಕವಿಗೋಷ್ಠಿಯನ್ನು ಏರ್ಪಡಿಸುವರು.
ಕನ್ನಡ ನಾಡು, ನುಡಿ, ಇತಿಹಾಸ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವoತ ವಿಷಯ ಕುರಿತಾದ ಸ್ವರಚಿತ ಕವನಗಳನ್ನು ಕವಿಗೋಷ್ಠಿಯ ಮುಂಚಿತವಾಗಿ ಆಹ್ವಾನಿಸುವರು.
ಕವನವನ್ನು ಕಾಗದದ ಒಂದೆ ಮಗ್ಗುಲಲ್ಲಿ ಬರೆದಿರುವ ಇಲ್ಲವೆ ಡಿಟಿಪಿ ಮಾಡಿಸಿ ವಿಳಾಸ, ಪೋಟೋ ಮೊಬೈಲ್ ಸಂಖ್ಯೆಯೊoದಿಗೆ ಕಸಾಪ ಗೌರವ ಕಾರ್ಯದರ್ಶಿ ಎ.ಎಚ್. ಒಂಟಗೋಡಿ, ಶ್ರೀರಂಗ ಹಲ್ಲಿನ ದವಾಖಾನೆ, ಕಾಲೇಜು ರಸ್ತೆ, ಮೂಡಲಗಿ ಇವರಿಗೆ ಅ. ೨೫ರ ಒಳಗಾಗಿ ಕಳಿಸಬೇಕು ಎಂದು ತಿಳಿಸಿದ್ದಾರೆ.
ಸಂಪರ್ಕಕ್ಕಾಗಿ ಮೊ. ೯೯೦೨೧೩೨೮೧೫, ೯೯೧೬೨೪೬೩೭೬ ಸಂಪರ್ಕಿಸಲು ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
