ಶನಿವಾರ , ಜುಲೈ 20 2024
kn
Breaking News

ಮೂಡಲಗಿ ಪಟ್ಟಣದ ರಸ್ತೆಗಳ ಅಭಿವೃದ್ದಿಗೆ ನಗರೋತ್ಥಾನ ಯೋಜನೆಯಡಿ ಅನುದಾನ: ಬಾಲಚಂದ್ರ ಜಾರಕಿಹೊಳಿ

Spread the love

ಮೂಡಲಗಿ : ಮೂಡಲಗಿ ಪಟ್ಟಣದ ರಸ್ತೆಗಳ ಅಭಿವೃದ್ದಿಗೆ ನಗರೋತ್ಥಾನ ಯೋಜನೆಯಡಿ ಅನುದಾನ ಬಿಡುಗಡೆಗೊಂಡಿದ್ದು, ಮತ್ತೇ ಹೆಚ್ಚುವರಿಯಾಗಿ 5 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಪೌರಾಡಳಿತ ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಶಾಸಕ ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶನಿವಾರದಂದು ಪಟ್ಟಣದ ಕಲ್ಮೇಶ್ವರ ವೃತ್ತದ ಬಳಿ ನಗರೋತ್ಥಾನ ಯೋಜನೆಯಡಿ 4.05 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಡಿಸೆಂಬರ ತಿಂಗಳ ಅಂತ್ಯದೊಳಗೆ ಮೂಡಲಗಿ ಪಟ್ಟಣದ ಎಲ್ಲ ಪ್ರಮುಖ ರಸ್ತೆಗಳು ಅಭಿವೃದ್ದಿಯಾಗಲಿವೆ ಎಂದು ತಿಳಿಸಿದರು.
ಮೂಡಲಗಿ ಪಟ್ಟಣದ ಅಭಿವೃದ್ದಿಗೆ ಬದ್ದರಿರುವದಾಗಿ ತಿಳಿಸಿದ ಅವರು, ಮೂಡಲಗಿ ತಾಲೂಕಿನ ಸರ್ವಾಂಗಿಣ ಪ್ರಗತಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿದ್ದೇನೆ. ತಾಲೂಕಿನ ಎಲ್ಲ ರಸ್ತೆಗಳನ್ನು ಸುಧಾರಣೆ ಮಾಡುವ ಮೂಲಕ ಸೌಂದರ್ಯಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದೇನೆ. ಈಗಾಗಲೇ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಗಳು ಡಿಸೆಂಬರ ತಿಂಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಅವರು ಹೇಳಿದರು.
ತಾಲೂಕಿನ ಸಾರ್ವಜನಿಕರು ಮತ್ತು ರೈತರ ಪ್ರಮುಖ ಕೋರಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಚೇರಿಯು ಇದೇ ತಿಂಗಳ ಅಂತ್ಯದೊಳಗೆ ಸಾರ್ವಜನಿಕರಿಗೆ ಅರ್ಪಣೆ ಮಾಡಲಾಗುವುದು. ಈಗಾಗಲೇ ಕಚೇರಿ ಆರಂಭಕ್ಕೆ ಅಗತ್ಯವಿರುವ ಎಲ್ಲ ಕಾರ್ಯಗಳು ಮುಗಿದಿವೆ. ಕಚೇರಿಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕ ಹಾದಿಮನಿ, ಪುರಸಭೆ ಮಾಜಿ ಅಧ್ಯಕ್ಷರಾದ ರಾಮಣ್ಣ ಹಂದಿಗುoದ, ರವಿ ಸಣ್ಣಕ್ಕಿ, ಮಾಜಿ ಪುರಸಭೆ ಉಪಾಧ್ಯಕ್ಷರಾದ ರವೀಂದ್ರ ಸೋನವಾಲ್ಕರ, ಹುಸೇನಸಾಬ ಶೇಖ, ಸದಸ್ಯರಾದ ಭೀಮಶಿ ಸಣ್ಣಕ್ಕಿ, ಶಿವು ಚಂಡಕಿ, ಆನಂದ ಟಪಾಲ್, ಅಬ್ದುಲ್‌ಗಪಾರ ಡಾಂಗೆ, ಈರಣ್ಣ ಕೊಣ್ಣುರ, ಹಣಮಂತ ಪೂಜೇರಿ, ಸಿದ್ದಪ್ಪ ಮಗದುಮ್, ಶಿವು ಸಣ್ಣಕ್ಕಿ, ಈರಪ್ಪ ಮುನ್ಯಾಳ, ಪಾಂಡುರoಗ ಮಹೇಂದ್ರಕರ, ಸತ್ಯೆವ್ವ ಅರಮನಿ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವಿ ಶೆಕ್ಕಿ, ಮುಖಂಡರಾದ ಡಾ. ಎಸ್ ಎಸ್ ಪಾಟೀಲ್, ಗಿರೀಶ ಢವಳೇಶ್ವರ, ಸಿದ್ದು ಗಡ್ಡೆಕಾರ, ರಾಜು ಪೂಜೇರಿ, ಚೆನ್ನಪ್ಪ ಅಥಣಿ, ನನ್ನು ಶೇಖ, ಪ್ರಕಾಶ ಮುಗಳಖೋಡ, ಸುನೀಲ ಸತರಡ್ಡಿ, ಮರೇಪ್ಪ ಮರೇಪ್ಪಗೋಳ, ರವಿ ನೇಸೂರ, ಪುರಸಭೆ ಮುಖ್ಯಾಧಿಕಾರಿ ದೀಪಕ್ ಹರ್ದಿ, ಗುತ್ತಿಗೆದಾರ ಬಿ ಕೆ ಗಂಗರಡ್ಡಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page