ಸೋಮವಾರ , ಅಕ್ಟೋಬರ್ 3 2022
kn
Breaking News

ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಯೋಗ ದಿನಾಚರಣೆ

Spread the love

ಮೂಡಲಗಿ: ಇಂದಿನ ಅವಸರದ ಜೀವನದಲ್ಲಿ ಕೆಲಸದ ಜೊತೆಗೆ ನಮ್ಮ ಆರೋಗ್ಯವನ್ನು ಯೋಗ ಮತ್ತು ದ್ಯಾನದಿಂದ ಕಾಪಾಡಿಕೊಳ್ಳಲು ಸಾಧ್ಯ ಎಂದು ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆ ಮುಖ್ಯಸ್ಥ ಪ್ರಭಾತ್‌ಕುಮಾರ್ ಸಿಂಗ್ ಹೇಳಿದರು.
ಅವರು ತಾಲೂಕಿನ ಯಾದವಾಡ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಿಂದ ಅರಳಿಕಟ್ಟಿ ಫೌಂಡೇಶನ್ ಆವರಣದಲ್ಲಿ ಆಯೋಜಿಸಿದ ೮ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.
ಅರಳಿಕಟ್ಟಿ ಫೌಂಡೇಶನ್ ಚೇರ್ಮನ್ ಡಾ. ಟಿ.ವ್ಹಿ.ಅರಳಿಕಟ್ಟಿ ಅವರು ಯೋಗ ದಿನಾಚರಣೆ ಆಚರಣೆ ಆಗಿರದೆ ವರ್ಷದ ೩೬೫ ದಿನವೂ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಯೋಗವನ್ನು ರೂಢಿಯಲ್ಲಿರಿಸಬೇಕು ಎಂದರು.
ಯೊಗ ದಿನಾಚರಣೆಯಲ್ಲಿ ಕಾರ್ಖಾನೆಯ ಉದ್ಯೋಗಿಗಳು ತಮ್ಮ ಕುಟುಂಬ ವರ್ಗದವರೊಂದಿಗೆ ಪಾಲ್ಗೊಂಡು ಯೋಗಾಸನ ಪ್ರದರ್ಶಿಸಿದರು. ಬೆಳಗಲಿಯ ಋಷಿ ಯೋಗಾಶ್ರಮ ಸದಾಶಿವ ಗುರೂಜಿ ಅವರು ಯೋಗ ತರಬೇತಿಯನ್ನು ನೀಡಿದರು.
ಕಾರ್ಖಾನೆ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕ ಉಮೇಶ್ ದೇಸಾಯಿ ನಿರೂಪಿಸಿದರು, ಮಾನವ ಸಂಪನ್ಮೂಲ ವಿಭಾಗದ ಉಪ ವ್ಯವಸ್ಥಾಪಕ ವೈಭವ ಕುಲಕರ್ಣಿ ವಂದಿಸಿದರು.


Spread the love

About Kenchappa Meesi

Check Also

ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆಗೆ ‘ಪೋಷಕ ಅನಾಜ’ ಪ್ರಶಸ್ತಿ

Spread the loveಮೂಡಲಗಿ: ಭಾರತ ಸರಕಾರದ ಹಿರಿಯ ಅಧಿಕಾರಿ, ಕೃಷಿತಜ್ಞ ಮತ್ತು ಅನುಭವಿ ಆಡಳಿತಗಾರರಾದ ಡಾ.ಅಶೋಕ ದಳವಾಯಿಯವರ ಜೀವಮಾನ ಸಾಧನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!