ಕೊಪ್ಪಳ: ೭೫ ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರಿರುವ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ನಗರಸಭೆಯ ಸದಸ್ಯರಾದ ರಾಜಶೇಖರ ಆಡೂರು ಹೇಳಿದರು.
ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ಹಮ್ಮಿಕೊಂಡಿದ್ದ ಧ್ವಜ ವಿತರಣಾ ಕಾರ್ಯಕ್ರಮದಲ್ಲಿ ಧ್ವಜ ವಿತರಣೆ ಮಾಡುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಾ,ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ ವರ್ಷ ಕಳೆದಿದೆ ಈ ಸಮಯದಲ್ಲಿ ಸಮಾಜದಲ್ಲಿ ಇರುವ ಪ್ರತಿ ನಾಗರಿಕನಿಗೂ ಕೂಡಾ ದೇಶದ ಮೇಲೆ ಅಭಿಮಾನ ಮೂಡುವ ನಿಟ್ಟಿನಲ್ಲಿ ಜೊತೆಗೆ ರಾಷ್ಟ್ರ ಗೌರವ ಹೆಚ್ಚು ಮಾಡುವಂತ ಕಾರ್ಯಕ್ರಮವಾಗಿದ್ದು,ಇಂತಹ ರಾಷ್ಟ್ರೀಯ ಕಾರ್ಯಕ್ರಮವನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸಬೇಕಿದೆ.ಸರಕಾರವು ಕೇವಲ ಶಾಲಾ, ಕಾಲೇಜು ಹಾಗೂ ಕಚೇರಿಗಳಲ್ಲಿ ಮಾತ್ರ ಧ್ವಜವನ್ನು ಹಾರಿಸಲು ಅವಕಾಶ ನೀಡದೇ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಕೂಡಾ ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ.ಧ್ವಜವನ್ನು ಹಾರಿಸುವ ಸಮಯದಲ್ಲಿ ಅದರ ನಿಯಮದಂತೆ ಹಾರಿಬೇಕು ಏಕೆಂದರೆ ಅದಕ್ಕೆ ಅದರದೆಯಾದ ಗೌರವ ಇದೇ.ಆ ಗೌರವಕ್ಕೆ ಧಕ್ಕೆ ಬರದ ಹಾಗೇ ನಾವು ನಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕಿನ್ ನಿರ್ದೇಶಕರಾದ ವಿಶ್ವನಾಥ.ಜಿ.ಅಗಡಿ,ಬಸವರಾಜ. ಬಿ.ಶಾಹಪೂರ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಮಹಮ್ಮದ್ ಆಬೀದ ಹುಸೇನ ಅತ್ತಾರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ತಾಲೂಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿರುಪಾಕ್ಷಪ್ಪ ಬಗೋಡಿ,ಶಿಕ್ಷಕರಾದ ನಾಗಪ್ಪ ನರೊ,ಶ್ರೀನಿವಾಸರಾವ ಕುಲಕರ್ಣಿ,ಶಂಕ್ರಮ್ಮ ಶೆಟ್ಟರ್,ಸುನಂದಾಬಾಯಿ,ಭಾರತಿ ಆಡೂರು,ಗಂಗಮ್ಮ ತೋಟದ,ಜಯಶ್ರೀ ದೇಸಾಯಿ,ಶೀಲಾ ಬಂಡಿ,ನಾಗರತ್ನ,ರತ್ನಾ ಹೂಲಗೇರಿ ಮುಂತಾದವರು ಹಾಜರಿದ್ದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …