ಸೋಮವಾರ , ಜೂನ್ 5 2023
kn
Breaking News

ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿ ಸುತ್ತಲಿನ ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ

Spread the love

ಮೂಡಲಗಿ: ಒಂದು ವಾರದ ಹಿಂದೆ ಅಷ್ಟೇ ಬೆಳಗಾವಿ ನಗರ ಹಾಗೂ ಚಿಕ್ಕೋಡಿ ತಾಲೂಕಿನ ಯಡುರವಾಡಿಯಲ್ಲಿ ಚಿರತೆ ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಮೂಡಿಸಿತ್ತು. ಆದರೆ ಈಗ ಮತ್ತೆ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ತೋಟದಲ್ಲಿ ಚಿರತೆ ಪ್ರತ್ಯಕ್ಷವಾಗಿ ಸುತ್ತಲಿನ ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ.
ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಮಲಗಿದ್ದ ಎಮ್ಮೆ ಕರುವನ್ನು
ಚಿರತೆ ಎತ್ತಿಕೊಂಡು ಹೋದ ಚಲನವಲನಗಳು ಸ್ಪಷ್ಟವಾಗಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೂಡಲಗಿ ಸಮೀಪದ ಧರ್ಮಟ್ಟಿ ಕೆನಾಲ್ ಹತ್ತಿರ ವಿರುವ ಅನೀಲ್ ಮಂದ್ರೋಳಿ ಎಂಬುವವರಿಗೆ ಸೇರಿದ ಎಮ್ಮೆ ಕರುವಿನ ಮೇಲೆ ಚಿರತೆ ದಾಳಿ ಮಾಡಿ, ಸ್ವಲ್ಪ ದೂರದಲ್ಲಿ ಕರುವಿನ ಅರ್ಧ ಭಾಗದ ದೇಹ ಪತ್ತೆಯಾಗಿದೆ. ಸುದ್ದಿ ತಿಳಿದ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಹಾಗೂ ತಾಲೂಕಾಡಳಿತ ಧರ್ಮಟ್ಟಿ ಗ್ರಾಮದಲ್ಲಿ ಬಿಡು ಬಿಟ್ಟಿರುವದಾಗಿ ತಹಶೀಲ್ದಾರ ಡಿ.ಜಿ ಮಹಾತ ತಿಳಿಸಿದ್ದಾರೆ.
ಘಟನಾ ಸ್ಥಳ ಹಾಗೂ ಸುತ್ತಲಿನ ತೋಟಪಟ್ಟಿ ಪ್ರದೇಶಗಳಿಗೆ ಪರಿಶೀಲನೆ ಕೈಗೊಂಡಿದ್ದು, ಚಿರತೆ ಸೇರೆ ಹಿಡಿಯಲು ನೂರಿತ ಸಿಬ್ಬಂದಿ ಹಾಗೂ ಬೋನಿನ ವ್ಯವಸ್ಥೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ಧರ್ಮಟ್ಟಿ, ಪಟಗುಂದಿ, ಮಸಗುಪ್ಪಿ, ಕಮಲದಿನ್ನಿ, ರಂಗಾಪೂರ ಹಾಗೂ ಮೂಡಲಗಿಯ ತೋಟದ ಪ್ರದೇಶಗಳ ವ್ಯಾಪ್ತಿಯ ಶಾಲೆಗಳಿಗೆ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಒಂದು ದಿನ ರಜೆಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನೀಡಿದ್ದಾರೆ. ಕಾರ್ಯಚರಣೆ ಪ್ರಗತಿಯಾಧಾರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವದು. ಚಿರತೆ ಸೇರೆ ಕಾರ್ಯಚರಣೆಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಹಾಮ ಅಧ್ಯಕ್ಷರು, ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ತಾಪಂ ಇಒ ಎಫ್.ಜಿ ಚಿನ್ನನ್ನವರ, ಬಿಇಒ ಅಜಿತ ಮನ್ನಿಕೇರಿ, ಅರಣ್ಯಾಧಿಕಾರಿ ಕೆಂಪಣ್ಣ ವಣ್ಣೂರ ಹಾಗೂ ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ಧರ್ಮಟ್ಟಿ ಗ್ರಾಪಂ ಸಿಬ್ಬಂದಿಗಳು ಇದ್ದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page