ಮೂಡಲಗಿ: ತಾಲೂಕಿನ ವೆಂಕಟಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಕೌಟ್ಸ್ ಘಟಕದ ಎಲ್ಲ ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರೇಮಿಗಳಾದ ಸಂಗಪ್ಪ ನೀಲಪ್ಪಗೋಳ, ಪ್ರಕಾಶ ಪಾಟೀಲ, ಪ್ರಕಾಶ ಪೂಜೇರಿಯವರು ೭೫ ನೇ ಆಜಾದಿ ಕಾ ಅಮೃತ ಮಹೊತ್ಸವದ ಆಚರಣೆ ಅಂಗವಾಗಿ ಸಮವಸ್ತ್ರ ಗಳನ್ನು ಕೊಡುಗೆಯಾಗಿ ನೀಡಿದರು.
ಪ್ರಧಾನಗುರು ಅಪ್ಪಣ್ಣ ವಾಘ್ಮೋಡೆ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಕೌಟ್ಸ ಮತ್ತು ಗೈಡ್ಸ್, ಎನ್‌ಎಸ್‌ಎಸ್, ಎನ್‌ಸಿಸಿ ಮುಂತಾದ ನಾಯಕತ್ವ ಗುಣ ಬೆಳೆಸುವ ಘಟಕಗಳನ್ನು ಪ್ರಾರಂಬಿಸಿದಾಗ ಮಾತ್ರ ಸಾಧ್ಯವಾಗುವದು. ವಿದ್ಯಾರ್ಥಿಗಳಿಗೆ ದೇಶ ಪ್ರೇಮದ ಜೊತೆಗೆ ಪರಸ್ಪರ ಅನ್ಯೂನ್ಯತೆಯಿಂದ ಬಾಳಲು ಸಾಧ್ಯವಾಗುವದು. ದೇಶವು ಅಮೃತ ಮಹೋತ್ಸವ ಆಚರಣೆಯಲ್ಲಿರುವದು ಸಂತಸ ತಂದಿದೆ. ವಿದ್ಯಾರ್ಥಿಗಳು ಮೊಬೈಲ್ ಹಾಗೂ ದುಶ್ಚಟಗಳಿಗೆ ಅಂಟಿಕೊಳ್ಳದೆ ವರ್ತಮಾನ ಕಾಲದಲ್ಲಿದ್ದು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತುದಾರ ಆರ್.ಕೆ ರೂಗಿ, ವಾಯ್. ಸಿ ಹೊಸೂರ, ಎಸ್.ಬಿ ಮಂಕಾಳೆ, ಎಮ್.ಬಿ ಚಕ್ಕಡಿ, ಎಸ್.ಎಸ್ ಕುದರಿ, ಎಮ್.ಎಮ್ ಕವಟಕೊಪ್ಪ, ಎಸ್.ಎಸ್ ಅಂಗಡಿ ಹಾಗೂ ವಿದ್ಯಾರ್ಥಿಗಳು ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
