ಸೋಮವಾರ , ಸೆಪ್ಟೆಂಬರ್ 9 2024
kn
Breaking News

ವಿವಿಧ ಬೇಡಿಕೆ ಈಡೇರಿಕೆಗಾಗಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಪತ್ರ ಸಲ್ಲಿಕೆ

Spread the love

ಕೊಪ್ಪಳ: ವಿಕಲಚೇತನರ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ವಿಕಲಚೇತನ ನೌಕರರ ಸಂಘದ ವತಿಯಿಂದ ವಸತಿ ಸಚಿವರಾದ ವಿ.ಸೋಮಣ್ಣ ಅವರಿಗೆ ಇಂದು ಬೆಂಗಳೂರಿನ ಅವರ ನಿವಾಸದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಸರಕಾರದಿಂದ ನೀಡಲಾಗುವ ಮನೆಗಳಲ್ಲಿ ವಿಕಲಚೇತನರಿಗೆ ಮೀಸಲಿಡಬೇಕಾದ ಮನೆಗಳನ್ನು ಮೀಸಲಿಡದೇ ಪ್ರಭಾವ ಬಳಿಸಿ ಬೇರೆಯವರು ಅದರ ಸೌಲಭ್ಯವನ್ನು ಪಡೆಯುತ್ತಿದ್ದು,ಕೂಡಲೇ ಸರಕಾರವು ವಿಕಲಚೇತನರಿಗೆ ಕಡ್ಡಾಯವಾಗಿ ವಿವಿಧ ಯೋಜನೆಗಳನ್ನು ನೀಡಲಾಗುವ ಮನೆಗಳ ಹಂಚಿಕೆಯಲ್ಲಿ ವಿಕಲಚೇತನರಿಗೆ ಶೇಕಡಾ ೫ ರಷ್ಟು ಮನೆಗಳನ್ನು ಮೀಸಲಿಡುವುದರ ಜೊತೆಗೆ ಅದರ ಸಮರ್ಪಕವಾದ ರೀತಿಯಲ್ಲಿ ಅನುಷ್ಟಾನ ಆಗುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಆದೇಶ ಮಾಡಬೇಕು ಹಾಗೂ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ವತಿಯಿಂದ ನೀಡಲಾಗುವ ನಿವೇಶ ಹಾಗೂ ಮನೆಗಳ ಹಂಚಿಕೆಯಲ್ಲಿ ವಿಕಲಚೇತನ ನೌಕರರ ಶೇಕಡಾ ೫ ರಷ್ಟು ಮನೆ ಹಾಗೂ ನಿವೇಶನಗಳನ್ನು ಮೀಸಲಿಡುವುದರ ಜೊತೆಗೆ ವಿಕಲಚೇತನ ನೌಕರರ ಖರೀದಿ ಮಾಡುವ ನಿವೇಶನ ಹಾಗೂ ಮನೆಯ ಹಣದ ಮೇಲೆ ಶೇಕಡಾ ೨೫ ರಷ್ಟು ಹಣವನ್ನು ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಬಳಿಕ ಸಚಿವರಾದ ವಿ.ಸೋಮಣ್ಣ ಮಾತನಾಡುತ್ತಾ,ನಿಮ್ಮ ಸಂಘದ ಬೇಡಿಕೆಗಳು ನ್ಯಾಯಯುತವಾಗಿದ್ದು,ಅವುಗಳ ಬಗ್ಗೆ ಅಧಿಕಾರಿಗಳು ಜೊತೆಯಲ್ಲಿ ಚರ್ಚೆ ಮಾಡಲಾಗುತ್ತದೆ.ಅಲ್ಲದೇ ಎಲ್ಲಾ ಯೋಜನೆಗಳನ್ನು ವಸತಿಗಳ ಹಂಚಿಕೆಯಲ್ಲಿ ವಿಕಲಚೇತನರಿಗೆ ಮೀಸಲಾತಿ ನೀಡುವಂತೆ ಹಾಗೂ ಅದರ ಸಮರ್ಪಕವಾದ ರೀತಿಯಲ್ಲಿ ಅನುಷ್ಟಾನ ಮಾಡುವಂತೆ ಜೊತೆಗೆ ಅದರ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಿಳಿಸುತ್ತೆನೆ ಎಂದು ಹೇಳಿದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page