ಬುಧವಾರ , ಮೇ 31 2023
kn
Breaking News

ಯಡಿಯೂರಪ್ಪನವರೇ ನಿಮಗಿದು ನ್ಯಾಯವೇ? ಕಣ್ಮುಚ್ಚಿ, ಕಿವಿ ಮುಚ್ಚಿ ಕುಳಿತಿದ್ದೀರೇನು ?

Spread the love

ಬೆಳಗಾವಿ :  1) ಮುಖ್ಯಮಂತ್ರಿಯವರಿಂದ ದೇಶಭಕ್ತ ಸಂಗೊಳ್ಳಿ ರಾಯಣ್ಣನವರಿಗೆ ಗೌರವ ಸಮರ್ಪಣೆಗೆ ಆದೇಶ
ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿ ಸ್ವಕ್ಷೇತ್ರ ಶಿಕಾರಿಪುರದಲ್ಲಿ ರಾತ್ರೋರಾತ್ರಿ ರಾಯಣ್ಣನವರಿಗೆ ಅಪಮಾನ
2) ಈಸೂರು ದಂಗೆಯ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಿಚ್ಚು ಹಚ್ಚಿದ್ದ ಶಿಕಾರಿಪುರದಲ್ಲಿ,
ಬ್ರಿಟಿಷರಿಗೆ ಸೋಲನ್ನುಣಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಜೀವ ತ್ಯಾಗ ಮಾಡಿದ ಹುತಾತ್ಮ,
ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರಿಗೆ ಅನ್ಯಾಯ. ಇಂತಹ ಹೀನ ಕೃತ್ಯ ಮಾಡಿದವರಿಗೆ ಧಿಕ್ಕಾರವಿರಲಿ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬಾರಿ ಬ್ರಿಟೀಷರಿಗೆ ಸೋಲಿನ ರುಚಿಯನ್ನು ತೋರಿಸಿದ ದೇಶಕ್ಕಾಗಿ ಪ್ರಾಣವನ್ನೇ
ಕೊಟ್ಟ ಹುತಾತ್ಮ, ಸ್ವ್ವಾತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಂತಹ ಮಹಾನ್‍ವೀರ ಹುಟ್ಟಿದ ದಿನ
ಆಗಸ್ಟ್ 15, ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ರಾಯಣ್ಣನವರನ್ನು ಬ್ರಿಟಿಷರು ನೇಣಿಗೆ ಹಾಕಿದ್ದು ಜನವರಿ 26,
ಅಂದು ಭಾರತ ದೇಶ ಗಣರಾಜ್ಯವಾದ ದಿನ. ಇಂತಹ ರಾಷ್ಟ್ರವೀರನನ್ನು ಪಡೆದ ಭಾರತ ಧನ್ಯವಾಗಿದೆ. ಇಂತಹ ಮಹಾನ್
ಪುರುಷ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿಯನ್ನು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ ನಗರದಲ್ಲಿ ರಾತ್ರೋ ರಾತ್ರಿ
ಹೇಡಿಗಳ ರೀತಿಯಲ್ಲಿ ತೆರೆವುಗೊಳಿಸಿರುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿರುವ ಘೋರ ಅಪಮಾನ.

ಶಿಕಾರಿಪುರ ಸ್ವಾತಂತ್ರ್ಯ ಹೋರಾಟಕ್ಕೆ ಕಿಚ್ಚು ಹಚ್ಚಿರುವ ಭೂಮಿ, ಇಂತಹ ಭೂಮಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ
ಅವಮಾನ ಮಾಡಿರುವುದು ಈಸೂರು ದಂಗೆಗೂ ಮಾಡಿರುವ ಅವಮಾನ. ಮಾನ್ಯಶ್ರೀ ಬಸವರಾಜ ಬೊಮ್ಮಾಯಿಯವರು
ಸಂಗೊಳ್ಳಿ ರಾಯಣ್ಣನವರಿಗೆ ಗೌರವ ಸಲ್ಲಿಸಲು ಆದೇಶ ಹೊರಡಿಸಿದ್ದಾರೆ. ಅದೇ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ
ಬಿ. ಎಸ್. ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ದೇಶಭಕ್ತನ ಮೂರ್ತಿ ತೆರವುಗೊಳಿಸಲಾಗಿದೆ.
ಶಿವಮೊಗ್ಗದ ಸಂಸದರಾದ ಬಿ. ವೈ. ರಾಘವೇಂದ್ರರವರು, ಶಾಸಕರಾದ ಬಿ. ಎಸ್. ಯಡಿಯೂರಪ್ಪನವರು ಹಾಗೂ
ತಾಲ್ಲೂಕು ಆಡಳಿತ ತನ್ನ ತಪ್ಪಿಗೆ ಕ್ಷಮೆಯಾಚಿಸಿ, ರಾಯಣ್ಣನವರ ಮೂರ್ತಿಯನ್ನು ಅದೇ ಸ್ಥಳದಲ್ಲಿ ಸ್ಥಾಪನೆ ಮಾಡಬೇಕಾಗಿ ಹಾಲುಮತ ಮಹಾಸಭಾದವರು ಆಗ್ರಹ ಪಡಿಸಿದ್ದಾರೆ.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page