ಸೋಮವಾರ , ಜೂನ್ 5 2023
kn
Breaking News

ಹಳ್ಳಿಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ : ಜಿಪಂ ಉಪಕಾರ್ಯದರ್ಶಿ ಹೆಗ್ಗನಾಯಕ

Spread the love

ಮೂಡಲಗಿ: ಭಾರತ ದೇಶವು ಹಳ್ಳಿಗಳಿಂದ ಕೂಡಿದ ದೇಶ. ಹಳ್ಳಿಗಳ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ ಇಲಾಖೆಯಿಂದ ಸಾಕಷ್ಟು ಯೋಜನೆಗಳಿವೆ. ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳು ಹಾಗೂ ಪಂಚಾಯತ ಸಿಬ್ಬಂದಿಯವರು ಇವುಗಳ ಉಪಯೋಗ ಪಡೆದುಕೊಂಡಾಗ ಮಾತ್ರ ಹಳ್ಳಿಗಳ ಅಭಿವೃದ್ಧಿಯಾಗಿ ಗಾಂಧೀಜಿಯವರ ಕನಸು ನನಸಾಗಲು ಸಾಧ್ಯವಾಗುವದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಸಮೀಪದ ಹಳ್ಳೂರ ಗ್ರಾಮ ಪಂಚಾಯತ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉದ್ಯಾನವನ ವಿಕ್ಷೀಸಿ, ನರೇಗಾ ಯೋಜನೆಯಡಿ 6 ಲಕ್ಷ ರೂ.ಗಳ ಉದ್ಯಾನವನದಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡು ಅಭ್ಯಾಸ ಹಾಗೂ ವಿಶ್ರಾಂತಿ ಮಾಡಲು ಹಸಿರು ಗ್ರಂಥಾಲಯ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು. ತಾಲೂಕು ಪಂಚಾಯತ್ 15 ನೇ ಹಣಕಾಸು ಯೋಜನೆಯಡಿ ವಿದ್ಯಾರ್ಥಿಗಳಿಗೆ ಸೈಕಲ್ ಸ್ಟ್ಯಾಂಡ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಬೇಕು. ಪ್ರತಿ ವಾರ್ಡ್‍ಗಳಲ್ಲಿಯೂ ಹಸಿರು ವನ, ಸ್ವಚ್ಚತೆ, ನರೇಗ ಯೋಜನೆಯಡಿ ಹಾಗೂ ಇನ್ನಿತರ ಯೋಜನೆಯಡಿ ಬರುವಂತಹ ಸಾರ್ವಜನಿಕ ಉಪಯುಕ್ತ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.
ಕೆ.ಎಮ್.ಎಫ್ ಅಧ್ಯಕ್ಷರು ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ಸಾಕಷ್ಟು ಯೋಜನೆಗಳನ್ನು ಹಲವಾರು ಕ್ಷೇತ್ರಗಳಿಗೆ ಸಿಗುವಂತೆ ಮಾಡಿದ್ದಾರೆ. ಅನೇಕ ಇಲಾಖೆಗಳಿಗೆ ಸರಕಾರದ ಅನುದಾನದ ಜೊತೆ ತಮ್ಮ ಸ್ವಂತ ಅನುದಾನವನ್ನು ವ್ಯಹಿಸಿರುವದು ಶ್ಲಾಘನೀಯ ಕಾರ್ಯವಾಗಿದೆ. ಮೂಡಲಗಿಯಲ್ಲಿಯೇ ನೂತನ ತಾಲೂಕು ಕಛೇರಿ ಕೆಲಸ ಪ್ರಾರಂಭಗೊಳಿಸಿದೆ. ಇದರ ಸದುಪಯೋಗವನ್ನು ರೈತಾಪಿ ಜನರು, ಕೃಷಿ ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ದೊರೆಯುವಂತೆ ಮಾಡಬೇಕು. ಗ್ರಾಮಗಳ ಸಮಗ್ರ ಅಭಿವೃದ್ಧಿಯಾದಾಗ ಮಾತ್ರ ದೇಶ ಅಬಿವೃದ್ಧಿಯಾಗುವದು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳೆ ಭವಿಷ್ಯತ್ತಿನ ಆಶಾ ಕುಸುಮಗಳು ಅವರು ಬೌತಿಕವಾಗಿ, ಜ್ಞಾನರ್ಜನೆ, ಸಾಂಸ್ಕøತಿಕವಾಗಿ ಉನ್ನತ ಆಚಾರ ವಿಚಾರಗಳನ್ನು ಅವರಿಗೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನವರ, ಪಿಡಿಒ ಹನಮಂತ ತಾಳಿಕೋಟಿ, ಪ್ರಾಚಾರ್ಯ ಎಸ್.ಎಸ್. ಬೆಕ್ಕೇರಿ, ಉಪನ್ಯಾಸಕ ವಾಯ್.ಬಿ ಕಳ್ಳಿಗುದ್ದಿ, ಮಹಾಂತೇಶ ಸಂತಿ ಹಾಗೂ ಪಂಚಾಯತ ಸಿಬ್ಬಂದಿ ಹಾಜರಿದ್ದರು.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page