ಶುಕ್ರವಾರ , ಡಿಸೆಂಬರ್ 27 2024
kn
Breaking News

ಮೂಡಲಗಿ

ಹಳ್ಳೂರ : ಬಸವೇಶ್ವರ ಜಯಂತಿ ಹಾಗೂ ಬಸವೇಶ್ವರ ಜಾತ್ರೆ ರದ್ದು

ಹಳ್ಳೂರ: ಕೊರೋನಾ ವೈರಸ್ ಇಡೀ ದೇಶದಾದ್ಯಾoತ ಮರಣ ಮೃದಂಗ ಭಾರಿಸುತ್ತಿರುವ ಹಿನ್ನೆಲೆ ಇಡೀ ದೇಶದ ತುಂಬೆಲ್ಲಾ ಸರಕಾರ ಲಾಕ್ ಡೌನ್ ಆದೇಶ ಹೊರಡಿಸಿದೆ. ಅದರಿಂದ ಇದೆ ತಿಂಗಳು 26/04/2020 ರಂದು ನಡೆಯಬೇಕಾಗಿದ್ದ ಬಸವ ಜಯಂತಿಯ ಆಚರಣೆಯನ್ನು ಹಾಗೂ ಬಸವೇಶ್ವರ ಜಾತ್ರೆಯನ್ನು ರದ್ದುಪಡಿಸಾಲಾಗಿದೆ ಎಂದು ಬಸವಶ್ರೀ ಸೇವಾ ಯುವಕ ಸಂಘದ ಅಧ್ಯಕ್ಷ ಬಸವರಾಜ್ ಬೋಳನ್ನವರ ಹೇಳಿದರು. ಗ್ರಾಮದ ಬಸವ ನಗರ ತೋಟದ ಬಸವೇಶ್ವರ ದೇವಸ್ಥಾನದಲ್ಲಿ ಇಂದು ಸಂಜೆ ಕರೆಯಲಾದ ಸಭೆಯಲ್ಲಿ ಮಾತನಾಡಿ, …

Read More »

ಕೊರೋನಾ ಲಾಕ್ ಡೌನ್: ಬಸವೇಶ್ವರ ಜಯಂತಿ ರದ್ದು

ಮೂಡಲಗಿ: ಕೊರೋನಾ ನಿಯಂತ್ರಣ ನಿಮಿತ್ತ ಇಡೀ ದೇಶದ ತುಂಬೆಲ್ಲಾ ಸರಕಾರ ಲಾಕ್ ಡೌನ್ ಆದೇಶ ಹೊರಡಿಸಿದೆ. ಇದೇ ಕಾರಣಕ್ಕೆ ದಿನಾಂಕ 26/04/2020 ರಂದು ನಡೆಯಬೇಕಾಗಿದ್ದ ಬಸವ ಜಯಂತಿಯ ಆಚರಣೆಯನ್ನು ರದ್ದುಪಡಿಸಿ, ಜಯಂತಿಯನ್ನು ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಿ ಆಚರಿಸಬೇಕು ಎಂದು ಎಲ್ಲ ಶರಣ -ಶರಣೆಯರಲ್ಲಿ ಕೋರಿದ್ದಾರೆ. ಈ ಬಗ್ಗೆ ಇಂದು ಪಟ್ಟಣದಲ್ಲಿ ಪ್ರಮುಖರ ಸಭೆಯಲ್ಲಿ ಜಯಂತಿಯನ್ನು ರದ್ದುಪಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ತದನಿಮಿತ್ತ ರೋಗ ನಿಯಂತ್ರಣ ಹಾಗೂ ಹಾಗೂ …

Read More »

ಕಡಿಮೆಯಾಗುತ್ತಿಲ್ಲಾ ಜಿಲ್ಲೆಯಲ್ಲಿನ ಕೋರೊನಾ ಬೀತಿ

ಬೆಳಗಾವಿ:  ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ಬೆಳಗಾವಿ ಜಿಲ್ಲೆಯಿಂದ ದೂರವಾಗುತ್ತಿದೆ ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ವೈರಸ್ ಕಡಿಮೆ ಆಗುತ್ತಲೇ ಇದೆ, ಎನ್ನುವಷ್ಟರಲ್ಲಿ ಜಿಲ್ಲೆಯಲ್ಲಿ ಇಂದು ಶುಕ್ರವಾರ ಮಧ್ಯಾಹ್ನದ ಹೆಲ್ತ ಬುಲಿಟೀನ್ ನಲ್ಲಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಎರಡು ಪಾಸಟೀವ್ ಕೇಸ್ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 45ಕ್ಕೇರಿದೆ. ಜಿಲ್ಲೆಯಲ್ಲಿ ಹೊಸದಾಗಿ ಸೋಂಕು ಬಾಧಿಸಿರುವವರಲ್ಲಿ ಒಬ್ಬರು 10 ವರ್ಷ ವಯಸ್ಸಿನ …

Read More »

ಮನೆಯಲ್ಲಿ ಇರುವುದು ಕೋರೊನಾಕ್ಕೆ ನಿಜವಾದ ಮದ್ದು: ಶಾಸಕ ಸತೀಶ ಜಾರಕಿಹೊಳಿ

ಮೂಡಲಗಿ: ‘ಕೊರೊನಾ ಸೋಂಕು ಹರಡದಂತೆ ಸಮಾಜದ ಎಲ್ಲ ಜನರು ಬದ್ದರಾಗಿರಬೇಕು. ಅಂತರ ಕಾಯ್ದುಕೊಳ್ಳುವುದು ಮತ್ತು ಮನೆಯಲ್ಲಿ ಇರುವುದು ಕೊರೊನಾಕ್ಕೆ ನಿಜವಾದ ಮದ್ದು’ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಮೂಡಲಗಿಯಲ್ಲಿ ಬುಧವಾರ ತಾಲ್ಲೂಕು ಅಧಿಕಾರಿಗಳೊಂದಿಗೆ ಕೊರೊನಾ ನಿಯಂತ್ರಣದ ಬಗ್ಗೆ ಚರ್ಚಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೂಡಲಗಿ ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಆಶಾ ಕಾರ್ಯಕರ್ತರ ಕಾರ್ಯವು ಶ್ಲಾಘನೀಯವಾಗಿದೆ. ಆಶಾ ಕಾರ್ಯಕರ್ತರು ತಮ್ಮ ವಯಕ್ತಿಕ ಕೆಲಸಗಳನ್ನು ಬಿಟ್ಟು, ಜೀವ ಫಣಕಿಟ್ಟು …

Read More »

ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಹೂಗುಚ್ಚ ನೀಡಿ ಗೌರವಿಸಿದ: ಪ್ರಶಾಂತ ಚೌಗಲಾ

ಪರಮಾನಂದವಾಡಿ: ಕೋರೋನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಮದ ಆರ್ ಎಸ್ ಎಸ್ ಹಾಗೂ ಗ್ರಾಮದ ಜನತೆಯಲ್ಲ ಸೇರಿ ಅವರಿಗೆ ಹೂಗುಚ್ಛ ನೀಡುವುದರ ಮೂಲಕ ಗೌರವಿಸಲಾಯಿತು. ಗ್ರಾಮದ ಪ್ರಮುಖ ಬೀದಿ- ಬೀದಿಗಳಲ್ಲಿ ಸಂಚರಿಸುತ್ತಾ ಕೋರೋನಾ ಬಗ್ಗೆ ವಿವರಿಸಿ ತಿಳಿಸುತ್ತಾ, ಗ್ರಾಮದ ಎಲ್ಲ ಮನೆಯವರು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹೂ ಹಾರಿಸುವುದರ ಮೂಲಕ ಅವರಿಗೆ ಸ್ವಾಗತವನ್ನು ಮಾಡಲಾಯಿತು. ಈ ವೇಳೆಯಲ್ಲಿ ಮಾತನಾಡಿದ ಆರ್ ಎಸ್ …

Read More »

ಆಶಾಕಾರ್ಯಕರ್ತೆಯರಿಗೆ, ಆರೋಗ್ಯ ಸಹಾಯಕರಿಗೆ ದಿನ ಬಳಕೆಯ ದಿನಸಿ ಕಿಟ್ ವಿತರಣೆ

ಮೂಡಲಗಿ 19 : ಕೊರೋನಾ ವೈರಸ್ ಹರಡದಂತೆ ಮುಜಾಂಗ್ರತ ಕ್ರಮವಾಗಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ , ಆರೋಗ್ಯ ಸಹಾಯಕರಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ವಾಸಂತಿ ತೇರದಾಳ ದಿನ ಬಳಕೆ ಅಗತ್ಯ ವಸ್ತುಗಳನ್ನು ವಿತರಿಸಿದರು . ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಮಾನಿಯಾದ ಮಾಜಿ ಪಿಕೆಪಿಎಸ್ ಅಧ್ಯಕ್ಷ ‌ಹಣಮಂತ ತೇರದಾಳ ಮಾತನಾಡಿ ಕೊರೋನಾ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮತ್ತು ಜನರ ಆರೋಗ್ಯದ ಬಗ್ಗೆ ಮಾಹಿತಿ …

Read More »

ಭಾರತೀಯ ಗೃಹ ಏಕೀಕರಣ ಅಭಿಯಾನ ಪ್ರಾರ್ಥನೆಯನ್ನು ಸಲ್ಲಿಸಿದ ಆರ್.ಎಸ್.ಎಸ್

ಪರಮಾನಂದವಾಡಿ: ಕೋರೋನಾ ನಿಯಂತ್ರಣಕ್ಕಾಗಿ ಆರ್. ಎಸ್. ಎಸ್ ಸಂಘ ಪರಿವಾರ ಪರಮಾನಂದವಾಡಿ ವತಿಯಿಂದ ದಿ 19/04/2020 ರವಿವಾರ ದಂದು ಸಂಜೆ 5-30 ಕ್ಕೆ ಅಖಿಲ ಭಾರತೀಯ ಗೃಹ ಏಕೀಕರಣ ಅಭಿಯಾನ ಪ್ರಾಥ೯ನೆಯನ್ನು ಸಲ್ಲಿಸಲಾಯಿತು. ಈ ವೇಳೆಯಲ್ಲಿ ಸ್ವಯಂ ಸೇವಕ ರಾದ ಗಣೇಶ ಸ್ವಾಮಿ, ಮಹಾದೇವ ತುಳಸಿಗೇರಿ, ದಾನೇಶ್ವರ ಘೇವಾರೆ ಹಾಜರಿದ್ದರು.

Read More »

ಬಾಲಚಂದ್ರ ಜಾರಕಿಹೊಳಿ ಅಭಿಮಾನಿಯಿಂದ 100 ಕುಟುಂಬಗಳಿಗೆ ಆಹಾರ ವಸ್ತುಗಳ ಕಿಟ್ಟ್ ವಿತರಣೆ

ಮೂಡಲಗಿ: ಅರಬಾಂವಿ ಕ್ಷೇತ್ರದಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರ ಸಹಕಾರದಿಂದ ಕೊರೋನಾ ಸೈನಿಕರ ಸೇವೆಯಿಂದ ಸಾಧ್ಯವಾಗುತ್ತಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಅವರು ಸಮೀಪದ ಖಾನಟ್ಟಿ ಗ್ರಾಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಮಾನಿಯಾದ ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಹಾದಿಮನಿ ಅವರು ಕೊರೋನಾ ಸಂತಸ್ತರ 100 ಕುಟುಂಬಗಳಿಗೆ ಆಹಾರ ವಸ್ತುಗಳ …

Read More »

ಮಾನವನ ದೇಹದ ಉಷ್ಣತೆಯ ಕಂಡುಹಿಡಿಯೋ ಸ್ಕ್ರೀನಿಂಗ್ ಮಿಷನ್ ಬಂದ್

ಅಥಣಿ: ಕೊರೊನಾ ವೈರಸ್ ಮೊದಲನೇ ಹಂತದ ಮಾನವನ ದೇಹದ ಉಷ್ಣತೆಯ ಚೆಕಿಂಗ್ ಸ್ಕ್ರೀನಿಂಗ್ ಮಿಷನಿಂದ ಪರಿಶೀಲನೆ ಮಾಡುವ ಸಂದರ್ಭದಲ್ಲಿ ಸ್ಕ್ರೀನಿಂಗ್ ಮಿಷನ್ ಕೈಕೊಟ್ಟಿರುವ ಘಟನೆ ಅಥಣಿ ತಾಲೂಕಿನಲ್ಲಿ ನಡೆದಿದೆ. ಕೊರೊನಾ ಭೀತಿಯಿಂದ ಬೆಳಗಾವಿ ಜಿಲ್ಲೆಯು ತತ್ತರಿಸಿದೆ, ಇದರ ಮಧ್ಯ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗಡಿ ಹೊಂದಿರುವ ಗ್ರಾಮಗಳಿಗೆ ಮಹಾರಾಷ್ಟ್ರದಿಂದ, ಜನರು ಒಳ ರಸ್ತೆಯಿಂದ ನುಸುಳುತ್ತಿದ್ದಾರೆ, ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಆತಂಕ ಸೃಷ್ಟಿಸಿದೆ. ಮಹಾರಾಷ್ಟ್ರ ಮೂಲದ ಇಬ್ಬರು ತಾಲೂಕಿನ ಕಕಮರಿ …

Read More »

ಕರ್ತವ್ಯನಿರತ ಪಿ.ಎಸ್.ಐ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ

ಬೆಳಗಾವಿ: ಲಾಕ್​​ಡೌನ್ ಕರ್ತವ್ಯ ನಿರ್ವಹಿಸಲು ಬೆಳಗಾವಿಯ ಪೊಲೀಸ್ ಠಾಣೆಗೆ ಬರುತ್ತಿದ್ದ ಪಿ.ಎಸ್.ಐಯೊಬ್ಬರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಖಡೇಬಝಾರ್ ಠಾಣೆಯ ಪಿಎಸ್​​ಐ ಗಣಾಚಾರಿ ಸಾವನ್ನಪ್ಪಿದ ವ್ಯಕ್ತಿ. ಯಳ್ಳೂರ ರಸ್ತೆಯ ನಿವಾಸಿಯಾಗಿದ್ದ ಗಣಾಚಾರಿ ಅವರು ಬೆಳಗಾವಿ ಮಹಾನಗರದಲ್ಲಿ ಲಾಕ್ ಡೌನ್ ಬಿಗಿಗೊಳಿಸಲು, ಬಂದೊಬಸ್ತ್​​​ ಕರ್ತವ್ಯಕ್ಕಾಗಿ ಬರುತ್ತಿದ್ದರು. ಈ ವೇಳೆ ಯಳ್ಳೂರ ರಸ್ತೆಯ ಕೆಎಲ್​​ಇ ಆಸ್ಪತ್ರೆ ಬಳಿ, ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ. ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ …

Read More »

You cannot copy content of this page