ಗುರುವಾರ , ನವೆಂಬರ್ 21 2024
kn
Breaking News

ಸರ್ಕಾರಿ ಶಾಲೆಯ ಬಿಸಿಯೂಟದ ಆಹಾಧಾನ್ಯಗಳ ವಿತರಣೆ

Spread the love

ಮೂಡಲಗಿ: ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಪಾಲಕರಿಗೆ ಆಹಾರಧಾನ್ಯಗಳನ್ನು ವಿತರಿಸಲಾಯಿತು.
ಕೊರೊನಾ ವೈರಸ್ ಸೋಂಕಿನಿಂದಾಗಿ ರಾಜ್ಯದಲ್ಲಿ ಲಾಕಡೌನ ಘೋಷಣೆಯಾದ ಕಾರಣ, ಶಾಲೆಗಳಿಗೆ ಡಿಡೀರ ರಜೆ ಘೋಷಣೆಯಾದ ಸಂದರ್ಭದಲ್ಲಿ ಅಕ್ಷರದಾಸೋಹದ ಮದ್ಯಾಹ್ನದ ಬಿಸಿಯೂಟ ನಂಬಿಕೊಂಡಿದ್ದ ಎಷ್ಟೋ ಬಡವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡ ಸರ್ಕಾರ, ಮಾರ್ಚ 14 ರಿಂದ ಎಪ್ರೀಲ್ 10ರ ವರೆಗಿನ 21 ದಿನಗಳ ಕಾಲದ ಆಹಾರ ಧಾನ್ಯಗಳನ್ನು ವಿದ್ಯಾರ್ಥಿಗಳ ಪಾಲಕರಿಗೆ ವಿತರಿಸಲು ಆದೇಶಿಸಿದ ಕಾರಣ, ತುಕ್ಕಾನಟ್ಟಿಯ ಸರ್ಕಾರಿ ಕನ್ನಡ ಶಾಲೆಯಲ್ಲಿ ಸುಮಾರು 700 ವಿದ್ಯಾರ್ಥಿಗಳ ಪಾಲಕರಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು. ಈ ಸಂರ್ದಭದಲ್ಲಿ ಮುಖ್ಯ ಗುರುಗಳಾದ ಎಸ್.ವ್ಹಿ.ಗಿರೆಣ್ಣವರರವರು ಮಾತನಾಡಿ ಪಾಲಕರಿಗೆ, ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಬಗ್ಗೆ ತಿಳುವಳಿಕೆ ನೀಡಿ, ಎಲ್ಲರೂ ಮಾಸ್ಕ ಧರಿಸಬೇಕಲ್ಲದೆ, ಯಾರೂ ಮನೆಯಿಂದ ಹೊರಗೆ ಬರದೆ ಮನೆಯಲ್ಲಿದ್ದುಕೊಂಡು ಕೊರೊನಾ ಬರದಂತೆ ಕಾಪಾಡಿಕೊಳ್ಳುವದರ ಮುಖಾಂತರ ಸರ್ಕಾರಿ ಆಧೇಶವನ್ನು ಪಾಲಿಸಬೇಕೆಂದು ಹೇಳಿದರು.
ವಿಮಲಾಕ್ಷಿ ತೋರಗಲ್, ಮಂಜುನಾಥ ಕಮ್ಮಾರ, ಕುಸುಮಾ ಚಿಗರಿ, ರೂಪಾ ಗದಾಡಿ ಹಾಗೂ ಅಕ್ಷರ ದಾಸೋಹದ ಸಿಬ್ಬಂಧಿ ಪಾಲ್ಗೊಂಡಿದ್ದರು.

ವರದಿ: ಕೆ ವಾಯ್ ಮೀಶಿ


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page