ಬುಧವಾರ , ಮೇ 31 2023
kn
Breaking News

ಕೋರೊನಾ ಜಾಗೃತ ಗೀತೆ ಕೇಳಿ: ಉತ್ತರ ಕರ್ನಾಟಕದ ಶೈಲಿಯಲ್ಲಿ

Spread the love

ಖಾನಟ್ಟಿ:  ಮಾಹಾಮಾರಿ ಕೊರೋನಾ ತನ್ನ ರಣಕೇಕೆ ಮೂಲಕ ಅಮಾಯಕ ಮುಗ್ದರ ಬದುಕನ್ನೇ ಅಂತ್ಯಗೊಳಿಸುತ್ತಿದೆ. ದೇಶಕ್ಕೆ ದೇಶವೇ ಸ್ಥಬ್ದವಾದ ಘೋರ ಸನ್ನಿವೇಶದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ಜನರ ಬದುಕನ್ನ ಕಿತ್ತು ತಿನ್ನುತ್ತಿದೆ ಎಂದು ಯುವ ಸಾಹಿತಿ ಶಿವಾಲಿಂಗ ದಾನನ್ನವರ ನಮ್ಮ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು

ಇಂಥ ಸಮಯದಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಅಧಿಕಾರಿಗಳು, ಮುಖಂಡರುಗಳು ಸ್ವಯಂ ಸೇವಕರು, ಮಾದ್ಯಮದವರು ಎಷ್ಟೋ ಜಾಗೃತಿ ಮೂಡಿಸಿ ಕೋರೊನಾ ಹತ್ತಿಕ್ಕಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಇದರ ಜೋತೆ ಕೋರೊನಾ ಪೀಡಿತರನ್ನ ಗುಣಪಡಿಸಲು ಪ್ರತಿ ಕ್ಷಣ-ಕ್ಷಣಕ್ಕು ಔಷದ ಉಪಚಾರಕ್ಕಾಗಿ ವೈದ್ಯರು, ನರ್ಸಗಳು ಸಾಕಷ್ಟು ಕಷ್ಟ ಪಡುತ್ತಿದ್ದರು, ಕೆಲವು ಕಿಡಿಗೆಡಿಗಳು ಉದ್ದಟತನ ಪ್ರದರ್ಶನ ಮಾಡುತ್ತಿರುವದು ಮುಗ್ದ ಜನರ ದೌರ್ಬಾಗ್ಯವೇ ಅನ್ನಬಹುದು ಎಂದು ತಮ್ಮ ಅಳಲನ್ನು ಹೇಳುತ್ತಾ, ನಾಡಿನ ಜನತೆಗೆ ನನ್ನ ಒಂದು ಅಳಿಲು ಸೇವೆ ಮಾಡಬೇಕೆಂದು ಕೋರೊನಾ ಜಾಗೃತಿ ಹಾಡೊಂದನ್ನ ರಚಿಸಿದ್ದಾರೆ.

ಜಾಗೃತಿ ಗೀತೆಯ ಬಗ್ಗೆ ಮಾತನಾಡಿದ ಅವರು ಗೀತೆಯನ್ನು ಜಾನಪದ ಜಾನ ಶಬ್ಬಿರ ಡಾಂಗೆಯವರ ದ್ವನಿಯೊಂದಿಗೆ ರಚಿಸಿರುವುದಾಗಿ ತಿಳಿಸಿದರು.

ನಮ್ಮ ಉತ್ತರ ಕರ್ನಾಟಕದ ಜಾನಪದ ಜಾನ ಶಬ್ಬಿರ ಡಾಂಗೆಯವರ ದ್ವನಿ ಹಾಗೂ ಖಾನಟ್ಟಿಯ ಯುವ ಸಾಹಿತಿ ಶಿವಲಿಂಗ ದಾನನ್ನವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಕೋರೊನಾ ಜಾಗೃತಿ ಮೂಡಿಸುವ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಗೀತೆಯ ವಿಡಿಯೋ ಇಲ್ಲಿ ಕೆಳಗೆ ಕೊಟ್ಟಿರುವ ಲಿಂಕ್ ಅಲ್ಲಿ ಇದೆ.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page