ಬುಧವಾರ , ಮೇ 31 2023
kn
Breaking News

ಹಳ್ಳೂರ : ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಗೆ ಮುಳ್ಳಿನ ಸರ್ಪಗಾವಲು

Spread the love

ಹಳ್ಳೂರ : ಬೆಳಗಾವಿಯಲ್ಲಿ ಮೂರು ಕೊರೊನಾ ಪಾಸಿಟಿವ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲಾದ್ಯಾಂತ್ಯ ಜನರಲ್ಲಿ ಆತಂಕ ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಗ್ರಾಮದ ಸಾರ್ವಜನಿಕರು ಹಾಗೂ ಗ್ರಾಪಂ ಅಧಿಕಾರಿಗಳು ಮತ್ತು ಪೋಲಿಸ್ ಸಿಬ್ಬಂದಿ ನೇತೃತ್ವದಲ್ಲಿ ಇಂದು ಗ್ರಾಮದ ಪ್ರಮುಖ ದಾರಿಗೆ ಹಾಗೂ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಗೆ ಮುಳ್ಳಿನ ಸರ್ಪಗಾವಲು ಹಾಕಿದ್ದಾರೆ.
ಹೌದು ನಿನ್ನೆ ಬೆಳಗಾವಿಯಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ದಿಂದ ಜಿಲ್ಲಾಡಳಿತ ಹೈಅಲರ್ಟ ಘೋಷಣೆ ಮಾಡಿದೆ, ಯಾರು ವಾಹನ ಮೇಲೆ ತಿರುಗಾಡದಂತೆ ಕಡಖಕ್ಕಾಗಿ ಆದೇಶವನ್ನು ಹೊರಡಿಸಿದೆ.
ಗ್ರಾಮದಲ್ಲಿ ಬೇರೆ ಜನರು ಬರಬಾರದೆಂದು ಗ್ರಾಮದ ಮುಖಂಡರು ಹಾಗೂ ಗ್ರಾಪಂ ಅಧಿಕಾರಿಗಳು ಹಾಗೂ ಪೋಲಿಸ್ ಸಿಬ್ಬಂದಿ ನೇತೃತ್ವದಲ್ಲಿ ಗ್ರಾಮದ ರಸ್ತೆಗೆ ಹಾಗೂ ನಿಪ್ಪಾಣಿ ಮುಧೋಳ ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ಮುಳ್ಳಿನ ಗಿಡ ಹಾಕಿ ನಿರ್ಬಂಧನೆ ಮಾಡಿ ಬೇರೆ ಬೇರೆ ಜನರು ಗ್ರಾಮದಲ್ಲಿ ಹೊರಗಿನಿಂದ ಯಾರೂ ಒಳಗೆ ಬಾರದಂತೆ ಬಂದೋಬಸ್ತಿ ಮಾಡಿದ್ದಾರೆ.
ಗ್ರಾಮದ ಹದ್ದಿನಲ್ಲಿ ಪೋಲಿಸ್ ಇಲಾಖೆಯಿಂದ ಚೆಕ್ ಪೋಸ್ಟ್ ತೇರೆಯಲಾಗಿದ್ದು, ಅಲ್ಲಿಯೂ ಕೂಡಾ ಪೋಲಿಸರು ಹದ್ದಿನ ಕಣ್ಣು ಇಟ್ಟಿದ್ದಾರೆ, ಅಪರಿಚಿತರು ಬರದಂತೆ ಕಟ್ಟೆಚರ್ ವಹಿಸಿದ್ದಾರೆ.
ಗ್ರಾಮದ ಸಾರ್ವಜನಿಕರು ಯಾವುದೇ ಕಾರಣಕ್ಕು ಮನೆ ಬಿಟ್ಟು ಹೊರಗಡೆ ಬರಬಾರದು, ಒಂದು ವೇಳೆ ಬಂದರೆ ಹಂತವರ ವಿರುದ್ದ ಪೋಲಿಸ್ ಅಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳವ ಅಧಿಕಾರಿವಿದೆ. ಹಾಗು 3 ದಿನಗಳ ಕಾಲ ಯಾವುದೇ ಅಂಗಡಿ ಮುಗ್ಗಟ್ಟುಗಳು ತೇಗೆಯದಂತೆ ಸೂಚನೆ ನೀಡಿದ್ದಾರೆ..
ಈ ಸಂದರ್ಭದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಚ್ ವೈ ತಾಳಿಕೋಟಿ, ಗ್ರಾಮ ಲೇಕ್ಕಾಧಿಕಾರಿ ಸಂಜು ಅಗ್ನೇಪ್ಪಗೋಳ, ಗ್ರಾಮದ ಬಿಟ್ ಪೋಲಿಸ್ ಎನ್ ಎಸ್ ಒಡೆಯರ್, ಮೂಡಲಗಿ ತಾಲೂಕಾ ಭೂ ನ್ಯಾಯ ಮಂಡಳಿಯ ಸದಸ್ಯ ಭೀಮಶಿ ಮಗದುಮ್ಮ, ಗ್ರಾಪಂ ಸದಸ್ಯರಾದ ಲಕ್ಷಣ ಕತ್ತಿ , ಬಾಹುಬಲಿ ಸಪ್ತಾಸಾಗರ, ಸಂಗಪ್ಪ ಪಟ್ಟಣಶೇಟಿ, ಮಲ್ಲಪ್ಪ ಹೊಸಟ್ಟಿ ಹಾಗೂ ಕಿಶೋರ್ ಗಣಾಚಾರಿ, ಮಹಾತೇಂಶ ಸಂತಿ, ಗಿರಮಲ್ಲ ಸಂತಿ, ರಾಜು ಮುಜಾವರ್, ನಾರಾಯಣ ಪೂಜೇರಿ, ಈಶ್ವರ ವೆಂಕಟಾಪೂರ ಉಪಸ್ಥಿತರಿದ್ದರು


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page