ಶುಕ್ರವಾರ , ಏಪ್ರಿಲ್ 19 2024
kn
Breaking News

ದೇಶ ಗಂಡಾತರದಲ್ಲಿ ಇದೆ ವೈದ್ಯರ ಸರಕಾರಗಳ ಸೌಲಭ್ಯ ಪಡೆದು ಕೊರೊನಾದಿಂದ ಮುಕ್ತರಾಗೋಣ- ಸಚಿವ ರಮೇಶ್ ಜಾರಕಿಹೊಳಿ

Spread the love

ಮೂಡಲಗಿ :- ಕೊರೊನಾ ಇಡೀ ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿರವ ಹಿನ್ನಲೆ ರಾಜಕೀಯ ನಾಯಕರು ಬರಿ ಭಾಷಣ ಮಾಡಿ ಹೋಗುವುದು ಅಲ್ಲ, ಯಾವುದೇ ಜಾತಿ ಪಕ್ಷ ಅಲ್ಲದೇ ವಿರೋಧ ಪಕ್ಷದ ಮುಖಂಡರು ಸಹ ಸೇರಿ ಮಾಡುವಂತ ಕೆಲಸವಾಗಿದೆ ಎಂದು ಗೋಕಾಕ ಶಾಸಕ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಅವರು ಮೂಡಲಗಿ ಪಟ್ಟಣದ ಈರಣ್ಣ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾದ ಕೊರೊನಾ ವೈರಸ್ ಬಗ್ಗೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಗತ್ತಿನಾದ್ಯಂತ ಹರಡಿರುವ ಮಹಾಮಾರಿ ಕೊರೊನಾ ವೈರಸದಿಂದ ನಮ್ಮ ದೇಶದಲ್ಲಿ ಸೋಂಕಿತರ ಮತ್ತು ಸಾವುಗಳ ಸಂಖ್ಯೆ ಹೆಚ್ಚಾಗುತ್ತಾ ದೇಶ ಗಂಡಾತರ ಪರಿಸ್ಥಿತಿಯಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮತ್ತು ವೈದ್ಯರ ಸಲಹೆ ಮತ್ತು ಸೌಲಭ್ಯಗಳನ್ನು ಸೂಕ್ತವಾಗಿ ಬಳಿಸಿಕೊಂಡು ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ ಕೊರೊನಾದಿಂದ ಮುಕ್ತರಾಗೋಣಾ ಎಂದು ಹೇಳಿದರು.

ಕೊರೊನಾ ಹರಡದಂತೆ ನೋಡಿಕೊಳ್ಳಬೇಕಾದರೆ ಪ್ರತಿಯೊಬ್ಬ ನಾಗರಿಕರು, ಜನಪ್ರತಿನಿಧಿಗಳು ತಮ್ಮ ತಮ್ಮ ವ್ಯಾಪ್ತಿಗೆ ಬರುವ ಸ್ಥಳಗಲ್ಲಿ ಪ್ರತಿದಿನ ಮನೆಗಳಿಗೆ ಭೇಟಿ ನೀಡಿ ಅನಾರೋಗ್ಯದಿಂದ ಇರುವಂತ ವ್ಯಕ್ತಿಗಳ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದರೆ ಕೊರೊನಾ ಹರಡದಂತೆ ತಡೆಗಟ್ಟಲು ಸಾಧ್ಯ ಎಂದು ಹೇಳಿದರು.

ನಿಜಾಮುದ್ದಿನದಿಂದ ಬಂದoತ ವ್ಯಕ್ತಿಗಳು ಸ್ವಯಂ ಪೇರಿತವಾಗಿ ತಾವೇ ಬಂದು ಪರಿಶೀಲನೆ ಮಾಡಿಕೊಳ್ಳಬೇಕು ಹೊರೆತು ಮನೆಯಲ್ಲೇ ಬಚ್ಚಿಟ್ಟಕೊಳ್ಳ ಬಾರದು, ಹಿಂದೂ ಮುಸ್ಲಿಂ ಭೇದ ಭಾವ ಇಲ್ಲದೇ ಒಗ್ಗಟ್ಟಿನಿಂದ ಕೊರೊನಾ ವಿರುದ್ದ ಹೋರಾಟ ಮಾಡಬೇಕೆಂದರು.

ಮೂಡಲಗಿ ದಂಡಾಧಿಕಾರಿ ಡಿ ಜೆ ಮಹಾತ್ ಪ್ರಾಸ್ಥಾವಿಕವಾಗಿ ಮಾತನಾಡಿ, ನಮ್ಮ ತಾಲೂಕಿನಾದ್ಯಂತ 7 ಜನ ಹೊರದೇಶದಿಂದ ಬಂದoತ ವ್ಯಕ್ತಿಗಳು, ಬೇರೆ ಬೇರೆ ರಾಜ್ಯದಿಂದ ಬಂದoತ 446 ವ್ಯಕ್ತಿಗಳು, ಬೇರೆ ಜಿಲ್ಲೆಗಳಿಂದ ಬಂದವರು 772 ವ್ಯಕ್ತಿಗಳನ್ನು ಗುರುತಿಸಿ ಗೃಹ ಬಂಧನದಲ್ಲಿ ಇಡಲಾಗಿದೆ. ಸುದೈವ ಇವರಲ್ಲಿ ಯಾರಿಗೂ ಸೋಂಕು ತಗಲಿರುವುದು ಇದುವರೆಗೂ ದೃಡಪಟ್ಟಿಲಾ. ಪೋಲಿಸ್ ಇಲಾಖೆ, ಅಂಗವಾಡಿ, ಆಶಾ ಕಾರ್ಯಕರ್ತೆಯರು, ಪುರಸಭೆ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ರೋಗ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.

ತಾಲೂಕಾ ವೈದ್ಯಾಧಿಕಾರಿ ಡಾ. ಅಂಟಿನ್ ಮಾತನಾಡಿ, ಈ ಸಾಂಕ್ರಾಮಿ ರೋಗವು ಮೂರು ತಿಂಗಳಲ್ಲಿ ಜಗತ್ತಿನಾದ್ಯಂತ ಹಬ್ಬಿದೆ, ಈ ರೋಗಕ್ಕೆ ನಿಖರವಾದ ಔಷಧಿ ಇನ್ನೂ ಸಿಕ್ಕಿಲಾ ವಯಸ್ಸಾದವರೂ ಮತ್ತು ಮಧುಮೇಹಿ ರೋಗಿಗಳು ಕಟ್ಟುನಿಟ್ಟಿನಿಂದ ಚಿಕಿತ್ಸೆ ಪಡೆದಿಕೊಳ್ಳಬೇಕೆಂದರು.

ಡಾ.ರಾಜೇಂದ್ರ ಸಣ್ಣಕ್ಕಿ ಮಾತನಾಡಿ ಸರಕಾಗಳ ಲಾಕ್ ಡೌನ ಕಟ್ಟಳೆಗಳಿಗೆ ಒಳಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದರ ಜೊತೆಗೆ ಇತರರನ್ನು ರಕ್ಷಿಸಲು ಮುಂದಾಗೋಣ ಎಂದು ಹೇಳಿ ಅರಬಾಂವಿ ಶಾಸಕರ ಮಾರ್ಗದರ್ಶನದಲ್ಲಿ ಜನಪ್ರತಿನಿಧಿಗಳು,ಅಭಿಮಾನಿಗಳು ತಂಡ ತಂಡವಾಗಿ ಸೋಂಕು ಹರಡದಂತೆ ಜಾಗ್ರತೆ ಮೂಡಿಸುತ್ತಿದ್ದಾರೆ.

ಜಿ.ಪಂ.ಸದಸ್ಯ ಗೋವಿಂದ ಕೊಪ್ಪದ, ತಾ.ಪಂ.ಕಾರ್ಯನಿರ್ವಾಹಕ ಬಸವರಾಜ ಹೆಗ್ಗನಾಯಕ ಸಿ.ಪಿ.ಐ.ವೆಂಕಟೇಶ ಮುರನಾಳ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಅರಬಾವಿ ಶಾಸಕರು ಮೂಡಲಗಿ ತಾಲೂಕಿಗೆ 2ಲಕ್ಷ ಮಾಸ್ಕಗಳನ್ನು ಹಂತ ಹಂತವಾಗಿ ಜನಪ್ರತಿನಿಧಿಗಳ ಮೂಲಕ ವಿತರಿಸುವರೆಂದು ಹೇಳಿದರು.

ಪುರಸಭೆ ಆರೋಗ್ಯಾಧಿಕಾರಿ ಚಿದಾನಂದ ಮುಗುಳಖೋಡ ಸ್ವಾಗತಿಸಿ ವಂದಿಸಿದರು.

ಸಭೆಯಲ್ಲಿ ಮುಖ್ಯಾಧಿಕಾರಿ ಡಿ.ಎಸ್.ಹರ್ದಿ, ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ,ಎಚ್.ವಾಯ್.ಬಾಲದoಡಿ,ಆರ್.ಕೆ.ಬಿಸಿರೊಟ್ಟಿ ಡಾ: ಭಾರತಿ ಕೋಣಿ, ಸಿ.ಡಿ.ಪಿ.ಒ. ವಾಯ್.ಎಮ್.ಗುಜನಟ್ಟಿ,ಎನ್.ಎಸ್.ಎಫ್ ಅತಿಥಿ ಗೃಹದ ನಾಗಪ್ಪ ಶೇಖರಗೋಳ,ದಾಸಪ್ಪ ನಾಯಕ, ಪುರಸಭೆ ಸದಸ್ಯರು, ವಿವಿಧ ಸಂಘ ಸಂಸ್ಥೆಯವರು,ನೂಡಲ್ ಅಧಿಕಾರಿಗಳು ವಿವಿಧ ಗ್ರಾಮಸ್ತರು ಮತ್ತಿತರರು ಇದ್ದರು


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page