ಮಂಗಳವಾರ , ಅಕ್ಟೋಬರ್ 4 2022
kn
Breaking News

ಮತದಾನ ಪ್ರತಿಯೊಬ್ಬರ ಹಕ್ಕು : ಇಒ ಪ್ರಕಾಶ ವಡ್ಡರ

Spread the love

ಮೂಡಲಗಿ: ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಪ್ರಜಾಪ್ರಭುತ್ವ ಭದ್ರಪಡಿಸಲು ನನ್ನ ಮತ ನನ್ನ ಹಕ್ಕಾಗಿದೆ ಎಂದು ತಾ.ಪಂ ಇಒ ಮತ್ತು ತಾಲೂಕಾ ಸ್ವಿಪ್ ಸಮಿತಿಯ ಪ್ರಕಾಶ ವಡ್ಡರ ಹೇಳಿದರು.
ಅವರು ಸಮೀಪದ ಹಳ್ಳೂರ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಪ್ರಯುಕ್ತ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಮತದಾನದ ಕುರಿತು ಅರಿವು ಹಾಗೂ ಅದರ ಮಹತ್ವ ತಿಳಿದಿರಬೇಕು. ಈಗಿರುವ ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವದರಿಂದ ಅದರ ಬಗ್ಗೆ ಸಂಪೂರ್ಣವಾದ ಜ್ಞಾನ ಹೊಂದಿರಬೇಕು. ಅರ್ಹ ಅಭ್ಯರ್ಥಿಗೆ ತಮ್ಮ ಅಮೂಲ್ಯ ಮತ ಚಾಲಾಯಿಸಿ ಉತ್ತಮ ಆಡಳಿತ ತಮ್ಮದಾಗಿಸಿಕೊಳ್ಳಿ ಎಂದು ನುಡಿದರು.
ತಾಪಂ ಸಹಾಯಕ ನಿರ್ಧೇಶಕ ಎಸ್.ಎಸ್ ರೊಡ್ಡನವರ ಮಾತನಾಡಿ, ಜಾಗೃತಿ ಜಾಥಾ, ಅಣಕು ಮತ ಚಲಾವಣೆ, ಭಿತ್ತಿ ಪತ್ರಗಳು ಹಾಗೂ ಇಂದಿನ ದಿನಮಾನಗಳಲ್ಲಿ ಸಮೂಹ ಮಾದ್ಯಮ ಮೊಬೈಲ್‍ಗಳ ಮೂಲಕ ವ್ಯಾಪಕ ಪ್ರಚಾರ ನೀಡುತ್ತಿದೆ. ಮತದಾರರು ಯಾವುದೇ ಆಶೆ ಆಮಿಷಗಳಿಗೆ ಒಳಗಾಗದೆ ತಮ್ಮಯ ಶ್ರೇಷ್ಠವಾದ ಮತವನ್ನು ಚಲಾಯಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಹನಮಂತ ತಾಳಿಕೋಟಿ, ಮಂಜುನಾಥ ಕೋಹಳ್ಳಿ, ಈಶ್ವರ ಗಣಾಚಾರಿ, ಮಹಾಂತೇಶ ಸಂತಿ, ಮಹಾಂತೇಶ ಕುಂದರಗಿ, ಮುತ್ತೇಪ್ಪ ಗಡಾದೆ, ಅರ್ಜುನ ಕುಲಗೋಡ, ಕುತಬು ಮುಜಾವರ, ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.


Spread the love

About Kenchappa Meesi

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

5 comments

  1. You really make it seem so easy with your presentation but I find this matter to be really something that I think I would never understand. It seems too complicated and extremely broad for me. I’m looking forward for your next post, I’ll try to get the hang of it!

  2. I’ve been surfing online more than three hours today, yet I never found any interesting article like yours. It is pretty worth enough for me. In my view, if all web owners and bloggers made good content as you did, the web will be much more useful than ever before.

  3. I like this post, enjoyed this one appreciate it for putting up.

  4. It’s really a nice and helpful piece of info. I am glad that you shared this helpful information with us. Please keep us informed like this. Thanks for sharing.

  5. Some genuinely great information, Gladiola I discovered this. “Carthago delenda est. (Carthage must be destroyed.)” by Marcius Porcius Cato.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!