ಕೊಪ್ಪಳ:ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರ ಮೇಲೆ ಬಸವರಾಜ ಶೀಲವಂತರ ಎಂಬುವರು ಭ್ರಷ್ಟಾಚಾರ, ಹಗರಣ ಮಾಡಿದ್ದಾರೆ ಎಂದು ಆರೋಪಿಸಿ ಯಾವುದೇ ದಾಖಲೆ ನೀಡದೇ ಏಕಾಏಕಿ ದೂರು ನೀಡಿದ್ದರು.ಈ ದೂರಿನ ಅನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾವುದೇ ದಾಖಲೆ ಪಡೆಯದೆ ಏಕಾಏಕಿ ಬೀರಪ್ಪ ಅಂಡಗಿ ಚಿಲವಾಡಗಿ ಅವರ ವಿರುದ್ದ ವಿಚಾರಣಾಧಿಕಾರಿಗಳನ್ನು ಹಾಗೂ ಮಂಡಣಾಧಿಕಾರಿಗಳನ್ನು ನೇಮಕ ಮಾಡುತ್ತಾರೆ.ವಿಚಾರಣೆ ಅಧಿಕಾರಿಗಳು ಹಾಗೂ ಮಂಡನಾಧಿಕಾರಿಗಳು ಬೀರಪ್ಪ ಆಂಡಗಿ ಚಿಲವಾಡಗಿ ಅವರ ವಿರುದ್ದ ಅವರ ದೂರಿಗೆ ಸಂಬಂಧಿಸಿದಂತೆ ಎಲ್ಲಾ ರೀತಿಯಲ್ಲಿ ವಿಚಾರಣೆ ಮಾಡಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೂಡಾ ಪಡೆದು ವಿಚಾರಣಾ ವರದಿಯನ್ನು ಸಲ್ಲಿಸಿ ನಾಲ್ಕು ತಿಂಗಳು ಕಳೆದಿದೆ.ಬೀರಪ್ಪ ಅಂಡಗಿ ಅವರು ತಮ್ಮ ಮೇಲಿನ ದೂರಿಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ನೀಡಿದ ವರದಿಯನ್ನು ನೀಡುವಂತೆ ನಾಲ್ಕು ತಿಂಗಳ ಹಿಂದೆ ಮನವಿ ಪತ್ರ ನೀಡಿದರೂ ಕೂಡಾ ಅಧಿಕಾರಿ ಮಾತ್ರ ಮಾಹಿತಿ ನೀಡದೇ ವಿಳಂಭ ನೀತಿಯನ್ನು ಅನುಸರಿಸುತ್ತಿದ್ದಾರೆ.ಈ ವಿಳಂಭ ನೀತಿಯನ್ನು ಖಂಡಿಸಿ ಇಂದು ಕ್ಷೇತ್ರದ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಬೀರಪ್ಪ ಅಂಡಗಿ ಧರಣಿ ನಡೆಸಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರು ಮಾತನಾಡಿ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ಹಾಗೂ ದೂರುದಾರದ ಬಸವರಾಜ ಶೀಲವಂತರ ಅವರು ಇಬ್ಬರು ಗೆಳೆಯರಾಗಿದ್ದು,ಇಬ್ಬರು ಸೇರಿಕೊಂಡರು ನನ್ನ ಮಾನ ಆಳು ಮಾಡಬೇಕು ಹಾಗೂ ನನ್ನನ್ನು ಮಾನಸಿಕ ಕುಗ್ಗಿಸುವ ಉದ್ದೇಶದಿಂದ ನಾಲ್ಕು ತಿಂಗಳಿನಿಂದ ತನಿಖಾ ವರದಿ ನೀಡದಂತೆ ಕಾಲ ಹರಣ ಮಾಡುತ್ತಿದ್ದಾರೆ.ಅಲ್ಲದೇ ಬೀರಪ್ಪ ಅಂಡಗಿ ಅವರು ಒಬ್ಬ ಸಾಮಾನ್ಯ ಶಿಕ್ಷಕರಾಗಿರದೇ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ,ಎನ್.ಪಿ.ಎಸ್.ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಜೊತೆಗೆ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರಿ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಅವರ ಹಿತೈಷಿಗಳು ಇರುವುದರಿಂದ ಪ್ರತಿ ದಿನ ಅನೇಕರು ಕರೆ ಮಾಡಿ ಪ್ರತಿಯೊಬ್ಬರಿಗೂ ಉತ್ತರ ನೀಡುವುದು ಕಷ್ಟಕರವಾಗಿದೆ.ಇದರಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಆದ್ದರಿಂದ ನನ್ನ ವಿರುದ್ಧ ದೂರಿಗೆ ಸಂಬಂಧಿಸಿದಂತೆ ವರದಿ ನೀಡಿದರೆ ತಪ್ಪು ಮಾಹಿತಿ ನೀಡಿದ ಮಾಹಿತಿದಾರರ ವಿರುದ್ದ ಕಾನೂನಾತ್ಮಕ ಹೋರಾಟ ಮಾಡಲು ಸಾಧ್ಯವಾಗುತ್ತದೆ ಕೂಡಲೇ ನೀಡುವಂತೆ ಹಾಗೂ ಇಷ್ಟ ದಿನ ತಡವಾಗಲು ಕಾರಣ ತಿಳಿಸಬೇಕು ಎಂದು ಪಟ್ಟು ಹಿಡಿದರು.
ಕೊನೆಯಲ್ಲಿ ಕ್ಷೇತ್ರದ ಶಿಕ್ಷಣಾಧಿಕಾರಿ ಉಮೇಶ ಪೂಜಾರ ಅವರು ಬೀರಪ್ಪ ಅಂಡಗಿ ಚಿಲವಾಡಗಿ ಅವರ ವಿರುದ್ದ ದೂರಿಗೆ ಸಂಬಂಧಿಸಿದಂತೆ ನೀಡಿರುವ ತನಿಖಾ ವರದಿಯನ್ನು ನೀಡುವ ಮೂಲಕ ಧರಣಿಯನ್ನು ಅಂತ್ಯಗೊಳಿಸಲಾಯಿತು.
