ಮೂಡಲಗಿ: ಕೋಟ್ಯಾನು ಕೋಟಿ ಹಿಂದೂಗಳ ಸಂಕಲ್ಪಗಳಾಗಿರುವ ರಾಮ ಮಂದಿರ ನಿರ್ಮಾಣ ಕಾರ್ಯ ದೇಶದ ಆತ್ಮಗೌರವದ ಸಂಕೇತವಾಗಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಕಲ್ಲೋಳಿ ಪಟ್ಟಣದ ರವಿವಾರ ಜ.17 ರಂದು ಹನುಮಂತ ದೇವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭವ್ಯ ಶ್ರೀರಾಮ ಮಂದಿರವನ್ನು ಹಿಂದೂ ಭಾಂದವರೆಲ್ಲ ಕೂಡಿಕೊಂಡು ನಿರ್ಮಿಸುವ ಮೂಲಕ ಹಿಂದೂ ಸಮಾಜ ಜಾಗೃತಗೊಂಡು ಒಗ್ಗಟಿನಿಂದ ರಾಮರಾಜ್ಯ ನಿರ್ಮಿಸುವ ಸಂಕಲ್ಪ ಪೂರ್ಣಗೊಳಿಸಬೇಕಾಗಿದೆ ಎಂದರು. ವಿಶ್ವ ಹಿಂದೂ ಪರಿಷತ್, ಆರ್.ಎಸ್.ಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಹಿಂದೂ ಸಮಾಜ ಸಹಾಯ ಸಹಕಾರ ನೀಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಹದೇವ ಖಾನಾಪೂರ, ಬಸವರಾಜ ಕಡಾಡಿ, ಈರಣ್ಣ ಮುನ್ನೊಳಿಮಠ, ಅಪ್ಪಾಸಾಬ ಮಳವಾಡ, ಬೋಜರಾಜ ಬೆಳಕೂಡ, ಮಹಾಂತೇಶ ಮಳವಾಡ, ಹಣಮಂತ ಕಲಕುಟ್ರಿ, ಪರಪ್ಪ ಗಿರೆಣ್ಣವರ, ಶಿವಾನಂದ ಬಡಿಗೇರ, ಪ್ರಕಾಶ ಪತ್ತಾರ, ಶಂಕರ ಕೌಜಲಗಿ, ರಮೇಶ ಸಣ್ಣಮನಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಮೂಡಲಗಿ: ಕಲ್ಲೋಳಿ ಪಟ್ಟಣದ ಹನುಮಂತ ದೇವರ ದೇವಸ್ಥಾನದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನದಲ್ಲಿ ನಿಧಿ ಸಮರ್ಪಣೆಗೊಳಿಸುತ್ತಿರುವುದು. ಸತೀಶ ಕಡಾಡಿ, ಸಹದೇವ ಖಾನಾಪೂರ, ಬಸವರಾಜ ಕಡಾಡಿ ಇದ್ದರು.