ಮಂಗಳವಾರ , ಅಕ್ಟೋಬರ್ 4 2022
kn
Breaking News

ಸಾಧನೆ, ಸಾಮಾಜಿಕ ಮೌಲ್ಯಗಳು ತೋರುವ ವೈಧ್ಯರಾಗಬೇಕು: ಡಾ ಬೆಣಚನಮರಡಿ

Spread the love

ಮೂಡಲಗಿ: ಸಾಧನೆಯನ್ನು ಮಾದರಿಯಾಗಿಟ್ಟುಕೊಂಡು, ಸಾಮಾಜಿಕ ಮೌಲ್ಯಗಳನ್ನು ತೋರುವ ನಿಟ್ಟಿನಲ್ಲಿ ಜನ ಸಾಮಾನ್ಯರ ಕೈಗೆಟುಕುವಂತಹ ವೈಧ್ಯರಾಗಬೇಕು ಎಂದು ನಿವೃತ್ತ ತಾಲೂಕಾ ವೈಧ್ಯಾಧಿಕಾರಿ ಡಾ. ಆರ್.ಎಸ್ ಬೆಣಚನಮರಡಿ ಹೇಳಿದರು.
ಅವರು ಪಟ್ಟಣದ ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಸಾಪ ಮೂಡಲಗಿ ಘಟಕಗಳ ಸಂಯುಕ್ತಾಶ್ರಯದಲ್ಲಿ 2020-21ನೇ ಸಾಲಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಸಾಧಕ ವಿದ್ಯಾರ್ಥಿಗಳ ಸತ್ಕಾರ ಸಮಾರಂಭದಲ್ಲಿ ಮಾತನಾಡಿದರು. ನೀಟ್ ಹಾಗೂ ಇತರೆ ವೃತ್ತಿ ಪರ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬೇಕಾದರೆ ನಿರಂತರ ಪ್ರಯತ್ನ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ. ಸದಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರಬೇಕು. ವೈಧ್ಯರಾದಂತಹವರು ನಿರಂತರ ಕಲಿಕೆಯಲ್ಲಿರುತ್ತಾರೆ. ಹತ್ತಾರು ಬಗೆಯ ಖಾಯಿಲೆಗಳು ಬರುತ್ತವೆ ಅಂತಹವುಗಳಿಗೆ ಸೂಕ್ತ ಶಮನಕಾರಿ ಔಷದೋಪಚಾರದ ಮೂಲಕ ಗುಣಮುಖಪಡಿಸುವ ನಿಟ್ಟಿನಲ್ಲಿ ಜಾಗೃತಿಯಿಂದ ನಿಭಾಯಿಸ ಬೇಕು ಎಂದು ನುಡಿದರು.
ತಹಶೀಲ್ದಾರ ಡಿ.ಜೆ ಮಹಾತ ಮಾತನಾಡಿ, ಪ್ರಾಥಮಿಕ ಶಿಕ್ಷಣವು ಭದ್ರ ಬುನಾದಿಯಾಗಿರುತ್ತದೆ. ಉತ್ತಮ ಶಿಕ್ಷಣ ಪ್ರಜ್ಞಾವಂತ ನಾಗರಿಕರನ್ನಾಗಿಸುತ್ತದೆ. ವೈಧ್ಯಕೀಯ ಹಾಗೂ ಇನ್ನಿತರ ವೃತ್ತಿ ಪರ ಕೋರ್ಸುಗಳಿಂದಾಗಿ ಮುಂದಿನ ತಮ್ಮ ಭವಿಷ್ಯವನ್ನು ಗಟ್ಟಿಗೋಳಿಸಿಕೊಳ್ಳ ಬಹುದು. ಸಾರ್ವಜನಿಕ ಜೀವನದಲ್ಲಿ ಉತ್ತಮ ಬದುಕು ಸಾಗಿಸಲು ಮಾನವಿವ ಮೌಲ್ಯಗಳು ಅತ್ಯಂತ ಅವಶ್ಯಕವಾಗಿವೆ. ವಿದ್ಯಾರ್ಥಿ ದಿಸೆಯಿಂದ ಅವುಗಳನ್ನು ಮೈಗೊಡಿಸಿಕೊಂಡಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ ಎಂದು ಕಿವಿ ಮಾತುಗಳನ್ನು ಹೇಳಿದರು.
ಸಿಪಿಐ ವೆಂಕಟೇಶ ಮುರನಾಳ, ಕಸಾಪ ಸರ್ವಾಧ್ಯಕ್ಷ ಪ್ರೋ ಸಂಗಮೇಶ ಗುಜಗೊಂಡ ಮಾತನಾಡಿ, ನಿರಂತರವಾಗಿ ತಮ್ಮನ್ನು ಕಲಿಕೆಯಲ್ಲಿ ಪಾಲ್ಗೊಳ್ಳಿಸಿ, ಭಯ ಮುಕ್ತರಾಗಿ ಪರೀಕ್ಷೆಗಳನ್ನು ಎದುರಿಸಬೇಕು. ಉತ್ತಮ ಮಾರ್ಗದರ್ಶನ ಹಾಗೂ ಪ್ರಯತ್ನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮುಖೇನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವ ಮೂಲಕ ತಮ್ಮಯ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ನುಡಿದರು.
ಪ್ರಾಸ್ತಾವಿಕವಾಗಿ ಬಿಇಒ ಅಜಿತ ಮನ್ನಿಕೇರಿ ಮಾತನಾಡಿ, ಮೂಡಲಗಿ ವಲಯವು ಮಕ್ಕಳ ಹಿತದೃಷ್ಠಿಯಿಂದ ಶಿಕ್ಷಕರ ನಿರಂತರ ಪರಿಶ್ರಮದ ಫಲವಾಗಿ ಸ್ಪಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ತೋರುವಲ್ಲಿ ಸಹಕಾರಿಯಾಗಿದೆ. ವಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಉತ್ತಮವಾಗಿದ್ದು ಉನ್ನತ ವ್ಯಾಸಂಗಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಲು ಸಹಕಾರಿಯಾಗಿದೆ. ಸ್ಥಳೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಶೈಕ್ಷಣಿಕ ಸಹಾಯ ಸಹಕಾರ ಮೆಚ್ಚುವಂತಹದು.
ಕೆ.ಎಮ್.ಎಫ್ ರಾಜ್ಯಾಧ್ಯಕ್ಷರು ಹಾಗೂ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಕಛೇರಿಯಿಂದ ಸಾಧಕ ವೈಧ್ಯಕೀಯ ವಿಧ್ಯಾರ್ಥಿಗಳಿಗೆ ವೈಧ್ಯಕೀಯ ಸ್ಥೆತ್ ಸ್ಕೋಪ್, ಇತರರಿಗೆ ನಗದು ಹಣವನ್ನು ನೀಡಿ ಪ್ರೋತ್ಸಾಹಿಸಿದರು. ಕಸಾಪವತಿಯಿಂದ ಸತ್ಕರಿಸಿ ಅಭಿನಂದನಾ ಪತ್ರ ನೀಡಿದರು. 79 ಪ್ರೌಢ ಶಾಲೆಗಳಿಂದ 300 ವಿದ್ಯಾರ್ಥಿಗಳು ಎನ್.ಟಿ.ಎಸ್.ಇ, 102 ಪ್ರೌಢ ಶಾಲೆಗಳಿಂದ ಎನ್.ಎಮ್.ಎಮ್.ಎಸ್ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಬಾವಿ ತಯಾರಿ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಿಸಿದ್ದರು. ಎನ್.ಟಿ.ಎಸ್.ಇ ಕಾರ್ಯಾಗಾರವು ಮೇಘಾ ವಸತಿಯಲ್ಲಿ, ಎನ್.ಎಮ್.ಎಮ್.ಎಸ್ ಕಾರ್ಯಾಗಾರವು ಈರಣ್ಣ ದೇವಸ್ಥಾನದ ಕೆ.ಎಚ್ ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದವು. ತರಭೇತಿ ಕಾರ್ಯಾಗಾರದಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದ ವಿಶೇಷ ನೂರಿತ ವಿಷಯ ಸಂಪನ್ಮೂಲ ಶಿಕ್ಷಕರು ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಯಶಸ್ವಿಯಾಗಲು ಮಾಡಬೇಕಾದ ಕಾರ್ಯಗಳ ಕುರಿತು ವಿವರಿಸಿದರು.
ಸಮಾರಂಭದಲ್ಲಿ ಮೇಘಾ ಸಂಸ್ಥೆಯ ಸಂಸ್ಥಾಪಕ ಮಲ್ಲಪ್ಪ ಗಾಣಿಗೇರ, ಕಸಾಪ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ, ನಿವೃತ್ತ ಗ್ರಂಥಪಾಲಕ ಬಿ.ಪಿ ಬಂದಿ, ಮುಖ್ಯೋಪಾಧ್ಯಯರಾದ ರಮೇಶ ಅಳಗುಂಡಿ, ಗೀತಾ ಕರಗಣ್ಣಿ, ಸಾಧಿಕ ಬಿದರಿ, ಸುಭಾಸ ವಲ್ಯಾಪೂರ, ಸಂಪನ್ಮೂಲ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Kenchappa Meesi

Check Also

ಅಕ್ಟೋಬರ್ ತಿಂಗಳಾoತ್ಯಕ್ಕೆ ಮೂಡಲಗಿಗೆ ಉಪನೋಂದಾಣಾಧಿಕಾರಿಗಳ ಕಛೇರಿ ಆರಂಭ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the loveಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಪನೋಂದಣಾಧಿಕಾರಿಗಳ ಕಛೇರಿಯು ಬರುವ ಅಕ್ಟೋಬರ್ ತಿಂಗಳ ಅಂತ್ಯದೊಳಗೆ …

5 comments

  1. There’s noticeably a bundle to know about this. I assume you made certain nice factors in options also.

  2. Appreciate it for all your efforts that you have put in this. very interesting info .

  3. You are my inhalation, I own few web logs and occasionally run out from brand :). “‘Tis the most tender part of love, each other to forgive.” by John Sheffield.

  4. I have read several excellent stuff here. Definitely price bookmarking for revisiting. I surprise how so much effort you put to create the sort of excellent informative website.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!