ಸೋಮವಾರ , ಸೆಪ್ಟೆಂಬರ್ 9 2024
kn
Breaking News

ಕೋವಿಡ್ ಲಸಿಕೆ ವಿತರಿಸಿದ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಭಾರತೀಯ ವಿಜ್ಞಾನಿಗಳ ಕಾರ್ಯಕ್ಕೆ ಇಡೀ ಜಗತ್ತೆ ಭಾರತದತ್ತ ನೋಡುತ್ತಿದೆ

Spread the love

ಮೂಡಲಗಿ: ಕಳೆದೊಂದು ವರ್ಷದಿಂದ ವಿಶ್ವವ್ಯಾಪಿಯಾಗಿ ಕಾಡುತ್ತಿರುವ ಕೊರೋನಾ ವiಹಾಮಾರಿ ನಿರ್ಮೂಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತೀ ದೊಡ್ಡ ಲಸಿಕೀಕರಣ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇಡೀ ವಿಶ್ವವೇ ನಮ್ಮ ವಿಜ್ಞಾನಿಗಳು ತಯಾರಿಸಿರುವ ಕೋವಿಡ್ ಲಸಿಕೆ ಬಗ್ಗೆ ಹೆಮ್ಮೆಪಡುತ್ತಿದೆ, ಕೋವಿಡ್-19ನ್ನು ಯಶಸ್ವಿಯಾಗಿ ನಿಭಾಯಿಸಿರುವ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸೋಮವಾರದಂದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೋವಿಡ್ ಲಸಿಕೆಯಿಂದ ಯಾರೂ ಭಯಭೀತರಾಗಬಾರದು, ಮೊದಲ ಹಂತದಲ್ಲಿ ಕೊರೋನಾ ವಾರಿಯರ್ಸಗಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದರು.

ಕೋವಿಡ್‍ದಿಂದ ಕಳೆದ ಒಂದು ವರ್ಷದಿಂದ ಜನರ ನೆಮ್ಮದಿಯನ್ನು ಹಾಳುಮಾಡಿದೆ, ಜಗತ್ತಿನ ಬಹುತೇಕ ಕಡೆಗಳಲ್ಲಿ ಮಹಾಮಾರಿ ವ್ಯಾಪಿಸಿ ರೌದ್ರಾವತಾರ ಮಾಡಿದೆ, ಸಾಕಷ್ಟು ಜನರನ್ನು ಬಲಿ ಪಡೆದಿರುವ ಕೋವಿಡ್-19 ಹೊಗಲಾಡಿಸಲು ವಿಜ್ಞಾನಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. ಅದರಲ್ಲೂ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಕಡೆಗೂ ಕೋರೋನಾ ಸಂಹಾರಕ್ಕೆ ದೇಶಿ ಸಮರ ಪ್ರಾರಂಭಿಸಿದ್ದು ಲಸೀಕರಣ ತಯಾರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ, ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ವಹಿಸಿದ್ದರಿಂದಲೇ ನಮ್ಮ ದೇಶ ಹಾಗೂ ರಾಜ್ಯಕ್ಕೆ ಹೆಚ್ಚು ಅಪಾಯಕಾರಿ ಘಟನೆಗಳು ಸಂಭವಿಸಿಲ್ಲ, ರಾಜ್ಯದಲ್ಲಿಯೂ ಸಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹ ಕೊರೋನಾ ಹಿಮ್ಮೆಟ್ಟಿಸಲು ಹೆಚ್ಚು ಮುತುವರ್ಜಿ ವಹಿಸಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅದಕ್ಕಾಗಿ ಪ್ರಧಾನಿ ಮೋದಿ ಹಾಗೂ ಸಿ.ಎಂ ಯಡಿಯೂರಪ್ಪ ಅವರಿಗೆ ಅಭಿನಂದಿಸುತ್ತೇನೆ ಎಂದರು.

ದೇವರ ದಯೆಯಿಂದ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಹೆಚ್ಚಿನ ಅಪಾಯ ಬಂದೊದಗಿಲ್ಲ, ಜನರ ಆರೋಗ್ಯ ಸುರಕ್ಷತೆಗಾಗಿ ಕೊರೋನಾ ವಾರಿಯರ್ಸ ಹಗಲಿರುಳು ಶ್ರಮಿಸಿದ್ದಾರೆ. ಕಾರ್ಯ ನಿಮಿತ್ಯವಾಗಿ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರಿಂದ ಕೊರೋನಾ ವ್ಯಾಪ್ತಿ ಹರಡುವಿಕೆ ವೇಗ ಪಡೆದಿದ್ದರಿಂದ ಅಲ್ಲಿಂದಲ್ಲೆ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದೆ. ಅಧಿಕಾರಿಗಳು ಕೂಡಾ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿ ಜನರ ಆರೋಗ್ಯವನ್ನು ಕಾಪಾಡಿದ್ದಾರೆ ಎಂದು ಹೇಳಿದರು.

ಲಸಿಕೆ ಹಾಕಿಸಿಕೊಳ್ಳುವದರಿಂದ ಯಾವುದೇ ಅಡ್ಡ ಪರಿಣಾಮಗಳು ಬೀರುವುದಿಲ್ಲ. ಉತ್ತಮ ಆರೋಗ್ಯಕ್ಕಾಗಿ ಲಸಿಕೆ ಹಾಕಿಸಿಕೊಳ್ಳಿ, ಭಯಭೀತರಾಗಬೇಡಿ ಇದರಲ್ಲಿ ಕೆಲವರು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ, ಅಲ್ಲದೆ ಸರಕಾರವೆ ಸ್ಪಷ್ಟಪಡಿಸಿದೆ, ಜೋತೆಗೆ ಆರೋಗ್ಯ ಇಲಾಖೆಯವರು ಜನರಲ್ಲಿ ಜಾಗೃತಿ ಮೂಡಿಸುವಂತೆ ಅವರು ಕೋರಿದರು.

ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಮೂಡಲಗಿ ತಾಲೂಕಿನಲ್ಲಿ ಕೇವಲ 343 ಜನರಿಗೆ ಸೊಂಕು ತಗಲಿದೆ ಎಲ್ಲರೂ ಆರೋಗ್ಯದಿಂದ ಸುರಕ್ಷಿತವಾಗಿದ್ದಾರೆ, ಶೇ.96ರಷ್ಟು ಜನರು ನಮ್ಮ ಭಾಗದಲ್ಲಿ ಸುರಕ್ಷಿತವಾಗಿದ್ದು, ಇದರಲ್ಲಿ ಕೊರೋನಾ ವಾರಿಯರ್ಸ್ ಅವರ ಕಾರ್ಯಕ್ಕೆ ನಾವೆಲ್ಲರೂ ಸಲ್ಯೂಟ್ ಮಾಡಲೇ ಬೇಕು ಅವರ ಶಿಸ್ತು ಬದ್ಧ ಕೆಲಸದಿಂದ ನಮ್ಮ ಜನರು ಆರೋಗ್ಯದಿಂದ ಚನ್ನಾಗಿ ಇದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಮುಖಂಡ ಎನ್.ಟಿ.ಪಿರೋಜಿ, ತಹಶೀಲ್ದಾರ ಡಿ.ಜಿ.ಮಹಾತ್, ತಾ.ಪಂ ಇಒ ಬಸವರಾಜ ಹೆಗ್ಗನಾಯಿಕ, ನಿವೃತ್ತ ಆರೋಗ್ಯ ಅಧಿಕಾರಿ ಡಾ: ಆರ್.ಎಸ್.ಬೆನಚನಮರಡಿ, ಡಿವಾಯ್‍ಎಸ್‍ಪಿ ಜಾವೇದ ಇನಾಮದಾರ್, ಬಿಇಒ ಅಜೀತ ಮನ್ನಕೇರಿ, ಸಿಪಿಐ ವೆಂಕಟೇಶ ಮುರನ್ನಾಳ, ಟಿ.ಎಚ್.ಒ ಡಾ: ಎಮ್.ಎಸ್.ಕೊಪ್ಪದ, ಗೋಕಾಕ ಸರಕಾರಿ ಆಸ್ಪತ್ರೆಯ ಮುಖ್ಯವೈಧ್ಯಾಧಿಕಾರಿ ರವೀಂದ್ರ ಅಂಟಿನ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ: ಭಾರತಿ ಕೋಣ , ಮುಖ್ಯಾಧಿಕಾರಿ ದೀಪಕ ಹರ್ದಿ ಸೇರಿದಂತೆ ಹಲವು ಗಣ್ಯರು ಇದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page