ಸೋಮವಾರ , ಸೆಪ್ಟೆಂಬರ್ 9 2024
kn
Breaking News

ಮರು ವಿಂಗಡಣೆ ಮಾಡಿದ ಜಿ ಪಂ ಕ್ಷೇತ್ರ ದೋಷಪೂರಿತವಾಗಿದೆ

Spread the love

ಮೂಡಲಗಿ: ‘ತಾಲೂಕಿನಲ್ಲಿ ಮರು ವಿಂಗಡಣೆ ಮಾಡಿದ ಜಿಲ್ಲಾ ಪಂಚಾಯತ ಕ್ಷೇತ್ರಗಳು ದೋಷಪೂರಿತವಾಗಿದ್ದು ಇವುಗಳನ್ನು ರದ್ದುಪಡಿಸಿ ಸರಿಪಡಿಸುವಂತೆ ಕಾಂಗ್ರೇಸ ಮುಖಂಡ ಗುರು ಗಂಗನ್ನವರ ಒತ್ತಾಯಿಸಿದರು.
ಭಾನುವಾರ ಪ್ರೆಸ್‍ಕ್ಲಬ್ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಮೂಡಲಗಿ ತಾಲೂಕಿನ ಜಿ.ಪಂ ಕ್ಷೇತ್ರಗಳು ದೋಷಪೂರಿತವಾಗಿವೆ. ಸಾರ್ವಜನಿಕರಿಗೆ ಜನಪ್ರತಿನಿಧಿ ಆಯ್ಕೆ ಮಾಡುವದರಿಂದ ಹಿಡಿದು ಕೆಲಸ ಕಾರ್ಯಗಳಿಗೆ ತೊಂದರೆ ಅನುಭವಿಸುವಂತಾಗುವದು. ರಾಜಕೀಯವಾಗಿ ಪ್ರಾತಿನಿಧ್ಯ, ಕ್ಷೇತ್ರದ ದೂರಳತೆ, ಸಂಪರ್ಕ ಸಾಧನ, ತ್ವರಿತಗತಿಯ ಕಾಮಗಾರಿಗಳ ಪ್ರಗತಿ ಅಸಾಧ್ಯವಾದದ್ದು. ಕೂಡಲೇ ದೋಷಗಳನ್ನು ಸರಿ ಪಡಿಸಿ ಕ್ಷೇತ್ರದ ಜನತೆಗೆ ಅನುಕೂಲ ಮಾಡಿಕೋಡಬೇಕು. ಆದಷ್ಟು ಬೇಗ ಗೊಂದಲ ಬಗೆಹರಿಯದಿದ್ದರೆ ಹೋರಾಟದ ಹಾದಿ ಅನಿವಾರ್ಯ ಎಂದು ಆಗ್ರಹಿಸಿದರು.
ಕಾಂಗ್ರೇಸ್ ಕಾರ್ಮಿಕ ಮುಖಂಡ ಲಕ್ಕಣ್ಣ ಸವಸುದ್ದಿ ಮಾತನಾಡಿ, ಮೊದಲು ವಡೇರಹಟ್ಟಿ ಜಿ.ಪಂ ಕ್ಷೇತ್ರ ರದ್ದುಗೋಳಿಸಿ ತುಕ್ಕಾನಟ್ಟಿ ಕ್ಷೇತ್ರ ಸೇರಿಸಲಾಗಿದೆ. ಮಸಗುಪ್ಪಿ, ಗುಜನಟ್ಟಿ, ಧರ್ಮಟ್ಟಿ ಹಾಗೂ ಜೊಕಾನಟ್ಟಿ ಗ್ರಾಮಗಳನ್ನು ದೂರದ ಕುಲಿಗೋಡ ಸೇರಿಸಿದ್ದು, ಜೊಕಾನಟ್ಟಿ ಯಿಂದ ಕುಲಗೋಡ, ವಡೇರಹಟ್ಟಿ ಯಿಂದ ತುಕ್ಕಾನಟ್ಟಿಗೆ ಸೇರಿಸುವದು ಎತ್ತನದೆತ್ತ ಕ್ಷೇತ್ರ ವಿಂಗಡನೆ ಅಸ್ಪಷ್ಟ ಭೌಗೋಳಿಕವಾಗಿ ದೂರವಿರುವ ಕ್ಷೇತ್ರ ವಿಂಗಡನೆ ಅವೈಜ್ಞಾನಿಕವಾಗಿದೆ ಎಂದು ದೂರಿದರು. ಕ್ಷೇತ್ರದ ಸಾರ್ವಜನಿಕರಿಗೆ ತೊಂದರೆಯಾಗದ ನಿಟ್ಟಿನಲ್ಲಿ ಮರು ವಿಂಗಡನೆಗೊಳಿಸಿ ಅನುಕೂಲ ಮಾಡಿಕೊಡಬೇಕು. ಕ್ಷೇತ್ರ ವಿಂಗಡನೆ ರದ್ದಾಗಬೇಕು ಇಲ್ಲದಿದ್ದರೆ ನ್ಯಾಯಾಲಯದ ಮೊರೆಹೋಗುವದು ಅನಿವಾರ್ಯವಾಗುವದು. ಸ್ಥಳೀಯವಾಗಿ ತಮ್ಮ ಹಿಂಬಾಲಕರಿಗೆ ಅನುಕೂಲವಾಗುವಂತೆ ತಮಗೆ ಬೇಕಾದ ರೀತಿಯಲ್ಲಿ ವಿಂಗಡಿಸಿದ್ದು ಕೂಡಲೇ ಸರಿ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸರಿಪಡಿಸುವಂತೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಭಾಸ ಲೋಕನ್ನವರ, ಶಿವಾನಂದ ಮಡಿವಾಳರ ಹಾಗೂ ಮತ್ತಿತರ ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page