ಸೋಮವಾರ , ಸೆಪ್ಟೆಂಬರ್ 9 2024
kn
Breaking News

ಡಾ. ಅಂಬೇಡ್ಕರ ತತ್ವ, ಸಿದ್ಧಾಂತಗಳನ್ನು ಅರಿಯಬೇಕು: ಡಾ. ಮಹದೇವ ಪೋತರಾಜ

Spread the love

ಮೂಡಲಗಿ: ‘ಭಾರತದಲ್ಲಿ ಸಮಾನತೆ ಮತ್ತು ಅಸ್ಪøಶ್ಯತೆಯನ್ನು ಹೋಗಲಾಡಿಸಿದ ಮಹಾನ್ ನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ್’ ಎಂದು ಡಾ. ಮಹಾದೇವ ಪೋತರಾಜ ಹೇಳಿದರು.
ಇಲ್ಲಿಯ ಮಾನವ ಬಂಧುತ್ವ ವೇದಿಕೆ, ಯುವ ಜೀವನ ಸೇವಾ ಸಂಸ್ಥೆ, ಕರುನಾಡು ಸೈನಿಕ ತರಬೇತಿ ಕೇಂದ್ರ ಹಾಗೂ ಜೈ ಭೀಮ ಯುವಕರ ಸಂಘ ಇವರ ಸಂಯಕ್ತ ಆಶ್ರಯದಲ್ಲಿ ಸ್ಥಳೀಯ ರುದ್ರಭೂಮಿಯಲ್ಲಿ ಆಚರಿಸಿದ ಡಾ. ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ, ಮೌಢ್ಯ ವಿರೋದಿ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ಸಂಘಟಕರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಮಹಾನ್ ಮೇದಾವಿಯಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕಾದರೆ, ಅವರ ತತ್ವ, ಸಿದ್ದಾಂತಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಡಾ.ಅಂಬೇಡ್ಕರ್ ಅವರು ಸಾರಿದ ಸಿದ್ಧಾಂತ, ಸಂವಿಧಾನ ಆಶಯಗಳಿಂದ ಸೂರ್ಯ ಚಂದ್ರರಂತೆ ಅವರ ಹೆಸರು ಅಜರಾಮರವಾಗಿದೆ ಎಂದರು.
ಜಿಲ್ಲಾ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸತ್ಯಪ್ಪ ಕರವಾಡಿ ಮಾತನಾಡಿ ಸಮಾಜದ ಸುಧಾರಣೆ ಮತ್ತು ಮೌಢ್ಯತೆ ದೂರವಾಗಬೇಕಾದರೆ ಶಿಕ್ಷಣ ಅವಶ್ಯವಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಹ ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯಬೇಕೆಂದು ಪ್ರತಿಪಾದಿಸಿದ್ದರು ಎಂದರು.
ಮೌಢ್ಯ, ಕಂದಾಚಾರಗಳನ್ನು ದೂರವಿಟ್ಟು ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಡಾ. ಅಂಬೇಡ್ಕರ್ ಅವರ ಸಮಾನತೆಯ ಕನಸು ನನಸಾಗಬೇಕಾದರೆ ಅಂತರಂಗದ ಮಲೀನತೆಯಿಂದ ಹೊರಬರಬೇಕು ಎಂದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಮೇಶ ಮಾದರ ಮಾತನಾಡಿ ಸಮಾಜದಲ್ಲಿ ಸಮಾನತೆಗಾಗಿ ಡಾ. ಅಂಬೇಡ್ಕ್ ಅವರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದಾರೆ. ಮಾನವೀಯತೆಗೆ ಇನ್ನೊಂದು ಹೆಸರು ಡಾ. ಅಂಬೇಡ್ಕರರಾಗಿದ್ದಾರೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಪುರಸಭೆ ಮಾಜಿ ಅಧ್ಯಕ್ಷ ರವೀಂದ್ರ ಸಣ್ಣಕ್ಕಿ ಸಸಿಗೆ ನೀರೂಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರುದ್ರಭೂಮಿ ಹಾಗೂ ಪಟ್ಟಣದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುತ್ತಿರುವ ಯುವ ಜೀವನ ಸೇವಾ ಸಂಸ್ಥೆ ಅಧ್ಯಕ್ಷ ಈರಪ್ಪ ಢವಳೇಶ್ವರ ಅವರಿಗೆ ಜೈ ಭೀಮ ಯುವಕ ಸಂಘದಿಂದ ‘ಪರಿಸರ ಪೋಷಕ’ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್‍ಗೆ ಉಪಾಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿರುವ ಸುಭಾಷ ಜಿ. ಢವಳೇಶ್ವರ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಮಾಡಿರುವ ಡಾ. ಮಹಾದೇವ ಪೋತರಾಜ, ಸೇವಾ ನಿವೃತ್ತರಾಗಿರುವ ಬಾಲಶೇಖರ ಬಂದಿ, ಪುರಸಭೆ ಸದಸ್ಯ ಆರ್.ಡಿ. ಸಣ್ಣಕ್ಕಿ, ನಿವೃತ್ತ ಸೈನಿಕ ಶಂಕರ ತುಕ್ಕನ್ನವರ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಎನ್.ಟಿ. ಪಿರೋಜಿ, ಶ್ರೀಶೈಲ್ ಬಳಿಗಾರ, ಸಚಿನ ಸೋನವಾಲಕರ, ಪಿಎಸ್‍ಐ ಕಿರಣ ಮೋಹಿತೆ, ಸಿದ್ದು ಗಡ್ಡೇಕಾರ, ಆನಂದ ಟಪಾಲದಾರ, ಮರೆಪ್ಪ ಮರೆಪ್ಪಗೋಳ, ಪ್ರಭಾಕರ ಬಂಗೆನ್ನವರ, ಮನೋಹರ ಸಣ್ಣಕ್ಕಿ, ಯಶ್ವಂತ ಮೂಡಲಗಿ, ಅಶೋಕ ಶಿದ್ಲಿಂಗಪ್ಪಗೋಳ,
ಎಡ್ವಿನ್ ಪರಸನ್ನವರ ಸ್ವಾಗತಿಸಿದರು, ಗುರು ಗಂಗಣ್ಣವರ ನಿರೂಪಿಸಿದರು, ರಮೇಶ ಉಪ್ಪಾರ ವಂದಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page