ಶನಿವಾರ , ಜುಲೈ 20 2024
kn
Breaking News

ಗುಣಮಟ್ಟದ ಹಾಗೂ ಗುಣಾತ್ಮಕ ಕಲಿಕೆಯಾಗುವಲ್ಲಿ ಮೇಲುಸ್ತುವಾರಿಗಳ, ಮಾರ್ಗದರ್ಶಕರ ಹಾಗೂ ಕಛೇರಿಯ ಸಿಬ್ಬಂದಿಗಳ ಪಾತ್ರ ಬಹುಮುಖ್ಯವಾಗಿದೆ : ಬಿಇಒ ಮನ್ನಿಕೇರಿ

Spread the love

ಮೂಡಲಗಿ: ಶಿಕ್ಷಣ ಇಲಾಖೆಯ ಮಾರ್ಗಸೂಚಿಯನುಸಾರ ಶೈಕ್ಷಣಿಕವಾಗಿ ಗುಣಮಟ್ಟದ ಹಾಗೂ ಗುಣಾತ್ಮಕ ಕಲಿಕೆಯಾಗುವಲ್ಲಿ ಮೇಲುಸ್ತುವಾರಿಗಳ, ಮಾರ್ಗದರ್ಶಕರ ಹಾಗೂ ಕಛೇರಿಯ ಸಿಬ್ಬಂದಿಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಬಿಇಒ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಸ್ವಾಗತ ಹಾಗೂ ಬೀಳ್ಕೋಡುವ ಸಮಾರಂಭದಲ್ಲಿ ಮಾತನಾಡಿದರು. ಇಲಾಖೆಯಿಂದ ದೊರಕಿರುವ ಈ ಅವಕಾಶಗಳನ್ನು ಉಪಯೋಗಿಸಿಕೊಂಡು ಶಿಕ್ಷಣ ಇಲಾಖೆಗೆ ಅವಶ್ಯಕವಿರುವ ಕಾರ್ಯಚಟುವಟಿಕೆಗಳನ್ನು ಯಶಸ್ವಿಗೋಳಿಸಬೇಕು. ಶಿಕ್ಷಕರ ಬೇಕು ಬೇಡಿಕೆಗಳಿಗೆ ಸ್ಪಂಧನೆ ನೀಡಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಅವುಗಳ ಸಮರ್ಪಕ ಬಳಕೆ ಹಾಗೂ ಅನುಷ್ಠಾನಗೋಳಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಶಿಕ್ಷಣ ಸ್ನೇಹಿ ಕಾರ್ಯಗಳನ್ನು ಕೈಗೋಳ್ಳುವ ಮೂಲಕ ಶಿಕ್ಷಣ ಇಲಾಖೆಯ ಆಶಯಗಳನ್ನು ಸಕಾರಗೋಳಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಶಿಕ್ಷಕ ಸಂಘಟನೆಯ ಆರ್.ಎಮ್ ಮಹಾಲಿಂಗಪೂರ, ಎಮ್.ವಾಯ್ ಸಣ್ಣಕ್ಕಿ, ಎಮ್.ಜಿ ಮಾವಿನಗಿಡದ ಮಾತನಾಡಿ, ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ, ಕ್ಷೇತ್ರ ಸಮನ್ವಯಾಧಿಕಾರಿ ಮಾರ್ಗದರ್ಶಕ ಹುದ್ದೆಗಳಾಗಿದ್ದು, ಅಧಿಕ್ಷಕ ಹುದ್ದೆಯು ಶಿಕ್ಷಕರ, ಸಾರ್ವಜನಿಕರ ಮತ್ತು ಇಲಾಖೆಯ ಕರ್ತವ್ಯ ನಿರ್ವಹಿಸುವದಾಗಿದೆ. ಶಿಕ್ಷಕರಿಗೆ ದೊರೆಯುವ ಸೇವಾ ಸೌಲಭ್ಯಗಳು ಹಾಗೂ ಅವರ ಕುಂದು ಕೊರತೆಗಳನ್ನು ಸೂಕ್ತ ಸಮಯದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಮೇಲಾಧಿಕಾರಿಗಳ ಸೂಚನೆಯನುಸಾರ ಶಿಕ್ಷಕರಿಂದ ಸೂಕ್ತ ಸ್ಪಂದನೆ ದೊರೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ನೂತನವಾಗಿ ಆಗಮಿಸಿದ ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಆಣಿ, ಅಧೀಕ್ಷಕ ವೆಂಕಣ್ಣ ಜೋಶಿ, ಶಿಕ್ಷಣ ಸಂಯೋಜಕ(ಪ್ರಾಥಮಿಕ) ಆರ್ ವಿ ಯರಗಟ್ಟಿ, ಬಿ.ಆರ್.ಸಿಯಿಂದ ನಿರ್ಗಮಿತ ಬಿ.ಎಚ್ ಮೋರೆಯವರನ್ನು ಸನ್ಮಾನಿಸಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಾಂಕಿತ ವ್ಯವಸ್ಥಾಪಕ ಪಿ.ಎಚ್ ಒಂಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಎಲ್.ಎಮ್ ಬಡಕಲ, ಕಾರ್ಯದರ್ಶಿ ಎ.ಪಿ ಪರಸನ್ನವರ, ಎಸ್.ಎ ಕುರಣಗಿ, ಶಂಕರ ಗುಡಗುಡಿ, ಬಿ.ಆರ್.ಪಿ ಜಿ.ಆರ್ ಪತ್ತಾರ, ಸಿ.ಆರ್.ಪಿ ಎಸ್.ವಾಯ್ ದ್ಯಾಗಾನಟ್ಟಿ, ಎಸ್.ಎಸ್ ಪಾಟೀಲ, ರವೀಂದ್ರ ತಳವಾರ, ಚೇತನ ಕುರಿಹುಲಿ, ಎಸ್.ಎಮ್ ದಬಾಡಿ, ಎಸ್.ಎಲ್ ಪಾಟೀಲ ಹಾಗೂ ಕಛೇರಿ ಸಿಬ್ಬಂದಿ ಹಾಜರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page