ಮೂಡಲಗಿ : ವಕೀಲ ವೃತ್ತಿಯನ್ನು ಅತ್ಯಂತ ಘನತೆವೆತ್ತ ವೃತ್ತಿ ಎಂದು ಪರಿಗಣಿಸಲಾಗಿದೆ ಏಂಕೆದರೆ ಈ ವೃತ್ತಿಯೊಂದು ಅನ್ಯಾಯವನ್ನು ತೊಲಗಿಸಿ ನ್ಯಾಯವನ್ನು ಪ್ರತಿಷ್ಠಾಪಿಸುವ ಮೂಲಗುರಿ ಹೊಂದಿದೆ ಎಂದು ನ್ಯಾಯಾಧಿಶರಾದ ಸುರೇಶ ಎಸ್.ಎನ್. ಹೇಳಿದರು.
ಅವರು ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದಲ್ಲಿ ಆಯೋಜಿಸಿದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿ ವಕೀಲರ ಮೇಲೆ ಸಮಾಜದಲ್ಲಿ ಗುರುತರ ಹೊಣೆಗಾರಿಕೆ ಇದೆ. ಈ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಲು ವಕೀಲರು ಕಾನೂನು ವಿಷಯಗಳಲ್ಲಿ ಪ್ರಾವಿಣ್ಯತೆ ಹೊಂದಿದರೆ ಸಾಲದು, ಅವರುಗಳು ವಕೀಲ ವೃತ್ತೀಯ ನೈಪುಣ್ಯತೆಯನ್ನು ಹೊಂದಿರುವುದು ಅವಶ್ಯವಾಗಿದೆ ಎಂದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕೆ.ಪಿ.ಮಗದುಮ್ ಮಾತನಾಡಿ, ವಕೀಲರು ಸಮಾಜದಲ್ಲಿ ಸುವ್ಯವಸ್ಥೆಯನ್ನು ಸ್ಥಾಪನೆ ಆಗಲು ಕಾರಣೀಭೂತರಾದಂತೆಯೆ ಕಾನೂನು ಸುಧಾರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಪ್ರತಿದಿನ ಕಾನೂನಿನ ಬಳಕೆ ಮತ್ತು ವ್ಯಾಖ್ಯಾನದಲ್ಲಿ ಸಕ್ರೀಯ ಪಾತ್ರ ವಹಿಸುವ ವಕೀಲರು ಕಾನೂನು ಸುಧಾರಣೆ ಕಾರ್ಯಕ್ಕೆ ಅತ್ಯಂತ ಸೂಕ್ತ ವ್ಯಕ್ತಿಗಳಾಗಿದ್ದಾರೆ ಎಂದರು.
ಹಿರಿಯ ನ್ಯಾಯವಾದಿ ಯು.ಆರ್.ಜೋಕಿ ಮತ್ತು ಕೆ.ಎಲ್.ಹುಣಸ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲರ ದಿಣಾಚರಣೆಯ ನಿಮಿತ್ಯವಾಗಿ ಚೆಸ್ ಸ್ಫರ್ಧೆ, ಕೇರಮ್ ಸ್ಫರ್ಧೆ ಮತ್ತು ಮ್ಯೂಜಿಕಲ್ ಚೇರ್ ಸ್ಫರ್ಧೆ ಹಮ್ಮಿಕೊಂಡಿದ್ದರು. ವಿಜೇತ ವಕೀಲರಿಗೆ ಬಹುಮಾನ ವಿತರಣೆ ಮಾಡಿದರು.
ಹಿರಿಯ ನ್ಯಾಯವಾದಿ ಎಸ್.ಕೆ.ಬಾಲನಾಯಕ ಅವರಿಗೆ ಸತ್ಕರಿಸಿದರು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಉಪಾದ್ಯಕ್ಷ ಎಸ್.ವಾಯ್.ಹೊಸಟ್ಟಿ, ಪ್ರಧಾನ ಕಾರ್ಯದರ್ಶಿ ಎಲ್.ವಾಯ್.ಅಡಿಹುಡಿ, ಸಹಕಾರ್ಯದರ್ಶಿ ಡಿ.ಎಸ್.ರೊಡ್ಡನವರ, ಬಿ.ಎಸ್.ಮಳ್ಳಿವಡೇರ, ಖಜಾಂಚಿ ವಿ.ಕೆ.ಪಾಟೀಲ ಸ್ಫರ್ಧೆಯ ನಿರ್ನಾಯಕರು ಎಲ್.ಬಿ. ವಡೆಯರ, ಆರ್.ಆರ್.ಭಾಗೋಜಿ, ಮತ್ತು ಹಿರಿಯ ನ್ಯಾಯವಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
