ಶುಕ್ರವಾರ , ನವೆಂಬರ್ 22 2024
kn
Breaking News

ಮಹಿಳಾ ಸಂಘಗಳ ಆದಾಯ ಉತ್ಪನ್ನ ಚಟುವಟಿಕೆಗಳನ್ನು ನಡೆಸಿ ಅವರ ಸ್ವಾವಲಂಬಿ ಬದುಕನ್ನು ಉತ್ತೇಜಿಸಿ: ಜಾರಕಿಹೊಳಿ

Spread the love

ಮೂಡಲಗಿ: ಮಹಿಳಾ ಸಂಘಗಳ ಆದಾಯ ಉತ್ಪನ್ನ ಚಟುವಟಿಕೆಗಳನ್ನು ನಡೆಸಿ ಅವರ ಸ್ವಾವಲಂಬಿ ಬದುಕನ್ನು ಉತ್ತೇಜಿಸಿ, ಸ್ವ-ಸಹಾಯ ಸಂಘಗಳನ್ನು ಕಿರು ಉದ್ಯಮಿಗಳನ್ನಾಗಿಸುವ ಅಮೃತ ಯೋಜನೆ ಅಡಿ ೪೫ ಸಂಘಗಳಿಗೆ ತಲಾ ಒಂದು ಲಕ್ಷ ರೂ ಗಳಂತೆ ಸಹಾಯ ಧನವನ್ನು ನೀಡಲಾಗುತ್ತಿದ್ದು, ಈ ಸಹಾಯ ಧನವನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕ ಮಟ್ಟವನ್ನು ದ್ವಿಗುಣಗೊಳಿಸುವಂತೆ ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮಹಿಳಾ ಸಂಘಗಳಿಗೆ ಕರೆ ನೀಡಿದರು.

ಬುಧವಾರದಂದು ಪಟ್ಟಣದ ಗುಡ್ಲಮಡ್ಡಿ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಅರಭಾವಿ ಶಿಶು ಅಭಿವೃದ್ಧಿ ಇಲಾಖೆಯು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ನಿಮಿತ್ಯ ಆಯೋಜಿಸಿದ್ದ ಅರಭಾವಿ ಮಹಿಳಾ ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳಿಗೆ ಒಟ್ಟು ೪೫ ಲಕ್ಷ ರೂಗಳ ಸಹಾಯ ಧನದ ಚೆಕ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಸರಕಾರದಿಂದ ಪಡೆದುಕೊಂಡ ಸಹಾಯ ಧನವನ್ನು ವಿವಿಧ ಕಿರು ಉದ್ದಿಮೆಗಳನ್ನು ಆರಂಭಿಸಿ ಲಾಭಾಂಶವನ್ನು ದುಪ್ಪಟ್ಟುಗೊಳಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಹಿಳಾ ಸಮುದಾಯಕ್ಕೆ ಕರೆ ನೀಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಹಲವು ಮಹತ್ತರ ಕಾರ್ಯಕ್ರಮಗಳನ್ನು ಸರಕಾರ ಘೋಷಣೆ ಮಾಡಿದೆ, ಅದರಲ್ಲಿ ಅಮೃತ್ ಸ್ವ-ಸಹಾಯ ಕಿರು ಉದ್ದಿಮೆಗಳು ಸಹ ಒಂದಾಗಿದೆ, ಸ್ವ-ಸಹಾಯ ಗುಂಪುಗಳನ್ನು ಕಿರು ಉದ್ದಿಮೆ ಸಂಸ್ಥೆಗಳನ್ನಾಗಿ ರೂಪಿಸಲು ತಲಾ ಒಂದು ಲಕ್ಷ ರೂಗಳಂತೆ ಬೀಜ ಧನವನ್ನು ವಿತರಿಸಲಾಗಿದೆ ಎಂದು ಹೇಳಿದರು.
ಅರಭಾವಿ ಕ್ಷೇತ್ರದ ಪ್ರತಿ ಸ್ವ-ಸಹಾಯ ಗುಂಪುಗಳಿಗೆ ಸಹಾಯ ಧನ ನೀಡಬೇಕೆನ್ನುವುದು ತಮ್ಮ ಆಶಯವಾಗಿದೆ. ಈಗಾಗಲೇ ೪೫ ಸ್ವ-ಸಹಾಯ ಗುಂಪುಗಳನ್ನು ಅಮೃತ್ ಯೋಜನೆಗೆ ಆಯ್ಕೆ ಮಾಡಲಾಗಿದ್ದು. ಇವುಗಳಿಗೆ ೪೫ ಲಕ್ಷ ರೂಗಳ ಸಹಾಯ ಧನವನ್ನು ನೀಡಲಾಗುತ್ತಿದೆ. ಬಾಕಿ ಉಳಿದಿರುವ ಸ್ವ-ಸಹಾಯ ಗುಂಪುಗಳಿಗೆ ಬರುವ ದಿನಗಳಲ್ಲಿ ಯಾವುದಾದರೂ ಯೋಜನೆ ಅಡಿ ಸಹಾಯ ಧನ ವಿತರಿಸುವ ಆಲೋಚನೆ ಮಾಡಿರುವದಾಗಿ ಎಂದ ಅವರು, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿ ಮಹಿಳೆಯರ ಸರ್ವಾಂಗಿಣ ವಿಕಾಸಕ್ಕೆ ಶ್ರಮಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪ್ರಭಾ ಶುಗರ್ ನಿರ್ದೇಶಕ ಕೆಂಚಗೌಡ ಪಾಟೀಲ, ಪುರಸಭೆ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಸೋನವಾಲ್ಕರ, ಸಂತೋಷ ಸೋನವಾಲ್ಕರ, ತಹಶೀಲ್ದಾರ ಡಿ.ಜಿ.ಮಹಾತ್, ಅರಭಾವಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಲ್ಲಪ್ಪ ಗದಾಡಿ, ತಾ.ಪಂ ಇ.ಓ ಎಫ್.ಎಸ್.ಚಿನ್ನನವರ, ಬಿ.ಇ.ಓ ಅಜಿತ ಮನ್ನಿಕೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಕಿರು ಉದ್ದಿಮೆಗಳನ್ನು ಉತ್ತೇಜಿಸುವ ೪೫ ಮಹಿಳಾ ಸಂಘಗಳಿಗೆ ತಲಾ ಒಂದು ಲಕ್ಷ ರೂ ಗಳ ಬೀಜ ಧನವನ್ನು ವಿತರಿಸಿದರು.
ಮಹಿಳಾ ಸಂಘಗಳ ಒಕ್ಕೂಟದಿಂದ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಅರಭಾವಿ ಕ್ಷೇತ್ರದ ಸ್ರೀ ಶಕ್ತಿ ಗುಂಪುಗಳ ನೂರಾರು ಸದಸ್ಯರು, ಅಂಗನವಾಡಿ ಮೇಲ್ವಿಚಾರಕಿಯರು ಮತ್ತಿತರರು ಪಾಲ್ಗೊಂಡಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page