ಬುಧವಾರ , ಮೇ 22 2024
kn
Breaking News

ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಹೃದಯವಂತ ಶಾಸಕರು : ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ

Spread the love

ಮೂಡಲಗಿ : ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಹುಣಶ್ಯಾಳ ಪಿವಾಯ್‍ದಿಂದ ಬೀಸನಕೊಪ್ಪವರೆಗಿನ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಹುಣಶ್ಯಾಳ ಪಿವಾಯ್ ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ ತಿಳಿಸಿದರು.
ಶುಕ್ರವಾರದಂದು ತಾಲೂಕಿನ ಹುಣಶ್ಯಾಳ ಪಿವಾಯ್ ಗ್ರಾಮದಲ್ಲಿ ಜರುಗಿದ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 4 ಕೋಟಿ ರೂ. ಮೊತ್ತದ ಹುಣಶ್ಯಾಳ ಪಿವಾಯ್-ಬೀಸನಕೊಪ್ಪ ರಸ್ತೆ ಸುಧಾರಣೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹದಗೆಟ್ಟಿದ್ದ ರಸ್ತೆ ಕಾಮಗಾರಿಗೆ ಅನುದಾನ ತಂದಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಎರಡೂ ಗ್ರಾಮಗಳ ಗ್ರಾಮಸ್ಥರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು.
ರೈತಸ್ನೇಹಿ, ಎಲ್ಲ ಸಮಾಜಗಳ ಆಶಾ ಕಿರಣರಾಗಿ ಬಡ ಜನತೆಯ ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುತ್ತಾ ಕಳೆದ ಎರಡು ದಶಕದಿಂದ ಅರಭಾವಿ ಮತಕ್ಷೇತ್ರದ ಜನಸೇವೆ ಮಾಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಾಮಾಜಿಕ ಕಳಕಳಿಯನ್ನು ಎಷ್ಟು ಕೊಂಡಾಡಿದರೂ ಸಾಲದು. ಒಬ್ಬ ಜನಪ್ರತಿನಿಧಿ ಹೇಗಿರಬೇಕೆಂಬುದನ್ನು ಬಾಲಚಂದ್ರ ಜಾರಕಿಹೊಳಿ ಅವರು ಅಕ್ಷರಶಃ ಪಾಲಿಸಿಕೊಂಡು ಇಡೀ ಕ್ಷೇತ್ರದ ಅಭ್ಯುದಯ ಮತ್ತು ಎಲ್ಲ ಸಮಾಜಗಳ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಹೃದಯವಂತ ಹಾಗೂ ಕರುಣಾಮಯಿ ಶಾಸಕರನ್ನು ಪಡೆದಿರುವುದು ನಾವೆಲ್ಲರೂ ಪುಣ್ಯವಂತರು ಎಂದು ಗಿರಡ್ಡಿ ಶಾಸಕರ ಕಾಳಜಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಹುಣಶ್ಯಾಳ ಪಿವಾಯ್ ಗ್ರಾಪಂ ಅಧ್ಯಕ್ಷೆ ದೀಪಾ ದೊಡಮನಿ ಮತ್ತು ಉಪಾಧ್ಯಕ್ಷ ಜಗದೀಶ ಡೊಳ್ಳಿ ಅವರು ಹುಣಶ್ಯಾಳ ಪಿವಾಯ್-ಬೀಸನಕೊಪ್ಪ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗೋಪಾಲ ಬಿಳ್ಳೂರ, ಪ್ರಕಾಶ ಪಾಟೀಲ, ರವಿ ದೇಶಪಾಂಡೆ, ಹನಮಂತ ರಡ್ಡೇರಟ್ಟಿ, ಪ್ರಕಾಶ ದರೂರ, ದುಂಡಪ್ಪ ಕಲ್ಲಾರ, ಬಸು ಬಿಳ್ಳೂರ, ಹನಮಂತ ಬಿಳ್ಳೂರ, ಬಸವರಾಜ ತುಂಗಳ, ಜಂಬು ಚಿಕ್ಕೋಡಿ, ಮಲ್ಲಿಕಾರ್ಜುನ ಹಿರೇಮಠ, ಬಸು ಖಿಲಾರಿ, ಶ್ರೀಕಾಂತ ಭಜಂತ್ರಿ, ಮಂಜುನಾಥ ಉತ್ತೂರ, ಸದಾಶಿವ ನಾಯ್ಕ, ಶಿವಾನಂದ ಹಿರೇಮಠ, ಮಲ್ಲಪ್ಪ ಕಬ್ಬೂರ, ಶಂಕರ ಕೊಪ್ಪದ, ಮಾರುತಿ ಮೇತ್ರಿ, ಚನ್ನಪ್ಪ ಚೌಗಲಾ, ಸಿದ್ದಪ್ಪ ಡೊಂಬರ, ಮಲ್ಲಪ್ಪ ನಾಯ್ಕ, ಪರಪ್ಪ ಕುಂಬಾರ, ಮಲ್ಲಪ್ಪ ಬಟಕುರ್ಕಿ, ಯಮನಪ್ಪ ರಡ್ಡೇರಟ್ಟಿ, ತಿಪ್ಪಣ್ಣ ದಡ್ಡಗೋಳ, ಗುತ್ತಿಗೆದಾರ ಮಂಜುನಾಥ ಗಂಗರಡ್ಡಿ ಮುಂತಾದವರು ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page