ಭಾನುವಾರ , ಜೂನ್ 16 2024
kn
Breaking News

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಪದಗ್ರಹಣ ಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ : ಮಠಪತಿ

Spread the love

ಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯು ನಿಜವಾದ ಸಮಾಜ ಸೇವೆಯಾಗುತ್ತದೆ’ ಎಂದು ಹಾರೂಗೇರಿಯ ಶರಣ ವಿಚಾರ ವಾಹಿನಿ ಅಧ್ಯಕ್ಷ ಶರಣ ಐ.ಆರ್. ಮಠಪತಿ ಹೇಳಿದರು.
ಇಲ್ಲಿಯ ಕೆ.ಎಚ್. ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ೨೦೨೨-೨೩ನೇ ಸಾಲಿನ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಸಮಾಜ ಸೇವೆಗೆ ನಿತ್ಯ ಸಾಕಷ್ಟು ಅವಕಾಶಗಳಿದ್ದು, ಪ್ರತಿಯೊಬ್ಬರಲ್ಲಿ ಸಮಾಜ ಸೇವೆ ಮಾಡುವ ಇಚ್ಛಾಶಕ್ತಿ ಇರಬೇಕು ಎಂದರು.
ಮೂಡಲಗಿ ಲಯನ್ಸ್ ಕ್ಲಬ್‌ದವರು ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಬಾಗಲಕೋಟದ ಡಾ. ವಿಕಾಸ ದಡ್ಡೆನ್ನವರ ಪದಗ್ರಹಣವನ್ನು ನೆರವೇರಿಸಿ ಮಾತನಾಡಿದ ಅವರು ಜೀವನದಲ್ಲಿ ಕೇವಲ ಹಣ ಗಳಿಕೆ, ಅಧಿಕಾರ ಮುಖ್ಯವಲ್ಲ. ಸಮಾಜದಲ್ಲಿ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಮೂಲಕ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.
ಅಹಂಕಾರದಿoದ ಮುಕ್ತರಾಗಿ ಸಮಾಜದ ಒಳಿತಿಗಾಗಿ ನಮ್ಮನ್ನು ಅರ್ಪಿಸಿಕೊಂಡು ಸೇವೆ ಮಾಡಿದರೆ ಅದರಿಂದ ದೊರೆಯುವ ಆನಂದಕ್ಕೆ ಬೆಲೆ ಕಟ್ಟಲಿಕ್ಕೆ ಸಾಧ್ಯವಿಲ್ಲ ಎಂದರು.
ಲಯನ್ಸ್ ಕ್ಲಬ್‌ವು ಸಂಘಟನೆ, ಒಗ್ಗಟ್ಟನ್ನು ಕಲಿಸಿಕೊಡುತ್ತದೆ. ಸಮಾಜ ಸೇವೆಯಲ್ಲಿ ಲಯನ್ಸ್ ಕ್ಲಬ್‌ವು ವಿಶ್ವದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಸಂಘಟನೆಯಾಗಿದೆ ಎಂದರು.
೨೦೨೨-೨೩ನೇ ಸಾಲಿಗೆ ಅಧ್ಯಕ್ಷರಾಗಿರುವ ಡಾ. ಎಸ್.ಎಸ್. ಪಾಟೀಲ, ಕಾರ್ಯದರ್ಶಿ ಸಂಗಮೇಶ ಕೌಜಲಗಿ, ಖಜಾಂಚಿಯಾಗಿರುವ ಶಿವಬೋಧ ಯರಜರವಿ ಹಾಗೂ ಉಳಿದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ನಿರ್ಗಮಿತ ಅಧ್ಯಕ್ಷ ಬಾಲಶೇಖರ ಬಂದಿ ಪ್ರಾಸ್ತಾವಿಕ ಮಾತನಾಡಿ ೨೦೨೧-೨೨ನೇ ಸಾಲಿನಲ್ಲಿ ಸಸಿ ನೆಡುವುದು, ಉಚಿತ ಆರೋಗ್ಯ ತಪಾಸಣೆ, ಅನ್ನದಾಸೋಹ, ಕಲಾವಿದರಿಗೆ ಆರ್ಥಿಕ ಸಹಾಯಕ, ಪ್ರವಾಹ ಸಂತ್ರಸ್ಥರಿಗೆ ಸಹಾಯ, ಉಚಿತ ಪಶುಗಳ ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಒಟ್ಟು ೮೦ಕ್ಕೂ ಅಧಿಕ ಸಮಾಜಿಕ ಕಾರ್ಯಗಳನ್ನು ಮಾಡಿರುವುದು ಹೆಮ್ಮೆ ಎನಿಸುತ್ತದೆ ಎಂದರು.
ನೂತನ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಮಾತನಾಡಿ ಪ್ರಸಕ್ತ ಸಾಲಿನ ನನ್ನ ಒಂದು ವರ್ಷದ ಅಧಿಕಾರ ಅವಧಿಯಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ಶ್ರದ್ದೆಯಿಂದ ಮಾಡುವುದಾಗಿ ತಿಳಿಸಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅನ್ನದಾಸೋಹ ಸೇವೆಗೈದ ವೆಂಕಟೇಶ ಸೋನವಾಲಕರ, ಪುಲಕೇಶ ಸೋನವಾಲಕರ, ಡಾ. ಸಂಜಯ ಶಿಂಧಿಹಟ್ಟಿ, ಡಾ. ತಿಮ್ಮಣ್ಣ, ಡಾ. ರಾಜೇಂದ್ರ ಗಿರಡ್ಡಿ, ಶ್ರೀಶೈಲ್ ಲೋಕನ್ನವರ, ಸಂಗಮೇಶ ಕೌಜಲಗಿ, ಸಂದೀಪ ಮತ್ತು ಸುಪ್ರೀತ ಸೋನವಾಲಕರ, ವೆಂಕಟೇಶ ಪಾಟೀಲ, ಡಾ. ಸಚಿನ ಟಿ, ಡಾ. ಪ್ರಕಾಶ ನಿಡಗುಂದಿ ಅವರನ್ನು ಸನ್ಮಾನಿಸಿದರು.
ಪವಿತ್ರಾ ಕೊಣ್ಣೂರ ಪ್ರಾರ್ಥಿಸಿದರು, ಡಾ. ಅನಿಲ ಪಾಟೀಲ, ಡಾ. ಸಂಜಯ ಶಿಂಧಿಹಟ್ಟಿ ಪರಿಚಯಿಸಿದರು, ಈರಣ್ಣ ಕೊಣ್ಣೂರ ಸ್ವಾಗತಿಸಿದರು, ಶಿವಾನಂದ ಕಿತ್ತೂರ, ಮಹಾವೀರ ಸಲ್ಲಾಗೋಳ ನಿರೂಪಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page