ಶನಿವಾರ , ಜುಲೈ 20 2024
kn
Breaking News

ರಾಜ್ಯಸಭಾ ಸದಸ್ಯರಾಗಿ ಡಾ. ವಿರೇಂದ್ರ ಹೆಗ್ಗಡೆ ಪ್ರಮಾಣ ವಚನ ಸ್ವೀಕಾರ: ಸಂಸದ ಈರಣ್ಣ ಕಡಾಡಿ ಅಭಿನಂದನೆ

Spread the love

ಮೂಡಲಗಿ: ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿ, ಗ್ರಾಮೀಣಾಭಿವೃದ್ಧಿಯ ಹರಿಕಾರ ಪಧ್ಮ ವಿಭೂಷಣ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಂಸತ ಭವನದಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ ಶ್ರದ್ದಾಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಗುರುವಾರ ಜು.೨೧ ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಹೆಗ್ಗಡೆಯವರು ತಮ್ಮ ೨೦ ನೇ ವಯಸ್ಸಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ೨೧ ನೇ ಧರ್ಮಾಧಿಕಾರಿಯಾಗಿ ಪೀಠವನ್ನೇರಿದ ಬಹುಮುಖ ಅಭಿರುಚಿಯುಳ್ಳ ಹೆಗ್ಗಡೆಯವರು ಧಾರ್ಮಿಕ, ಸಾಮಾಜಿಕ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಯುವ ಜನರಿಗೆ ಸ್ವ ಉದ್ಯೋಗ ರೂಪಿಸುವುದು, ಮಹಿಳೆಯರ ಸಬಲೀಕರಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಧಾರ್ಮಿಕ ಕ್ಷೇತ್ರವನ್ನು ಸಮಾಜಮುಖಿಯನ್ನಾಗಿಸಿದ ಹೆಗ್ಗಳಿಕೆ ಅವರದು. ಧಾರ್ಮಿಕ ಶ್ರದ್ಧಾಕೇಂದ್ರವೊoದನ್ನು ಹೇಗೆ ಸ್ವಚ್ಛ, ಶಿಸ್ತು ಹಾಗೂ ಅಚ್ಚುಕಟ್ಟಾಗಿಡಬಹುದೆಂಬುದಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಒಂದು ಮಾದರಿ. ದೇಶದ ವಿವಿಧ ಭಾಗಗಳಿಂದ ಪ್ರತಿ ದಿನ ಸಾವಿರಾರು ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ವಿಶೇಷ ರಜಾದಿನಗಳು ಹಾಗೂ ವಾರಾಂತ್ಯಗಳಲ್ಲoತೂ ೪೦-೫೦ ಸಾವಿರಕ್ಕಿಂತಲೂ ಹೆಚ್ಚು ಭಕ್ತಾದಿಗಳು ಭೇಟಿಕೊಡುತ್ತಾರೆ. ಆದರೆ ದೇವಸ್ಥಾನದ ಪರಿಸರ, ಊಟದ ಹಾಲ್, ಅಡುಗೆ ಮನೆ, ಶೌಚಾಲಯ, ರಸ್ತೆ, ಲಾಡ್ಜ್ ಎಲ್ಲವನ್ನೂ ಅತ್ಯಂತ ಶುಚಿಯಾಗಿಡಲಾಗಿದೆ ದೇಶದ ಅತ್ಯಂತ ಶುಚಿಯಾದ ಧಾರ್ಮಿಕ ಕ್ಷೇತ್ರವೆಂದು ಗುರುತಿಸಲ್ಪಟ್ಟಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಪ್ರಸ್ತುತ ಸುಮಾರು ೭ ಲಕ್ಷ ಸ್ವಸಹಾಯ ಗುಂಪುಗಳು ಕಾರ್ಯಾಚರಿಸುತ್ತಿವೆ ಹಾಗೂ ೫೦,೦೫,೮೦೯ ಸದಸ್ಯರಿದ್ದಾರೆ. ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಪಡೆದ ಲಕ್ಷಾಂತರ ಸದಸ್ಯರು ಹೈನುಗಾರಿಕೆ, ಕೃಷಿ ಅಭಿವೃದ್ಧಿ, ಮಲ್ಲಿಗೆ ಕೃಷಿ, ಬಯೋಗ್ಯಾಸ್, ವ್ಯಾಪಾರ ವಹಿವಾಟು ಗಳನ್ನು ನಡೆಸಿ ಆರ್ಥಿಕ ಅಭಿವೃದ್ಧಿಯನ್ನು ಕಂಡಿದ್ದಾರೆ. ವಿಮುಕ್ತಿ ಕಾರ್ಯಕ್ರಮದಡಿಯಲ್ಲಿ ಇದುವರೆಗೆ ೧೫೫೦ ಕುಡಿತ ನಿವಾರಣಾ ಕ್ಯಾಂಪುಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾವಿರಾರು ಮಂದಿಯನ್ನು ಕುಡಿತದ ದುಶ್ಚಟದಿಂದ ಮುಕ್ತರನ್ನಾಗಿಸಲಾಗಿದೆ. ಅವರಿಗೆ ಸಮಾಜದಲ್ಲಿ ಗೌರವಯುತವಾಗಿ ಬದುಕುವ ಅವಕಾಶವನ್ನು ಕಲ್ಪಿಸಲಾಗಿದೆ. ಹೀಗೆ ಸಮಾಜ ಸೇವೆ, ಗ್ರಾಮೀಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಅವರು ಗಳಿಸಿರುವ ಅನುಭವವು ರಾಷ್ಟçಕ್ಕೆ ಮಾರ್ಗದರ್ಶಿಯಾಗಲಿ ಎಂದು ಸಂಸದ ಈರಣ್ಣ ಕಡಾಡಿ ಅವರು ಸಂತಸ ವ್ಯಕ್ತಪಡಿಸಿ ಶುಭ ಕೋರಿದರು.
ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ, ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವ ಅರ್ಜುನ್ ಮೇಘ್ವಾಲ್, ರಾಜ್ಯಸಭಾ ಸಂಸದ ಡಾ. ಕೆ. ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page