ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಮುಂದೆ ಜು.೮ ರ ಶುಕ್ರವಾರ ಬೆಳಗ್ಗೆ ೧೧ ಗಂಟೆಗೆ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಸಾಂಕೇತಿಕ ಧರಣಿ ನಡೆಸಲಿದ್ದಾರೆ.
ತಮ್ಮ ಮೇಲಿನ ದೂರಿಗೆ ಸಂಬoಧಿಸಿದoತೆ ಸ್ಪಷ್ಟವಾದ ಲಿಖಿತ ಉತ್ತರವನ್ನು ನೀಡಲು ವಿಳಂಭ ನೀತಿಯನ್ನು ಅನುಸರಿಸುವುದರ ಜೊತೆಗೆ ೪ ತಿಂಗಳ ನಂತರ ಪುನ: ದುರುದ್ದೇಶದಿಂದ ವರದಿಯಲ್ಲಿ ಸ್ಪಷ್ಟವಾದ ಅಭಿಪ್ರಾಯವಿಲ್ಲ ಎಂಬ ಪತ್ರವನ್ನು ಮಾಡುವುದು ಹಾಗೂ ನಿಯಮ ಮೀರಿ ವಿಚಾರಣಾಧಿಕಾರಿಗಳಿಗೆ ಹಾಗೂ ಮಂಡನಾಧಿಕಾರಿಳನ್ನು ನೇಮಕ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮತ್ತು ದೂರಿಗೆ ಸಂಬoಧಿಸಿದoತೆ ಸ್ಪಷ್ಟವಾದ ಲಿಖಿತ ಉತ್ತರ ನೀಡುವಂತೆ ಒತ್ತಾಯಿಸಿ ಉಪನಿರ್ದೇಶಕರ ಕಚೇರಿಯ ಮುಂದೆ ಧರಣಿ ನಡೆಸಲಿದ್ದಾರೆ.
