ಸೋಮವಾರ , ಸೆಪ್ಟೆಂಬರ್ 9 2024
kn
Breaking News

ಮೂಡಲಗಿಯ ಕೊಡುಗೈ ದಾನಿ ದಿ.ಕೆ.ಎಚ್.ಸೋನವಾಲ್ಕರ 17ನೇ ಪುಣ್ಯಸ್ಮರಣೆ

Spread the love

ಮೂಡಲಗಿ: ಶಿಕ್ಷಣ ಕ್ಷೇತ್ರಕ್ಕೆ ಕೆ.ಎಚ್.ಸೋನವಾಲ್ಕರ
ಅವರ ಕೊಡುಗೆ ಅಪಾರವಾದುದು ಮತ್ತು ಅವರ
ಸಾಮಾಜಿಕ ಕಳಕಳಿ ಇತರರಿಗೆ ಮಾದರಿಯಾಗಿದೆ
ಎಂದು ಮೂಡಲಗಿ ಬಿಇಒ ಅಜೀತ ಮನ್ನಿಕೇರಿ
ಹೇಳಿದರು.

ಪಟ್ಟಣದ ಕೊಡುಗೈ ದಾನಿ ಹಾಗೂ ಸಾಮಾಜಿಕ
ಕಳಕಳಿಯುಳ್ಳ ಹಾಗೂ ಮೂಡಲಗಿ ಸರಕಾರಿ ಪ್ರೌಢ
ಶಾಲೆಯ ಭೂ ದಾನಿ ದಿ.ಕೆ.ಎಚ್.ಸೋನವಾಲ್ಕರ 17
ನೇ ಪುಣ್ಯಸ್ಮರಣೆ ನಿಮಿತ್ತ ಸಮುದಾಯ ಆರೋಗ್ಯ
ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ
ಹಾಗೂ ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಅವರಿಂದ
ಕೆ.ಎಚ್.ಸೋನವಾಲ್ಕರ ಸರಕಾರಿ ಪ್ರೌಢ ಶಾಲೆಯ
ಆವರಣದಲ್ಲಿ ಸಸಿ ನೆಡುವುದು ಮತ್ತು ಶಾಲೆಯಲ್ಲಿ
ಕೆ.ಎಚ್.ಸೋನವಾಲ್ಕರ ಪ್ರತಿಮೆಗೆ ಹಾಗೂ ಭಾವ
ಚಿತ್ರಕ್ಕೆ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ,
ಕೆ.ಎಚ್.ಸೋನವಾಲ್ಕರ ಅವರ ಹೆಸರಿನಲ್ಲಿ ಅವರ ಪತ್ನಿ
ಲಕ್ಷ್ಮೀಬಾಯಿ ಸೋನವಾಲ್ಕರ ಅವರು ಮೂಡಲಗಿ
ಸರಕಾರಿ ಪ್ರೌಢ ಶಾಲೆಗೆ ಬೆಲೆ ಬಾಳುವ ಎರಡು ಏಕರೆ
ಭೂ ಖರೀದಿಸಿ ದಾನ ಮಾಡಿದ್ದರಿಂದ ಇಂದು ಸುಸಜ್ಜಿತ
ಕಟ್ಟಡದಲ್ಲಿ ಸುಮಾರು ಎಂಟು ನೂರು ವಿದ್ಯಾರ್ಥಿಗಳು
ವಿದ್ಯಾರ್ಜನೆ ಮಾಡಲು ಅನುಕೂಲವಾಗಿದೆ ಎಂದರು.
ನಿವೃತ್ತ ಗೃಂಥಪಾಲಕ ಬಾಲಶೇಖರ ಬಂದಿ ಮಾತನಾಡಿ,
ಕೆ.ಎಚ್.ಸೋನವಾಲ್ಕರ ಅವರು ಮೂಡಲಗಿಯಲ್ಲಿ
ನಡೆಯುವ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಎಲ್ಲ
ಕಾರ್ಯಕ್ರಮಗಳಿಗೆ ತಮ್ಮ ಕಡೆ ಬಂದವರಿಗೆ
ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ.
ಕೊಡುಗೈ ದಾನಿಗಳೆಂದು ಗುರುತಿಸಿಕೊಂಡಿದ್ದ ಅವರು
ನಮ್ಮನ್ನು ಅಗಲಿ 17 ವರ್ಷ ಗತಿಸಿದರು ಅವರ ಪ್ರವೃತ್ತಿ
ಮತ್ತು ಸಂಸ್ಕೃತಿಯನ್ನು ಅವರ ಕುಟುಂಬದವರು
ಮುಂದುವರಿಸಿಕೊಂಡಿರುವದು ವಿಶೇಷವಾಗಿದೆ ಮತ್ತು
ಮೂಡಲಗಿಯಲ್ಲಿ ಸರಕಾರಿ ಪ್ರೌಢ ಶಾಲೆ ಒಂದು ಜ್ಞಾನ
ದೇಗುಲ ರೀತಿಯ ನಿರ್ಮಾಣವಾಗಲಿಕ್ಕೆ ಕೆ.ಎಚ್.ಎಸ್
ಕುಟುಂಬ ಕಾರಣ, ಕಲ್ಯಾಣ ಮಂಟಪ ಸೇರಿದಂತೆ
ಅನೇಕ ಕಾರ್ಯಗಳಿಗೆ ದಾನ ಧರ್ಮ ಮಾಡಿರುವ
ಅವರ ಪುಣ್ಯಸ್ಮರಣೆ ಆಚರಣೆ ಮಾಡುತ್ತಿರುವುದು
ಶ್ಲಾಘನೀಯವಾದುದು ಎಂದರು.
ಈ ಸಂದರ್ಭದಲ್ಲಿ ಮೂಡಲಗಿ ಪುರಸಭೆ ಅಧ್ಯಕ್ಷ
ಹನಮಂತ ಗುಡ್ಡಮನಿ, ಸಿ.ಪಿ.ಆಯ್ ವೆಂಕಟೇಶ
ಮುರನಾಳ, ಪಿಎಸ್‌ಐ ಎಚ್.ವಾಯ್.ಬಾಲದಂಡಿ,
ಪುರಸಭೆ ಸದಸ್ಯ ಸಂತೋಷ ಸೋನವಾಲಕರ,
ಡಾ.ಜಗದೀಶ ಜಿಂಗಿ, ಡಾ.ದೀಪಾ ಮಾಚಪ್ಪನವರ,
ಚಿಕ್ಕೋಡಿ ಡೈಟ್ ಪ್ರಾಚಾರ್ಯ ಮೋಹನ ಜೀರಿಗಿಹಾಳ,
ಮುಖ್ಯೋಪಾಧ್ಯಾಯ ಎಮ್.ಎಮ್.ದಬಾಡಿ,
ಮಹಾದೇವ ಶೆಕ್ಕಿ, ಸಂತೋಷ ಪಾರ್ಶಿ, ಈರಪ್ಪ
ಢವಳೇಶ್ವರ, ಅನ್ವರ ನದಾಫ್, ಬಸು ಝಂಡೇಕುರಬರ,
ಪಾಂಡು ಮಹೇಂದ್ರಕರ, ಶಿವಲಿಂಗ ಹಾದಿಮನಿ,
ವೆಂಕಟೇಶ ಸತರಡ್ಡಿ, ಕೃಷ್ಣಾ ಗಾಡಿವಡ್ಡರ, ರಾಜು
ಭಜಂತ್ರಿ, ಯೇಸು ಪರಸನ್ನವರ, ಪ್ರಶಾಂತ ಸಂಪಗಾವಿ,
ಶಿವಲಿಂಗ ಪಾಟೀಲ, ಅಲ್ತಾಫ ಹವಾಲ್ದಾರ, ವಿಠಲ
ಪಾಟೀಲ, ಇರಾದ ಪಿರಜಾದೆ, ನವೀನ್ ನಿಶಾನಿಮಠ,
ಶಿಕ್ಷಕರು ಮತ್ತಿತರರು ಇದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page