ಮೂಡಲಗಿ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಜೊತೆಗೆ ಸರ್ಕಾರಿ ಶಾಲೆಗಳು ಅಭಿವೃದ್ದಿ ಹೊಂದಲು ದಾನಿಗಳ ನೆರವು ಅತ್ಯವಶ್ಯವಾಗಿದೆ ಎಂದು ಯುವ ಮುಖಂಡ ಇಜಾಜ ಆಹ್ಮದ ಕೊಟ್ಟಲಗಿ ಹೇಳಿದರು.
ಇಲ್ಲಿನ ಸರ್ಕಾರಿ ಉರ್ದು ಫ್ರೌಡ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟಬುಕ್ ಮತ್ತು ಪೆನ್ನು ವಿತರಿಸಿ ಮಾತನಾಡಿದ ಅವರು, ಇದೀಗ ನಮ್ಮ ಸ್ನೇಹಿತ ಬಳಗದೊಂದಿಗೆ ಪಟ್ಟಣದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ,ಕನ್ನಡ ಗಂಡು ಮಕ್ಕಳ ಶಾಲೆ,ಹೆಣ್ಣು ಮಕ್ಕಳ ಶಾಲೆ ಹಾಗೂ ಸಮೀಪದ ಮುನ್ಯಾಳ ಶಾಲೆಗಳಿಗೆ ಬೆಟ್ಟಿ ನೀಡಿ ಅಲ್ಲಿನ ಎಲ್ಲ ವಿದ್ಯಾರ್ಥಿಗಳಿಗೂ ನೋಟ್ಬುಕ್,ಪೆನ್ನು ವಿರಿಸಲಾಗಿದೆ.ಮಕ್ಕಳು ಇದರ ಸದುಪಯೋಗ ಪಡೆದು ಆಸಕ್ತಿಯಿಂದ ಓದಿ ತಂದೆ,ತಾಯಿ,ಗುರುವಿನ ಹಾಗೂ ದೇಶದ ಕೀರ್ತಿ ಹೆಚ್ಚಿಸುವಲ್ಲಿ ಶ್ರಮಿಸಬೇಕು. ನಿವೆಲ್ಲ ನಿಮ್ಮ ಗುರಿ ಸಾಧಿಸಿ ಇತರರಿಗೆ ಸ್ಪೂರ್ತಿಯಾಗಬೇಕು ಎಂದರು.
ಈ ವೇಳೆ ಶಿಕ್ಷಕ ಎ ವಿ ತಹವೀಲದಾರ ಅವರು ಮಾತನಾಡಿ, ಇಜಾಜ ಕೊಟ್ಟಲಗಿ ಮತ್ತು ಅವರ ಸ್ನೇಹಿತರಾದ ಮೆಹಬೂಬ ಬಾಗವಾನ, ಅಸ್ಲಂ ನದಾಫ್ ಇವರು ಸೇರಿ ೬೭೫ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಪೆನ್ನು ಮತ್ತು ನೋಟ್ಬುಕ್ ವಿತರಿಸಿದ ಅವರ ಸೇವಾ ಕಾರ್ಯ ಶ್ಲಾಘನೀಯವಾಗಿದೆ ಎಂದರಲ್ಲದೇ ಶಿಕ್ಷಣ ಪ್ರೇಮಿಗಳು ವಿದ್ಯಾರ್ಥಿಗಳಿಗೆ ನೆರವಾಗುವಂತಹ ಇಂತಹ ಕಾರ್ಯಕ್ಕೆ ಮುಂದಾಗಿ ಪ್ರೋತ್ಸಾಹ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸ್ನೇಹಿತ ಬಳಗದ ಜಾವೀದ ಬೇಪಾರಿ, ಮೋಹಿನ ಚೌದರಿ, ಸಾಜೀದ ಪೀರಜಾದೆ, ಅಮನ ಸರ್ಕಾವತ, ಸಮದ ಮೋಮಿನ, ಬಂದೆನವಾಜ ತುಂಬಗಿ ಹಾಗೂ ಎಸ್ ಡಿ ಎಮ್ ಸಿ ಅಧ್ಯಕ್ಷ ಇಮ್ತಿಯಾಜ ಕಲಾರಕೊಪ್ಪ ಮತ್ತು ಶಾಲಾ ಶಿಕ್ಷಕ ವೃಂದದವರು ಇದ್ದರು.
